ಪುತ್ತೂರ್ದ ಬಂಟ ಜವನೆರೆಗೊಬ್ಬು ಬಂಟ್ಸ್ ಪ್ರೀಮಿಯರ್ ಲೀಗ್‌ನ ಸಮಾರೋಪ

0

ಪುತ್ತೂರು: ಯುವ ಬಂಟರ ಸಂಘ ಪುತ್ತೂರು ಇದರ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ಬಂಟರ ಸಂಘ ಇವರ ಮಾರ್ಗದರ್ಶನದಲ್ಲಿ ಮಹಿಳಾ ಬಂಟರ ಸಂಘ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಸಹಕಾರದೊಂದಿಗೆ ದಿ. ಎ ಜೀವನ್ ಭಂಡಾರಿ ಸಿದ್ಯಾಳ ಸ್ಮರಣಾರ್ಥ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಪುತ್ತೂರ್ದ ಬಂಟ ಜವನೆರೆಗೊಬ್ಬು ಬಂಟ್ಸ್ ಪ್ರೀಮಿಯರ್ ಲೀಗ್-2024 ಇದರ ಸಮಾರೋಪ ಸಮಾರಂಭವು ಜ.7ರಂದು ಸಂಜೆ ನಡೆಯಿತು.


ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸದಸ್ಯತನ ಪಡೆದು ಪದಾಧಿಕಾರಿಗಳು ಆಗಬೇಕು. ಯುವಕರೆಲ್ಲರೂ ಸಂಘದ ಸದಸ್ಯರಾಗಬೇಕು. ಸಂಘಟನಾತ್ಮಕ ಗುಣಗಳನ್ನು ರೂಡಿಸಿಕೊಳ್ಳಬೇಕು. ಸಂಘದ ಪದಾಧಿಕಾರಿಗಳಾಗಿ ಹೊರಹೊಮ್ಮಬೇಕು ಎಂದರು. ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಈ ವರ್ಷದ ಕ್ರಿಕೆಟ್ ಪಂದ್ಯಾಟ ಹೊಸ ರೀತಿಯಲ್ಲಿ ಮೂಡಿಬಂದಿದೆ. ಹೊಸ ಹೊಸ ತಂಡದ ಮೂಲಕ ಬರುವ ಕ್ರೀಡಾಪಟುಗಳು ಯುವ ಬಂಟರ ಸಂಘದ ಸದಸ್ಯರಾಗಬೇಕು ಎಂದರು. ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈಯವರ ನೇತೃತ್ವದಲ್ಲಿ ಈ ವರ್ಷದ ಪಂದ್ಯಾಟ ಅಂತ್ಯಂತ ಯಶಸ್ವಿ ನಡೆದುಬಂದಿದೆ. ಪ್ರತಿ ವರ್ಷ ವಿಜೃಂಭಣೆಯಿಂದ ನಡೆಸುವ ಮೂಲಕ ಇತರ ಸಂಘಗಳಿಗೆ ಮಾದರಿಯಾಗಲಿ ಎಂದರು.

ಸನ್ಮಾನ:
ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ನೇಮಕಗೊಂಡ ಯುವ ಬಂಟರ ಸಂಘದ ಮಾಜಿ ಕಾರ್ಯದರ್ಶಿ ರೂಪರೇಖಾ ಆಳ್ವ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಪಂದ್ಯಾಟದಲ್ಲಿ ರೆಫ್ರಿಯಾಗಿ ಸಹಕರಿಸಿದ ಕಣ್ಣನ್ ನಾಯರ್‌ನ್ನು ಗೌರವಿಸಲಾಯಿತು.

ಹಗ್ಗಜಗ್ಗಾಟದ ಮಹಿಳಾ ವಿಭಾಗದಲ್ಲಿ ಮಾಧವೀ ರೈ ತಂಡ(ಪ್ರ), ಅನುಶ್ರೀ ತಂಡ(ದ್ವಿ), ಪುರುಷರ ವಿಭಾಗದಲ್ಲಿ ಕುಂಬ್ರ ದುರ್ಗಾಪ್ರಸಾದ್ ರೈ ತಂಡ(ಪ್ರ), ರೋಹಿತ್ ತಂಡ(ದ್ವಿ), ಕ್ರಿಕೆಟ್ ಪಂದ್ಯಾಟದಲ್ಲಿ ಬಂಟ್ಸ್ ಬೆಳಿಯೂರುಕಟ್ಟೆ ತಂಡ(ಪ್ರ) ಹಾಗೂ ಸಿಝ್ಲರ್ ಪುತ್ತೂರು(ದ್ವಿ) ಸ್ಥಾನ ಪಡೆದುಕೊಂಡಿದ್ದಾರೆ. ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ಬಂಟರ ಸಂಘದ ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವ, ನವೀನ್ ರೈ ಪಂಜಳ, ಸಂದೇಶ್ ರೈ, ಮಾಧವೀ ಮನೋಹರ್, ರೂಪರೇಖ ಆಳ್ವಾ, ದಯಾನಂದ ರೈ ಕೋರ್ಮಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here