ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ಮುಗಿದು ಉತ್ತರಾಯಣ ಪ್ರವೇಶದ ಪುಣ್ಯಕಾಲ ಜ.14ರ ಮಕರ ಸಂಕ್ರಮಣದಂದು ಶ್ರೀ ದೇವರಿಗೆ ರಾತ್ರಿಪೂಜೆ ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಪೂರ್ವಶಿಷ್ಟ ಪದ್ಧತಿಯಂತೆ ಶ್ರೀ ದೇವರಿಗೆ ಕನಕಾಭಿಷೇಕ ನಡೆಯಿತು.
ರಾತ್ರಿ ಮಹಾಲಿಂಗೇಶ್ವರ ದೇವರಿಗೆ ಪೂಜೆ ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಕನಕಾಭಿಷೇಕ ಜರುಗಲಿದೆ. ಅರಸೊತ್ತಿಗೆಯ ಕಾಲದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಕನಕಾಭಿಷೇಕ ನೆರವೇರಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಬಿ.ಕೆ.ವೀಣಾ, ಬಿ.ಐತ್ತಪ್ಪ ನಾಯ್ಕ್, ಡಾ. ಸುಧಾ ಎಸ್ ರಾವ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಮಾಜಿ ಆಡಳಿತಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ವಾಸ್ತು ಇಂಜಿನಿಯರ್ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೆಚ್, ಕಿಟ್ಟಣ್ಣ ಗೌಡ ಬಪ್ಪಳಿಗೆ, ಸುದೇಶ್ ಚಿಕ್ಕಪುತ್ತೂರು, ಪಿ.ಜಿ.ಚಂದ್ರಶೇಖರ್ ರಾವ್, ರಾಧಾಕೃಷ್ಣ ನಂದಿಲ, ರಂಜಿತ್ ಬಂಗೇರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಶಾಸಕ ಅಶೋಕ್ ಕುಮಾರೈ ದಂಪತಿ ಸಮೇತ ಮಧ್ಯಾಹ್ನ ಶ್ರೀ ದೇವರ ಮಹಾಪೂಜೆಯಲ್ಲಿ ಪಾಲ್ಗೊಂಡು ರಾತ್ರಿ ದೇವಳದ ಅಭಿವೃದ್ಧಿ ಸಭೆಯಲ್ಲಿ ಭಾಗವಹಿಸಿದ್ದರು.
ಸುವಸ್ತುಗಳಿಂದ ಕನಕಾಭಿಷೇಕ:
ಭಂಡಾರದ ವತಿಯಿಂದ ಒಂದು ದೊಡ್ಡ ಹರಿವಾಣದಲ್ಲಿ ಹೊದ್ಲು, ವೀಳ್ಯದೆಲೆ, ಅಡಿಕೆ, ಕಾಳುಮೆಣಸು, ಚಿನ್ನ ಹಾಗೂ ಬೆಳ್ಳಿಯ ತುಣಕಗಳು ಚಾಲ್ತಿಯಲ್ಲಿರುವ ನಾಣ್ಯಗಳನ್ನು ಓರಣವಾಗಿ ಜೋಡಿಸಿ ದೇವರ ಬಲಿಯ ಕೊನೆಯ ಸುತ್ತಿನಲ್ಲಿ ಉಳ್ಳಾಲ್ತಿ ಅಮ್ಮನವರ ನಡೆಯಲ್ಲಿ ಕನಕಾಭಿಷೇಕ ನೆರವೇರಿಸಲಾಯಿತು. ಪ್ರತಿ ವರ್ಷ ದೇವಳದ ಸಿಬ್ಬಂದಿ ಪದ್ಮನಾಭ ಅವರು ಕನಕಾಭಿಷೇಕದ ಸುವಸ್ತುಗಳನ್ನು ಜೋಡಿಸುವ ಕಾರ್ಯ ಮಾಡುತ್ತಿದ್ದಾರೆ.