ಕಡಬ ಸೈಂಟ್ ಜೋಕಿಮ್ಸ್ ಶಾಲೆಯ ಹಸ್ತಾ ಪಿ.ಎ.ಅವರಿಗೆ ರಾಜ್ಯ ಪುರಸ್ಕಾರ

0

ಕಡಬ: 2022-23ನೇ ಸಾಲಿನ ಭಾರತ್ ಸ್ಕೌಟ್ಸ್ ಗೈಡ್‌ನ ಬುಲ್ ಬುಲ್ ವಿಭಾಗದಲ್ಲಿ ಚತುರ್ಥ ಚರಣ್ ಹೀರಖ್ ಗರಿ ರಾಜ್ಯಪುರಸ್ಕಾರ ಪ್ರಶಸ್ತಿಯು ಕಡಬ ಸೈಂಟ್ ಜೋಕಿಮ್ಸ್ ಶಾಲೆಯ 5ನೇ ತರಗತಿಯ ಹಸ್ತಾ ಪಿ.ಎ. ಅವರಿಗೆ ಲಭಿಸಿದೆ.

ಜ.19ರಂದು ಬೆಂಗಳೂರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ನಡೆದ 2022-23ನೇ ಸಾಲಿನ ಚತುರ್ಥ ಚರಣ ಕಬ್, ಹೀರಖ್ ಗರಿ ಬುಲ್ ಬುಲ್, ರಾಜ್ಯ ಪುರಸ್ಕಾರ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಪ್ರಶಸ್ತಿ ಪತ್ರ ಪ್ರಧಾನ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌ರವರು ಹೀರಖ್ ಗರಿ ಬುಲ್ ಬುಲ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು.

ಹಸ್ತಾ ಅವರಿಗೆ ಪ್ಲಾಕ್ ಲೀಡರ್ ಪೂಂಜಾಲಕಟ್ಟೆ ಸಿ.ಆರ್.ಪಿ.ಚೇತನಾ ಅವರು ಮಾರ್ಗದರ್ಶನ ಮಾಡಿದರು. ಹಸ್ತಾ ಪಿ.ಎ ಅವರು ಕಡಬ ಸಿ.ಎ.ಬ್ಯಾಂಕ್ ಸಿಬ್ಬಂದಿ ಆನಂದ ಗೌಡ ಕೋಂಕ್ಯಾಡಿ ಮತ್ತು ಪೂರ್ಣಿಮಾ ಜಿ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here