ಕಲಾಮಾತೆಯ ಸೇವೆ ಎಂದರೆ ಅದು ದೇವರ ಸೇವೆ: ಶ್ರೀ ಶ್ರೀಕೃಷ್ಣ ಗುರೂಜಿ
ವಿಟ್ಲ: ದಯಾ ಕ್ರಿಯೇಷನ್ ಬಾಯರು ಇದರ 3 ನೇ ವರ್ಷದ ವಾರ್ಷಿಕ ಸಂಭ್ರಮೋತ್ಸವವು ಬ್ರಹ್ಮವರದ ಉಪ್ಪಿನಕೋಟೆಯ ರಿಲ್ಯಾಕ್ಸ್ ಲೆಶ್ಯೂರ್ ಪಾರ್ಕ್ ನಲ್ಲಿ ದಯಾ ಕ್ರಿಯೇಷನ್ ಅಧ್ಯಕ್ಷ ದಯಾನಂದ ಅಮೀನ್ ಬಾಯರುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರು ಮಾತನಾಡಿ ಕಲಾಮಾತೆಯ ಸೇವೆ ಎಂದರೆ ಅದು ದೇವರ ಸೇವೆ ಕಲಾಮಾತೆಗೆ ಜಾತಿ ಬೇಧ ವರ್ಣ ಬೇಧ ಇಲ್ಲ ಎಲ್ಲರೂ ಸಮಾನರು ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.ಈ ಒಂದು ಕಾರ್ಯಕ್ರಮದಿಂದ ಸ್ವರ್ಗಲೋಕದ ಅನುಭವ ಕಂಡತ್ತಾಯಿತು. ಎಂದರು.
ಈ ಸಂಧರ್ಭದಲ್ಲಿ ದಯಾ ಕ್ರಿಯೇಷನ್ ವತಿಯಿಂದ ಕಲೆ ಹಾಗೂ ಕಲಾವಿದರಿಗೆ ಸದಾ ಪ್ರೋತ್ಸಹ ನೀಡುತ್ತಾ ಬರುತ್ತಿರುವ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರನ್ನು ಸನ್ಮಾನಿಸಿ ‘ಕಲಾಬೊಲ್ಪು’ ಬಿರುದು ನೀಡಿ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ಹಿರಿಯ ಸಾಹಿತಿ ಶ್ರೀ ತೋಡಿಕ್ಕಾನ ಅಬ್ದುಲ , ಶ್ರೀಧರ್ ಪಿ.ಕೆ ಕುಕ್ಕಾಜೆ, ಮೊದಲಾದವರು ಉಪಸ್ಥಿತರಿದ್ದರು.
ಮೂರನೇ ವರ್ಷಾಚರಣೆ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆ,ಹಾಗೂ ಮನೋರಂಜನ ಕಾರ್ಯಕ್ರಮ ನಡೆಸಲಾಯಿತು.ಸ್ಪರ್ಧೆಯಲ್ಲಿ ವಿಜೇತರಿಗೆ ಗುರೂಜಿಯವರು ಬಹುಮಾನ ವಿತರಿಸಿದರು.ದಯಾ ಕ್ರಯೇಷನ್ ನ ಕಾರ್ಯದರ್ಶಿ ರವಿ ಎಸ್. ಎಂ. ಸ್ವಾಗತಿಸಿ, ವೈಷ್ಣವಿ ಪುತ್ತೂರು ವಂದಿಸಿದರು. ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.