35ರ ವಯೋಮಾನದ ಹಿರಿಯರ ಕ್ರೀಡಾಕೂಟ – ನಡುಬೈಲು ಚಂದ್ರಶೇಖರ ಗೌಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಮಂಗಳೂರಿನ ಮಂಗಳಾ ಸ್ಟೇಡಿಯಂ ನಲ್ಲಿ ಜನವರಿ 13 ಮತ್ತು 14 ರಂದು ನಡೆದ 42 ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಡುಬೈಲು ಪ್ರಸ್ತುತ ಪುತ್ತೂರು ತಾಲೂಕು ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಚಂದ್ರಶೇಖರ ಗೌಡ ಇವರು 35ರ ವಯೋಮಾನದ ಉದ್ದ ಜಿಗಿತದಲ್ಲಿ ಪ್ರಥಮ, ಎತ್ತರ ಜಿತದಲ್ಲಿ ದ್ವಿತೀಯ, 1500 ಮೀ ಓಟದಲ್ಲಿ ತೃತೀಯ ಮತ್ತು 4*100 ಮೀ. ದ್ವಿತೀಯ ಸ್ಥಾನ ಪಡೆದು, ಫೆಬ್ರವರಿ 2ರಿಂದ 4ರವರೆಗೆ ತಮಿಳುನಾಡಿನ ತಿರುನೆಲ್ವೇಲಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ದಿ.ಬಾಬು ಗೌಡ ಹಾಗೂ ಲೀಲಾವತಿ ದಂಪತಿ ಪುತ್ರ.

LEAVE A REPLY

Please enter your comment!
Please enter your name here