ಪಾಂಗಳಾಯಿ ಮುಂಡ್ಯತ್ತಾಯ ದೈವಸ್ಥಾನದಲ್ಲಿ ಧನ್ಯತಾ ಸಭೆ

0

ಪುತ್ತೂರು:ಇಲ್ಲಿನ ಪರ್ಲಡ್ಕ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ನಡೆದ ವರ್ಷಾವಧಿ ನೇಮೋತ್ಸವ ಕೃತಜ್ಞತಾ ಸಭೆಯು ಜ.14ರಂದು ದೈವಸ್ಥಾನದ ಸಭಾಂಗಣದಲ್ಲಿ ನೆರವೇರಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ದೈವಸ್ಥಾನದ ಅಧ್ಯಕ್ಷ ತಾರಾನಾಥ ರೈ ಮಾತನಾಡಿ, ಸಂಘಟನೆ ಮೂಲಕ ನೇಮೋತ್ಸವವು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇಲ್ಲಿ ಅಧ್ಯಕ್ಷ ಹೆಸರಿಗೆ ಮಾತ್ರ. ವಿವಿಧ ಉಪ ಸಮಿತಿಗಳಿಗೆ ಹಂಚಿದ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿರುವುದರಿಂದ ಯಶಸ್ವಿಯಾಗಿ ನಡೆದಿದೆ. ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳ ಒಗ್ಗಟ್ಟು, ಏಕ ಮನಸ್ಸಿನಿಂದಾಗಿ ನೇಮೋತ್ಸವ ವಿಜೃಂಭನೆ ಹಾಗೂ ವ್ಯವಸ್ಥಿತವಾಗಿ ನೆರವೇರಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೈವಸ್ಥಾನದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಪ್ರತಿಯೊಬ್ಬರ ಸಹಕಾರ ನಿರಂತರವಾಗಿರಲಿ ಎಂದ ಅವರು ಈ ಯಶಸ್ಸಿನಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಭಕ್ತಾದಿಗಳು ವಿವಿಧ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ಮಕರ ಸಂಕ್ರಮಣದ ವಿಶೇಷ ತಂಬಿಲ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಮಕರ ಸಂಕ್ರಮಣದ ಅಂಗವಾಗಿ ದೈವಗಳಿಗೆ ವಿಶೇಷ ತಂಬಿಲ ಸೇವೆ ನಡೆಯಿತು.


ಉಪಾಧ್ಯಕ್ಷ ಪ್ರಶಾಂತ್ ಪಾಂಗಳಾಯಿ, ಜತೆ ಕಾರ್ಯದರ್ಶಿ ಸುಪ್ರೀತಾ ಸುನೀಲ್, ಕೋಶಾಧಿಕಾರಿ ಜಯಶಂಕರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸೂರಪ್ಪ ಗೌಡ ಸ್ವಾಗತಿಸಿ, ಮಾಜಿ ಅದ್ಯಕ್ಷ ವಿನಯ ಭಂಡಾರಿ ವಂದಿಸಿದರು. ದೈವಸ್ಥಾನದ ಸಮಿತಿ ಸದಸ್ಯರು, ಮಾಜಿ, ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here