ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ವತಿಯಿಂದ ವಿಟ್ಲ ಶ್ರೀಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಬಂಟ್ವಾಳ ಪೇರಮೊಗ್ರಿನ ದೇಂತಡ್ಕ ಶ್ರೀವನದುರ್ಗಾ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ನೃತ್ಯೋಹಂ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು.
ವಿಟ್ಲ ಜಾತ್ರೋತ್ಸವದ ದೇವರ ರಥಗದ್ದೆಯಲ್ಲಿ ಕಲಾ ಅಕಾಡೆಮಿಯ ವಿಟ್ಲ ಶಾಖಾ ತಂಡದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣವರ್ಮ ಅರಸರು ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭ ವೀಣಾ ನರಸಿಂಹ ವರ್ಮ, ಲಯನ್ಸ್ ಪುಷ್ಪಲತಾ, ಡಾ.ಸ್ಮಿತಾ ಅರವಿಂದ್, ಅನುರಾಧ ಆರ್.ಪೈ ಮತ್ತಿತರರು ವೇದಿಕೆಯಲ್ಲಿದ್ದರು.
ಈ ಸಂದರ್ಭ ನೃತ್ಯನಿರ್ದೇಶಕಿ, ಗುರು ವಿದುಷಿ ಶಾಲಿನಿ ಆತ್ಮಭೂಷಣ್ ದಂಪತಿ ಹಾಗೂ ಕಲಾ ತಂಡವನ್ನು ಗೌರವಿಸಲಾಯಿತು. ಕಾರ್ಯಕಮ ಸಂಯೋಜಕ ಬಾಲಕೃಷ್ಣ ಸ್ವಾಗತಿಸಿದರು. ಧನಲಕ್ಷ್ಮಿ ವಂದಿಸಿದರು. ರಾಧಾಕೃಷ್ಣ ಎರುಂಬು ನಿರೂಪಿಸಿದರು. ರಮೇಶ್ ಬಿ.ಕೆ, ಮಲ್ಲಿಕಾ ಬಿ.ಎಸ್, ಕೆ.ರಶ್ಮಿ ಸಹಕರಿಸಿದರು.
ದೇಂತಡ್ಕ ಜಾತ್ರೆಯಲ್ಲಿ ನೃತ್ಯೋಹಂ:
ದೇಂತಡ್ಕ ದೇವಸ್ಥಾನದಲ್ಲಿ ನಡೆದ ನೃತ್ಯೋಹಂ ಭರತನಾಟ್ಯದಲ್ಲಿ ಕಲಾ ಅಕಾಡೆಮಿಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನ ನೀಡಿದ್ದರು. ಈ ಸಂದರ್ಭದಲ್ಲಿ ದೇಂತಡ್ಕ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಜತ್ತನಕೋಡಿ ಶಂಕರ ಭಟ್, ಮ್ಯಾನೇಜಿಂಗ್ ಟ್ರಸ್ಟಿ ಜತ್ತನಕೋಡಿ ಸುಂದರ ಭಟ್, ಸದಸ್ಯ ರಮೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.