ಹಿರಿಯರ ಕ್ರೀಡಾಕೂಟ: ಕಾಣಿಯೂರಿನ ಪೆರ್ಲೋಡಿ ಸುಶೀಲ ರಾಷ್ಟ್ರ ಮಟ್ಟಕ್ಕೆ

0

ಕಾಣಿಯೂರು: ಕರ್ನಾಟಕ ಮಾಸ್ಟರ್ ಅಥ್ಲೇಟಿಕ್ ಎಸೋಸಿಯೇಷನ್ ವತಿಯಿಂದ ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ 42ನೇ ರಾಜ್ಯ ಹಿರಿಯರ ಕ್ರೀಡಾ ಕೂಟದಲ್ಲಿ ಕಾಣಿಯೂರು ಗ್ರಾಮದ ಪೆರ್ಲೋಡಿ ಸುಶೀಲರವರು ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 70ರ ವಯೋಮಾನದ ವಿಭಾಗದಲ್ಲಿ 3 ಕಿ. ಮೀ ವೇಗ ನಡಿಗೆ, 1500 ಮೀ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ 100ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿಕೊಂಡು ಬರುತ್ತಿರುವ ಸುಶೀಲರವರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here