ಕೋಲ್ಪೆ: ’ ಭರವಸೆಯ ಬೆಳಕು ’ ಸಮಿತಿ ಉದ್ಘಾಟನೆ

0

ನೆಲ್ಯಾಡಿ: ಭರವಸೆಯ ಬೆಳಕು ಸಮಿತಿ ಕೋಲ್ಪೆ ಇದರ ಕಚೇರಿ ಕೋಲ್ಪೆಯಲ್ಲಿ ಉದ್ಘಾಟನೆಗೊಂಡಿತು.ಇರ್ಷಾದ್ ದಾರಿಮಿ ಉಸ್ತಾದ್ ಮಿತ್ತಬೈಲ್‌ರವರು ಉದ್ಘಾಟಿಸಿದರು.

ಮುಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ ಮುದರ್ರಿಸ್ ಕೋಲ್ಪೆ, ಕೋಲ್ಪೆ ಜಮಾಅತ್ ಅಧ್ಯಕ್ಷ ಕೆ.ಕೆ ಅಬೂಬಕ್ಕರ್, ಭರವಸೆಯ ಬೆಳಕು ಸಮಿತಿಯ ಅಧ್ಯಕ್ಷರಾದ ಯು.ಕೆ.ಅಬ್ದುಲ್ ಹಮೀದ್, ಕಲಂದರ್ ಷಾ ದಪ್ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಕೋಲ್ಪೆ, ಮಿಲೇನಿಯಂ ಬ್ರದರ್ಸ್ ಅಧ್ಯಕ್ಷರಾದ ಕೆ.ಕೆ.ಇಸ್ಮಾಯಿಲ್ ಹಾಜಿ ಕೋಲ್ಪೆ, ಬಿಷಾರ ಹೆಲ್ಪಿಂಗ್ ಹ್ಯಾಂಡ್ ಇದರ ಅಧ್ಯಕ್ಷರಾದ ತೌಫೀಕ್ ಎಂ.ಕೆ., ಎಸ್‌ಕೆ ಎಸ್‌ಎಸ್‌ಎಫ್ ಅಧ್ಯಕ್ಷರಾದ ರಹೀಂ ಎಂ.ಕೆ., ಗೋಳಿತೊಟ್ಟು ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷರಾದ ಹನೀಫ್ ಮರ್ಲಾಪು ಹಾಗೂ ಇನ್ನಿತರ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಭರವಸೆಯ ಬೆಳಕು ಸಮಿತಿಯ ಪದಾಧಿಕಾರಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಕಾರ್ಯದರ್ಶಿ ಶಮೀರ್ ಅರ್ಶದಿ ಸ್ವಾಗತಿಸಿ,
ಜೊತೆ ಕಾರ್ಯದರ್ಶಿ ಕೆ.ಎಸ್.ಶರೀಫ್ ವಂದಿಸಿದರು.

LEAVE A REPLY

Please enter your comment!
Please enter your name here