ಆಲಂಕಾರು : ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಇ.ಟಿ ಮತ್ತು ಎನ್.ಇ.ಇ.ಟಿ ತರಬೇತಿಯ ತರಗತಿಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಪ್ರವೇಶಾತಿ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಕೊನೆಯ ಕ್ಷಣದಲ್ಲಿ ಆಗುವ ಒತ್ತಡ ಮತ್ತು ಗೊಂದಲವನ್ನು ನಿವಾರಿಸಲು ಸಣ್ಣವರಿಂದಲೇ ತರಬೇತಿಗೊಳಿಸಿದರೆ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಭಾರತಿ ಆಂಗ್ಲ ಮಾಧ್ಯಮದ ಪ್ರಾಢಶಾಲೆಯ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿಯನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ನೀಡಲಾಗುವುದು ಎಂದು ತಿಳಿಸಿ ಶುಭಾಹಾರೈಸಿದರು.
ಆಂಗ್ಲ ಮಾಧ್ಯಮದ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ ಹಿರಿಂಜ, ಮಾತನಾಡಿ ಸಂಸ್ಥೆಯ ಈ ನಿರ್ಧಾರವನ್ನು ತಮ್ಮ ಮಾತುಗಳಲ್ಲಿ ಶ್ಲಾಘಿಸಿ ವಿದ್ಯಾರ್ಥಿಗಳ ಏಳಿಗೆಗೆ ಶುಭಾಹಾರೈಸಿದರು.ಅಂಗ್ಲ ಮಾಧ್ಯಮ ಪ್ರೌಡ ಶಾಲಾವಿಭಾಗದ ಮುಖ್ಯಗುರು ಸತೀಶ್ ಕುಮಾರ್ ಜಿ ಆರ್ ಸಭಾಧ್ಯಕ್ಷತೆಯನ್ನು ವಹಿಸಿ ಶ್ರೀ ಭಾರತಿ ಶಾಲೆ ಆಲಂಕಾರಿನಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತರಬೇತಿಯನ್ನು ನಿರಂತರವಾಗಿ ನೀಡುವ ಬಗ್ಗೆ ಮಾಹಿತಿಯನ್ನು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಮಾತಾಜಿ ಆಶಾ ಎಸ್ ರೈ, ಸ್ಪರ್ಧಾತ್ಮಕ ಪರೀಕ್ಷೆ ಗಳ ತರಬೇತಿ ಕೋಶದ ಸಂಯೋಜಕಿ ಜ್ಯೋತಿ ಬಿ ಉಪಸ್ಥಿತರಿದ್ದರು. ಸಹ ಸಂಯೋಜಕಿ ದೀಕ್ಷಿತಾ ಕುಮಾರಿ ಕಾರ್ಯಕ್ರಮವನ್ನು ಸಂಯೋಜಿಸಿ ವಿದ್ಯಾರ್ಥಿನಿ ಸ್ವಸ್ತಿಕ್ ಎ ಕೆ ಸ್ವಾಗತಿಸಿ, ಶಾಲಾ ನಾಯಕಿ ಇಂಚರ ವಂದಿಸಿ. ಅಕ್ಷರ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.