ನಾಳೆ (ಜ.13) ಸುದಾನ ಶಾಲಾ ಆವರಣದಲ್ಲಿ ” ಸುನಾದ’ ಸಂಗೀತೋತ್ಸವ -2024

0

ಪುತ್ತೂರು : ಸುನಾದ ಸಂಗೀತ ಕಲಾ ಶಾಲೆ , ಪುತ್ತೂರು ಶಾಖೆಯ ವತಿಯಿಂದ ಜ.13 ಹಾಗೂ 14 ಎರಡು ದಿನಗಳ ಸುನಾದ ಸಂಗೀತೋತ್ಸವ ಕಾರ್ಯಕ್ರಮ ಇಲ್ಲಿನ ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ :
ಜ.13 ರ ಮಧ್ಯಾಹ್ನ ಗಂಟೆ 2 ರಿಂದ ದೀಪೋಜ್ವಲನ ನಡೆದು , ಗುರುವಂದನೆ ಬಳಿಕ ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿ ಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ.ಸಾಯಂಕಾಲ ಗಂಟೆ 6.30ರಿಂದಕರ್ನಾಟಕ ಶಾಸ್ತ್ರೀಯ ವೇಣು ವಾದನ ನಡೆಯಲಿದ್ದು ,ವೇಣುವಾದನವನ್ನು ವಿದ್ವಾನ್ ಸಿ. ಎಸ್. ಕೇಶವಚಂದ್ರ, ಮೈಸೂರು , ನಡೆಸಿಕೊಡಲಿದ್ದಾರೆ.ವಯಲಿನ್ ನಲ್ಲಿ ವಿದ್ವಾನ್ ವೇಣುಗೋಪಾಲ ಶಾನುಬೋಗ್ ,ಮೃದಂಗದಲ್ಲಿ ಡಾ| ಅಕ್ಷಯ ನಾರಾಯಣ, ಕಾಂಚನ ಹಾಗೂಘಟಂ ನಲ್ಲಿ ವಿದ್ವಾನ್ ಎಸ್. ಮಂಜುನಾಥ್, ಮೈಸೂರು ಸಹಕರಿಸಲಿದ್ದಾರೆ.

ಜ. 14 ರ ಬೆಳಿಗ್ಗೆ ಗಂಟೆ 9 ರಿಂದಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವು ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ನಡೆಯಲಿದ್ದು ,ಸಂಜೆ ಗಂಟೆ 6.30 ರಿಂದಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು , ಹಾಡುಗಾರಿಕೆಯು ವಿದ್ವಾನ್ ಪಾಲ್ಗಾಟ್ ರಾಮ್‌ಪ್ರಸಾದ್, ಚೆನ್ನೈ , ನೇತೃತ್ವದಲ್ಲಿ ನಡೆಯಲಿದ್ದು ,ವಯಲಿನ್ ನಲ್ಲಿ ವಿದ್ವಾನ್ ತ್ರಿವೆಂಡ್ರಮ್ ಡಾ| ಸಂಪತ್ತು ಸಹಕರಿಸಲಿದ್ದು ,ಮೃದಂಗದಲ್ಲಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮತ್ತು ಮೋರ್ಚಿಂಗ್ ವಿದ್ವಾನ್ ಪಯ್ಯನ್ನೂರು ಗೋವಿಂದ ಪ್ರಸಾದ್ ಇವರುಗಳು ಸಾಥ್ ನೀಡಲಿದ್ದಾರೆಯೆಂದು ಸುನಾದ ಸಂಗೀತ ಕಲಾ ಶಾಲಾ ಸಂಚಾಲಕರು ತಿಳಿಸಿದ್ದು ,ಸಹೃದಯಿ ಸಂಗೀತ ರಸಿಕರು ಹೆಚ್ಚು ಸಂಖ್ಯೆಯಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here