ಆರೋಗ್ಯವಿಲ್ಲವೆಂದರೆ ಆದಾಯವೆಲ್ಲಾವೂ ಗೌಣ – ಶಶಿ ಕುಮಾರ್ ಬಾಲ್ಯೊಟ್ಟು
ಪುತ್ತೂರು: ಉಚಿತ ಶಿಬಿರವನ್ನು ನಮ್ಮೆಲ್ಲರ ಆರೋಗ್ಯ ಕಾಪಾಡೋ ಹಿತದೃಷ್ಟಿಯಿಂದ ಆಯೋಜನೆ ಮಾಡಲಾಗಿದೆ. ಕೆಲ ಸಮಯದ ಹಿಂದೆ ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಇದೇ ಶಿಬಿರದಲ್ಲೂ ಕೂಡ ನಾನು ಪಾಲ್ಗೊಂಡಿದ್ದೆ , ಕೇವಲ 15 ದಿನಗಳಲ್ಲಿ ಅಲ್ಲಿ ಥೆರಪಿ ಪಡೆದಿರುವಂಥಹ ಶಿಬಿರಾರ್ಥಿಗಳು ತಮ್ಮ ಸಮಸ್ಯೆ ಗಳಿಂದ ಸಂಪೂರ್ಣ ನಿರಾಳರಾಗಿದ್ದಾರೆಂಬುದನ್ನು ಕೂಡ ಒರ್ವ ಶಿಬಿರಾರ್ಥಿಯಿಂದ ಲೇ ತಿಳಿದುಕೊಂಡಿದ್ದೇನೆ. ಹಲವೂ ಬಗೆಯ ಸಮಸ್ಯೆಗಳೂ ಕೂಡ ಕೇವಲ 15 ದಿನಗಳ ಥೆರಪಿ ಮೂಲಕ ನಿಯಂತ್ರಣಕ್ಕೆ ಬರುತ್ತದೆ. ಆದರಿಂದ ತಾವೆಲ್ಲರೂ ಈ ಶಿಬಿರದಲ್ಲಿ ಪಾಲ್ಗೊಂಡು , ಆರೋಗ್ಯ ವನ್ನು ವೃದ್ದಿಸಿರಿಯೆಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ನಿರ್ದೇಶಕರಾದ ಶಶಿ ಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಜ.11ರಂದು ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಬೆಟ್ಟಂಪಾಡಿ ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಪುತ್ತೂರು
ಇವುಗಳ ಜಂಟಿ ಆಶ್ರಯದಲ್ಲಿ ಜ.25ರವರೆಗೆ, ಸುಮಾರು 15 ದಿನಗಳ ಕಾಲ ಉಚಿತ ಪೂಟ್ ಫಲ್ಸ್ ಥೆರಪಿ ಶಿಬಿರದ ಉದ್ಘಾಟನೆಯನ್ನು ದೀಪ ಪ್ರಜ್ವಲನೆ ಮೂಲಕ ನೆರವೇರಿಸಿ ಮಾತನಾಡಿದ ಅವರು, ನಾವೆಲ್ಲರೂ ತಿಂಗಳಲ್ಲಿ ಔಷಧಾಲಯಗಳಿಗೆ ಖರ್ಚು ಮಾಡುವ ಹಣವನ್ನೆ ಕೂಡಿಸಿ , ಆದರಿಂದಲೇ ಆರೋಗ್ಯ ಕಾಪಾಡೋ ಯಂತ್ರಗಳ ಖರೀದಿ ಮಾಡಬಹುದೆಂದು ಹೇಳಿ, ಜೀವನದಲ್ಲಿ ಸಂಪಾದನೆ ಏಷ್ಟಿದ್ದರೂ ಕೂಡ ಆರೋಗ್ಯ ವಿಚಲಿತಗೊಂಡರೆ ಯಾವುದೇ ಸಂಪಾದನೆಗೂ ಗಮ್ಯ ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿ , ಎಲ್ಲರ ಸಹಕಾರದೊಂದಿಗೆ ಶಿಬಿರ ಪರಿಪೂರ್ಣ ವಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ಇರ್ದೆ -ಬೆಟ್ಟಂಪಾಡಿ ಪ್ರಾ.ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್.ರಂಗನಾಥ ರೈ ವಹಿಸಿದರು.
ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಇದರ ಮುಖ್ಯಸ್ಥರಾಗಿರುವ ಕೆ. ಪ್ರಭಾಕರ ಸಾಲ್ಯಾನ್ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ,ಬೆಟ್ಟಂಪಾಡಿ ಮಂಡಲ ಪಂಚಾಯತ್ ನ ಮಾಜಿ ಮಂಡಲ ಪ್ರಧಾನರಾದ ಪರಮೇಶ್ವರ ಭಟ್ ಕೋನಡ್ಕ ಹಾಗೂ ಇರ್ದೆ – ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಹಾಜರಿದ್ದರು.