ಪುತ್ತೂರು: ನಡುಬೈಲು ಕಿಟ್ಟಣ್ಣ ಶೆಟ್ಟಿಯವರ ಪತ್ನಿ ಬೋಳೋಡಿಗುತ್ತು ಪುಷ್ಪವತಿ ಶೆಟ್ಟಿ ಮೇಗಿನಇಳಂತಾಜೆರವರ ಉತ್ತರ ಕ್ರಿಯೆಯು ದ.10ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯ ನೇತ್ರಾವತಿ ಸಮುದಾಯ ಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಜರಗಿದ ಶ್ರದ್ಧಾಂಜಲಿ ಸಲ್ಲಿಸುವ ನುಡಿನಮನ ಕಾರ್ಯಕ್ರಮದಲ್ಲಿ ಸಹಕಾರ ರತ್ನ ದಂಬೆಕಾನ ಸದಾಶಿವ ರೈಯವರು ಮಾತನಾಡಿ ಆದರ್ಶ ಗೃಹಣಿಯಾಗಿ ತನ್ನ ಬದುಕಿನಲ್ಲಿ ಸರಳತೆ, ಸಜ್ಜನಿಕೆಯ ಮೂಲಕ ಮಾದರಿ ವ್ಯಕ್ತಿತ್ವವನ್ನು ಪುಷ್ಪವತಿ ಶೆಟ್ಟಿಯವರು ಪಾಲಿಸಿಕೊಂಡು ಬರುತ್ತಿದ್ದರು.
ಸಂಸಾರ ಮತ್ತು ಸಮಾಜದಲ್ಲಿ ಎಲ್ಲರ ಗೌರವ ಮತ್ತು ವಿಶ್ವಾಸವನ್ನುಗಳಿಸಿಕೊಂಡಿರುವ ಪುಷ್ವವತಿ ಶೆಟ್ಟಿಯವರ ಸಂಸಾರ ಅತ್ಯಂತ ಸುಂದರವಾದ ಬದುಕು ಆಗಿತ್ತು. ಇವರ ಆದರ್ಶ ಜೀವನ ಸಮಾಜಕ್ಕೆ ಮಾದರಿ ಎಂದರು.
ಬೋಳೋಡಿಗುತ್ತು ಪುಷ್ಪವತಿ ಶೆಟ್ಟಿಯವರ ಪುತ್ರರಾದ ಭಾಸ್ಕರ ಶೆಟ್ಟಿ, ಜಯರಾಮ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಪುತ್ರಿ ಜಯಶ್ರೀ ವಿನಯ ಕುಮಾರ ರೈ, ಅಳಿಯ ವಿನಯ ಕುಮಾರ ರೈ, ಸೊಸೆಯಂದಿರಾದ ಆಶಾಕಿರಣ್ ಭಾಸ್ಕರ ಶೆಟ್ಟಿ, ಗುಣಶೀಲ ಜಯರಾಮ ಶೆಟ್ಟಿ, ವಿದ್ಯಾ ಸುಭಾಶ್ಚಂದ್ರ ಶೆಟ್ಟಿ, ಮೊಮ್ಮಕ್ಕಳಾದ ಸಾಯಿ ಪೂರ್ಣಿಮ ಭಾಸ್ಕರ ಶೆಟ್ಟಿ, ಚಿನ್ಮಯ ಭಾಸ್ಕರ ಶೆಟ್ಟಿ ಆದಿತ್ಯ ವಿನಯ ಕುಮಾರ ರೈ, ಅದಿತಿ ವಿನಯ ಕುಮಾರ ರೈ ಭಾರ್ಗವ ಜಯರಾಮ ಶೆಟ್ಟಿ, ಅನನ್ಯ ಜಯರಾಮ ಶೆಟ್ಟಿ, ದಿವಿತ್ ಸುಭಾಶ್ಚಂದ್ರ ಶೆಟ್ಟಿರವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಮುಖಂಡರುಗಳು, ಜನಪ್ರತಿನಿಧಿಗಳು ಸೇರಿದಂತೆ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.