ರೆಂಜದಲ್ಲಿ ಭಗವತಿ ನೂತನ ಸಂಸ್ಥೆ ಶುಭಾರಂಭ

0

ನಿಡ್ಪಳ್ಳಿ : ಪುತ್ತೂರು ಸಿಪಿಸಿ ಪ್ಲಾಜಾದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಭಗವತಿ ಡಿಜಿಟಲ್ಸ್ ಇದರ ನೂತನ ಸಹಸಂಸ್ಥೆ, ಸ್ಟುಡಿಯೋ, ಫ್ಯಾನ್ಸಿ, ಪುಸ್ತಕ, ಸ್ಟೇಷನರಿ, ಜೆರಾಕ್ಸ್ ಮತ್ತು ಗಿಫ್ಟ್ ಐಟಮ್ ಗಳನ್ನೊಳಗೊಂಡ ನೂತನ ಸಂಸ್ಥೆ ಭಗವತಿ ಜ.22ರಂದು ಬೆಟ್ಟಂಪಾಡಿ ಪಿ.ಎ.ಸಿ.ಎಸ್ ಸೊಸೈಟಿ ಕಟ್ಟಡ ಕಾಲೇಜು ರಸ್ತೆ ರೆಂಜದಲ್ಲಿ ಶುಭಾರಂಭಗೊಂಡಿತು.

ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ನಿರ್ವಹಣಾಧಿಕಾರಿ ರಾಮಯ್ಯ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಅರ್.ಸಿ.ನಾರಾಯಣ ರೆಂಜ, ಕೆ.ನಾರಾಯಣ ಪಾಟಾಳಿ ಕೋನಡ್ಕ, ಪುತ್ತೂರು ತಾಲೂಕು ಎಸ್.ಕೆ.ಪಿ.ಎ ಮಾಜಿ ಅಧ್ಯಕ್ಷ ಹರೀಶ್ ಎಲಿಯ, ಮಾಲಕರ ತಂದೆ ಅಪ್ಪಯ್ಯ ಪಾಟಾಳಿ, ಸಹೋದರ ಗಣೇಶ, ಜಗನ್ನಾಥ ರೈ ಕೆ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆ ಮಾಲಕ ಜಯಪ್ರಸಾದ್ ನಿಡ್ಪಳ್ಳಿ ಸ್ವಾಗತಿಸಿ, ಸರ್ವರ ಸಹಕಾರವನ್ನು ಕೋರಿದರು.

LEAVE A REPLY

Please enter your comment!
Please enter your name here