ಇಂದು ಜನವರಿ12 : ಸ್ವಾಮಿ ವಿವೇಕಾನಂದರ ಜನ್ಮದಿನ ರಾಷ್ಟ್ರೀಯ ಯುವ ದಿನ

0

ನಮ್ಮ ಭಾರತದೇಶಉತ್ತಮ ಸಂಸ್ಕೃತಿಯ ನೆಲೆಬೀಡು ಈ ಪುಣ್ಯಭೂಮಿ ಹಲವಾರು ಪುಣ್ಯ ಪುರುಷರಿಗೆ ಸಮಾಜ ಸುಧಾರಕರಿಗೆ ಜನ್ಮ ನೀಡಿದೆ. ಭಾರತದಲ್ಲಿ ಸಾಮಾಜಿಕ, ಧಾರ್ಮಿಕಜಾಗೃತಿಯನ್ನು ಮೂಡಿಸುವುದರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು.

ಪ್ರತಿ ವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಜನ್ಮದಿನ ಇಂದು. ವಿವೇಕಾಂನದರ ಮೊದಲ ಹೆಸರು ನರೇಂದ್ರನಾಥದತ್ತ ಅಧ್ಯಯನದಲ್ಲಿ ಏಕಾಗ್ರತೆ ಜೊತೆಗೆ ಎಲ್ಲವನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ಪದವಿ ಪರೀಕ್ಷೆ ಪಾಸು ಮಾಡಿ ಕಾನೂನು ಅಭ್ಯಾಸಕ್ಕೆ ಸೇರಿದರು.

ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದ ಇವರು ನಂತರ ಸನ್ಯಾಸ ಸ್ವೀಕರಿಸಿ ಸ್ವಾಮಿ ವಿವೇಕಾನಂದರು. ನಂತರ ಇಡೀ ಭರತ ಖಂಡವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ಕನ್ಯಾಕುಮಾರಿ ಭೂಶಿರದಲ್ಲಿ ಧ್ಯಾನಸ್ಥರಾಗಿ ದೇಶ ಸೇವೆಗೆ ಪಣತೊಟ್ಟರು. 1893ರಲ್ಲಿ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಅಮೇರಿಕಾದ ಸಹೋದರ, ಸಹೋದರಿಯರೇ ಎಂಬ ನಲ್ಮೆಯ ನುಡಿಯಿಂದ ಮಾತು ಪ್ರಾರಂಭಿಸಿ. ತನ್ನ ವಿದ್ವತ್ ಪೂರ್ಣ ಭಾಷಣದಿಂದ ವಿಶ್ವ ವಿಖ್ಯಾತರಾದರು. ನಂತರ ವಿದೇಶಗಳಲ್ಲಿ ಸಂಚರಿಸಿ ಚರ್ಚಾಸಭೆಗಳಲ್ಲಿ ಭಾಗವಹಿಸಿ 1897ರಲ್ಲಿ ಭಾರತಕ್ಕೆ ಬಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಉಪನ್ಯಾಸ, ಯಾತ್ರೆಗಳನ್ನು ನಡೆಸಿ ಯುವಜನರಲ್ಲಿ ಜಾಗೃತಿ ಮೂಡಿಸಿದರು.

ಜನರ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಮಾಡಲು ಶ್ರೀ ರಾಮಕೃಷ್ಣ ಮಿಷನ್‌ ಸಂಸ್ಥೆಯನ್ನು ಸ್ಥಾಪಿಸಿದರು. ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿಯೂ ಪ್ರಮುಖ ಪಾತ್ರವಹಿಸಿ, ಯುವಜನರಲ್ಲಿ ಸ್ಫೂರ್ತಿ ತುಂಬಿದರು.ಸ್ತ್ರೀಯರ ಬಗ್ಗೆ ಅಪಾರಕಾಳಜಿ ಹೊಂದಿದ್ದರು. ಸ್ವಾಮಿ ವಿವೇಕಾನಂದರ ಶೈಕ್ಷಣಿಕ, ಆಧ್ಯಾತ್ಮಿಕ ವೈಜ್ಞಾನಿಕ ವಿಚಾರಧಾರೆಗಳು ಚಿಂತನೆಗಳು ಸರ್ವಕಾಲಕ್ಕೂ ಮಾನ್ಯವಾದುದು. ನಮ್ಮೆಲ್ಲರ ಬದುಕಿಗೆ ದಾರಿ ದೀಪವಾಗಿದೆ.ಸ್ವಾಮಿ ವಿವೇಕಾನಂದರು 1902 ಜುಲೈ 4 ರಂದು ತಮ್ಮ 39ನೇ ವಯಸ್ಸಿನಲ್ಲಿ ದೈವದೀನರಾದರು.

