ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕ್ಲಿಪ್ಸನ್, ಮೆಲ್ಸನ್ ಮೊರಾಸ್ ಸಹೋದರರಿಗೆ ಪದಕ

0

ಪುತ್ತೂರು: ಮಂಗಳೂರಿನಲ್ಲಿ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ವತಿಯಿಂದ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕ್ಲಿಪ್ಸನ್ ಮೊರಾಸ್ ಹಾಗೂ ಮೆಲ್ಸನ್ ಮೊರಾಸ್ ಸಹೋದರರು ತಲಾ ಎರಡು ಪದಕಗಳೊಂದಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸ್ಪರ್ಧೆಯ 14ರ ವಯೋಮಾನದಲ್ಲಿ ಕ್ಲಿಪ್ಸನ್ ಮೊರಾಸ್ ರವರು ಕುಮಿಟೆಯಲ್ಲಿ ಪ್ರಥಮ, ಕಟಾದಲ್ಲಿ ದ್ವಿತೀಯ ಪದಕವನ್ನು ಪಡೆದಿರುತ್ತಾರೆ. 12ರ ವಯೋಮಾನದಲ್ಲಿ ಮೆಲ್ಸನ್ ಮೊರಾಸ್ ರವರು ಕಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ಈ ಈರ್ವರು ಸಹೋದರರು ಅನುಕ್ರಮವಾಗಿ ದರ್ಬೆ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ಹಾಗೂ ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾಗಿದ್ದು ಇವರು ಮಾಸ್ಟರ್ ಪ್ಲಾನರಿಯ ಉದ್ಯೋಗಿ ಕ್ಲಿಫರ್ಡ್ ಮೊರಾಸ್ ಹಾಗೂ ಪ್ರಮೀಳಾ ಡಿ’ಸೋಜರವರ ಪುತ್ರರಾಗಿದ್ದಾರೆ. ಇವರುಗಳಿಗೆ ಸೆನ್ಸಾಯಿ ಮಾಧವ ಅಳಿಕೆ, ರೋಹಿತ್ ಖ.ಓ , ನಿಖಿಲ್ ಏ.ಖಿರವರೊಂದಿಗೆ ತರಬೇತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here