ಸುನಾದ ಸಂಗೀತ ಕಲಾ ಶಾಲಾ ವಾರ್ಷಿಕೋತ್ಸವ ಸಲುವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

0

ಪುತ್ತೂರು: ಸುನಾದ ಸಂಗೀತ ಶಾಲಾ ವಾರ್ಷಿಕೋತ್ಸವವು ಪ್ರಯುಕ್ತ ಇಲ್ಲಿನ ಮಂಜಲ್ಪಡ್ಪು ಸುದಾನ ಶಾಲಾ ಎಡ್ವರ್ಡ್ ವೇದಿಕೆಯಲ್ಲಿ “ಸುನಾದ ಸಂಗೀತೋತ್ಸವ” ಜ.13ರಂದು ಅದ್ಧೂರಿಯಾಗಿ ನಡೆಯಿತು. ಎರಡು ದಿನಗಳ ಕಾರ್ಯಕ್ರಮವನ್ನು ಸುನಾದ ಕಲಾ ಶಾಲೆಯ ಮುಖ್ಯಸ್ಥರಾಗಿರುವ ವಿದ್ವಾನ್ ಎ.ಕಾಂಚನ ಈಶ್ವರ ಭಟ್ ಮತ್ತು ವಿಜಯಶ್ರೀ ಈಶ್ವರ ಭಟ್ ದಂಪತಿ ಜತೆಯಾಗಿ ದೀಪ ದೀಪ ಬೆಳಗಿಸಿ ಚಾಲನೆ ನೀಡಿದರು.

ಹಿರಿಯ ವಿದ್ಯಾರ್ಥಿ ಬಳಗದಿಂದ ಆರಂಭಗೊಂಡ ಕಾರ್ಯಕ್ರಮ ಬಳಿಕ ಸುನಾದ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವು ನಡೆಯಿತು. ಕರ್ನಾಟಕ ಶಾಸ್ತ್ರೀಯ ವೇಣು ವಾದನ ಕಾರ್ಯಕ್ರಮವನ್ನು ವಿದ್ವಾನ್ ಸಿ.ಎಸ್. ಕೇಶವಚಂದ್ರ ಮೈಸೂರು ಇವರು ನಡೆಸಿದರು.
ವಯಲಿನ್ ನಲ್ಲಿ ವಿದ್ವಾನ್ ವೇಣುಗೋಪಾಲ ಶಾನುಬೋಗ್ , ಮೃದಂಗದಲ್ಲಿ ಡಾ|ಅಕ್ಷಯ ನಾರಾಯಣ, ಕಾಂಚನ ಹಾಗೂ ಘಟಂ ನಲ್ಲಿ ವಿದ್ವಾನ್ ಎಸ್. ಮಂಜುನಾಥ್, ಮೈಸೂರು ಸಹಕರಿಸಿದರು.
ಜ.14ರಂದು ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯೂ ವಿದ್ವಾನ್ ಪಾಲ್ಗಾಟ್ ರಾಮ್‌ಪ್ರಸಾದ್ ಚೆನ್ನೈ ನೇತೃತ್ವದಲ್ಲಿ ನಡೆಯಿತು.
ವಯಲಿನ್ ನಲ್ಲಿ ವಿದ್ವಾನ್ ತ್ರಿವೆಂಡ್ರಮ್ ಡಾ| ಸಂಪತ್ತು ಸಹಕರಿಸಿ, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮತ್ತು ಮೋರ್ಚಿಂಗ್ ವಿದ್ವಾನ್ ಪಯ್ಯನ್ನೂರು ಗೋವಿಂದ ಪ್ರಸಾದ್ ಇವರುಗಳು ಸಾಥ್ ನೀಡಿದರು.

LEAVE A REPLY

Please enter your comment!
Please enter your name here