ಜ.17: ಮಾಯಿದೇ ದೇವುಸ್ ಚರ್ಚ್‌ನ ವಾರ್ಷಿಕ ಹಬ್ಬ

0

ಪುತ್ತೂರು: ಮಾಯಿದೇ ದೇವುಸ್ ಚರ್ಚ್ ಪುತ್ತೂರು ಇದರ ವಾರ್ಷಿಕ ಹಬ್ಬವು ಜ.17ರಂದು ಬೆಳಿಗ್ಗೆ 10 ಗಂಟೆಯ ಸಂಭ್ರಮದ ಬಲಿಪೂಜೆಯೊಂದಿಗೆ ನಡೆಯಲಿದೆ.
ವಾರ್ಷಿಕ ಹಬ್ಬದಲ್ಲಿ ಪ್ರದಾನ ಧರ್ಮಗುರು ವಂದನೀಯ ಜೋಸೆಫ್ ಮಾರ್ಟಿಸ್‌ರವರು ಬಲಿಪೂಜೆಯನ್ನು ಆರ್ಪಿಸಲಿರುವರು. ವಾರ್ಷಿಕ ಹಬ್ಬದ ಪ್ರಯುಕ್ತ ಪೂರ್ವ ತಯಾರಿಯಾಗಿ ಜ.14 ರಂದು ಬೆಳಿಗ್ಗೆ 8 ಗಂಟೆಗೆ ‘ಬ್ರಾತೃತ್ವದ ಆದಿತ್ಯವಾರದ ಬಲಿಪೂಜೆ’ ಹಾಗೂ ಪರಮ ಪ್ರಸಾದ ಮೆರವಣಿಗೆಯನ್ನು ನಡೆಸಲಾಗುವುದು. ಈ ಬಲಿಪೂಜೆಯನ್ನು ವಂದನೀಯ ಕೆವಿನ್ ಲಾರೆನ್ಸ್ ಡಿಸೋಜ ಇವರು ನಡೆಸಿಕೊಡಲಿರುವರು. ಜ.16 ರಂದು ಸಂಜೆ 6 ಗಂಟೆಗೆ ಕಿಲ್ಲೆ ಮೈದಾನದಿಂದ ಚರ್ಚ್ ವಠಾರದವರೆಗೆ ಮೇರಿ ಮಾತೆಯ ಪ್ರತಿಮೆಯ ಜೊತೆಗೆ ಮೊಂಬತ್ತಿ ಮೆರವಣಿಗೆ, ತದನಂತರ ದೇವರ ವಾಕ್ಯದ ಸಂಭ್ರಮವು ಜರುಗಲಿರುವುದು. ಈ ಸಂಭ್ರಮದ ವಿಧಿ ವಿಧಾನಗಳನ್ನು ವಂದನೀಯ ಬೊನಿಫಾಸ್ ಪಿಂಟೊ ನಡೆಸಿಕೊಡಲಿರುವರು ಎಂದು ಮಾದೇ ದೇವುಸ್ ಚರ್ಚ್‌ನ ಪ್ರದಾನ ಧರ್ಮಗುರುಳಾದ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here