ರಾಷ್ಟೀಯ ಯುವದಿನ : ಸ್ವಾಮಿ ವಿವೇಕಾನಂದರ ಜನ್ಮದಿನದ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವದಿನದ ಮುಖ್ಯಉದ್ದೇಶ ಮತ್ತು ಆಚರಣೆಗೆ ಕಾರಣವೆನೆಂದರೆ ಯುವಜನರಿಗೆ ವೇದಿಕೆಯನ್ನು ಸೃಷ್ಟಿಸುವುದು ಮತ್ತು ಜೀವನದ ವಲಯಗಳಲ್ಲಿ ಅವರ ಸಮಸ್ಯೆಗಳನ್ನು ಪರಿಹರಿಸುವುದು. ಹಾಗೂ ಸ್ವಾಮಿ ವಿವೇಕಾನಂದರ ತತ್ವಗಳು ಆದರ್ಶಗಳನ್ನು ಭಾರತದ ಯುವ ಜನತೆಗೆ ಸ್ಫೂರ್ತಿಯ ಮೂಲವಾಗಲಿ ಎನ್ನುವುದು ಆಶಯವಾಗಿದೆ. ಸ್ವಾಮಿ ವಿವೇಕಾನಂದರಿಗೆ ಯುವ ಶಕ್ತಿಯ ಮೇಲೆ ಅಪಾರವಾದ ನಂಬಿಕೆ ಹಾಗೂ ಯುವಶಕ್ತಿಗಿಂತ ಮಿಗಿಲಾದುದು ಯಾವುದು ಇಲ್ಲ ಎನುವುದು, ಭಾರತೀಯ ಯುವಜನತೆ ಸ್ವಾಮಿ ವಿವೇಕಾನಂದರನ್ನು ಗುರುವಿನಂತೆ ನೋಡಿಕೊಂಡರು.

ಯುವಜನತೆಗೆ ನಮ್ಮೆಲ್ಲರ ಪ್ರೀತಿಯ ಕರೆ ಏನೆಂದರೆಉತ್ತಮಜೀವನ ಮೌಲ್ಯಗಳನ್ನು ತಮ್ಮಜೀವನದಲ್ಲಿ ಅಳವಡಿಸಿಕೊಳ್ಳಿರಿ. ಆರೋಗ್ಯಕರ ಜೀವನದತ್ತ ಗಮನವಿರಲಿ. ವಿವೇಕಾನಂದರ ತತ್ವ, ಆದರ್ಶ ಸಂದೇಶ ನುಡಿಮುತ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳೋಣ ರಾಷ್ಟçಕ್ಕೆ ಸಮಾಜಕ್ಕೆ ನಾವೆಲ್ಲರೂ ದಾರಿ ದೀಪವಾಗೋಣ. ಬಡವರ ನೊಂದವರ ಬಾಳಿಗೆ ಬೆಳಕಾಗೋಣ. ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಯುವ ಸಮುದಾಯಕ್ಕೆ ಹೃದಯ ಪೂರ್ವಕ ಶುಭಹಾರೈಕೆಗಳು. ಸಮಾಜದಲ್ಲಿ ಮಹಾನ್ ಶಕ್ತಿಯಾಗಿ ಉತ್ತಮ ಭವಿಷ್ಯವನ್ನು ನಿಮಗೆಲ್ಲರಿಗೂ ದೇವರು ಕರುಣಿಸಲಿ ಎನ್ನುತ್ತಾ ಸ್ವಾಮಿ ವಿವೇಕಾನಂದರಜನ್ಮದಿನದ ಶುಭಾಶಯಗಳು.

LEAVE A REPLY

Please enter your comment!
Please enter your name here