ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಶ್ರೀ ಗುರು ಸುಧೀಂದ್ರ ತೀರ್ಥರ ಪುಣ್ಯ ತಿಥಿಯ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ.18ರಂದು ನಡೆಯಿತು.
ರಾತ್ರಿ ಗುರು ಪೂಜೆ, ಗುರುವಂದನೆ, ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ದೇವಳದ ಆಡಳಿತ ಮೋಕ್ತೆಸರ ಬಿ. ಗಣೇಶ ಶೆಣೈ ಅವರು, ಶ್ರೀ ಸ್ವಾಮೀಜಿಗಳ ಗುಣಗಾನ ಮಾಡಿದರಲ್ಲದೆ, ಗುರುವರ್ಯರ ಮಾರ್ಗದರ್ಶನ ಸಮಾಜಕ್ಕೆ ಮಾದರಿ ಎಂದು ಬಣ್ಣಿಸಿದರು. ದೇವಾಲಯದ ಮುಖ್ಯ ಅರ್ಚಕ ರವೀಂದ್ರ ಭಟ್ ಶ್ರೀಗಳ ಸಂದೇಶವನ್ನು ನಿತ್ಯ ಜೀವನದಲ್ಲಿ ಪರಿಪಾಲಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯದ ಮೋಕ್ತಸರ ಡಾ.ಎಂ. ರತ್ನಾಕರ ಶೆಣೈ, ಯು.ನಾಗರಾಜ ಭಟ್, ಕೆ.ಅನಂತರಾಯ್ ಕಿಣಿ, ದೇವಿದಾಸ್ ಭಟ್, ಪ್ರಮುಖ ಕರಾಯ ಗಣೇಶ ನಾಯಕ್, ಸತೀಶ ನಾಯಕ್, ರಾಘವೇಂದ್ರ ನಾಯಕ್, ಕೆ.ಗಣೇಶ ಭಟ್, ಎಚ್. ವಾಸುದೇವ ಪ್ರಭು, ಶ್ರೀಕಾಂತ್ ಪ್ರಭು, ನಾಗೇಶ ನಾಯಕ್, ಗಿರಿಧರ ನಾಯಕ್, ಪಣಕಜೆ ಪ್ರಸಾದ ಶೆಣೈ, ಹರೀಶ್ ಪೈ, ಪ್ರಶಾಂತ್ ಪೈ, ಹರೀಶ ಕಿಣಿ, ರಾಜೇಶ ಪೈ, ಬಿ.ಟಿ. ವಸಂತ ಶೆಣೈ, ಅಚ್ಚುತ ಪಡಿಯಾರ್ ಮತ್ತಿತರರು ಉಪಸ್ಥಿತರಿದ್ದರು. ಅರ್ಚಕರಾದ ಸಂದೀಪ್ ಭಟ್, ಪಿ. ನರಸಿಂಹ ಭಟ್ ಪೂಜಾ ವಿಧಿವಿಧಾನಗಳನ್ನು ನಡೆಸಿದರು.