ತಮನ್ವಿ ಸಿಲ್ಕ್ಸ್ ಆಂಡ್ ಸಾರೀಸ್‌ನಲ್ಲಿ ಕಾಂಚೀಪುರಂ ಸೀರೆಗಳ ಅಮೋಘ ಸಂಗ್ರಹ-ಮಕರ ಸಂಕ್ರಾಂತಿಯ ಪ್ರಯುಕ್ತ ಡಿಸ್ಕೌಂಟ್ ಮಾರಾಟ

0

ಪುತ್ತೂರು: ಎಷ್ಟೇ ಟ್ರೆಂಡಿ ಉಡುಪುಗಳು ಬಂದರೂ ಇವತ್ತಿಗೂ ನಾರಿಯರ ಪಾಲಿಗೆ ಸೀರೆಯೇ ಫೆವರಿಟ್. ಅದರಲ್ಲೂ ರೇಷ್ಮೆ ಸೀರೆಗಳಲ್ಲಿ ಕಾಂಚೀಪುರಂ ಸೀರೆಗಳು ಇಂದಿಗೂ ತಮ್ಮ ಪ್ರಸಿದ್ಧಿಯನ್ನು ಹಾಗೆಯೇ ಉಳಿಸಿಕೊಂಡಿದೆ. ಶುದ್ಧ ರೇಷ್ಮೆ ಮತ್ತು ಬೆಳ್ಳಿಯ ನೆಯ್ಗೆಯೊಂದಿಗೆ ಕಂಗೊಳಿಸುವ ರೇಷ್ಮೆ ಸೀರೆಗಳನ್ನು ಉಟ್ಟುಕೊಂಡರೆ ಅದಕ್ಕೊಪ್ಪುವ ಶೋಭೆಯೇ ಬೇರೆಯದ್ದು.


ಇದೀಗ ಪುತ್ತೂರಿನಲ್ಲಿ ತಮನ್ವಿ ಸಿಲ್ಕ್ಸ್ ಆಂಡ್ ಸಾರೀಸ್ ನಲ್ಲಿ ಜ.14ರಿಂದ ಜ.16ರವರೆಗೆ ಕಾಂಚೀಪುರಂ ಸೀರೆಗಳ ಅಮೋಘ ಸಂಗ್ರಹಗಳ ಮೇಲೆ ಫ್ಲಾಟ್ 15% ಡಿಸ್ಕೌಂಟ್ ಗಳನ್ನು ನೀಡಲಾಗುತ್ತಿದ್ದು, ಇದು ಪುತ್ತೂರು ಮಾತ್ರವಲ್ಲದೇ ಸುತ್ತ ಹತ್ತೂರಿನ ಮಹಿಳೆಯರ ಪಾಲಿಗೆ ನಿಜವಾಗಿಯೂ ಸಂಕ್ರಾಂತಿಯ ಶುಭ ಸುದ್ದಿಯೇ ಆಗಿದೆ. ಪುತ್ತೂರಿನ ಬೊಳುವಾರಿನ ಮುಖ್ಯರಸ್ತೆಯಲ್ಲಿರುವ (ಜಿ3) ಇನ್ ಲ್ಯಾಂಡ್ ಮಯೂರ ಬಿಲ್ಡಿಂಗ್ ನಲ್ಲಿರುವ ತಮನ್ವಿ ಸಿಲ್ಕ್ಸ್ ಆಂಡ್ ಸಾರೀಸ್ ನಲ್ಲಿ ನೀಡಲಾಗುತ್ತಿರುವ ಈ ಭರ್ಜರಿ ಆಫರನ್ನು ರೇಷ್ಮೆ ಸೀರೆ ಪ್ರಿಯ ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here