ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ರಾಮಮಂದಿರ ನಿರ್ಮಾಣದ ಸಂಭ್ರಮ

0

ಈಗಿನ ತಲೆಮಾರು ಇತಿಹಾಸದ ಸತ್ಯಗಳನ್ನು ಅರಿಯಬೇಕು: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ರಾಮಜನ್ಮ ಭೂಮಿಯಲ್ಲೇ ಇದೀಗ ಪವಿತ್ರ ರಾಮ ಮಂದಿರ ಸ್ಥಾಪನೆಯಾದುದು ಎಲ್ಲರಿಗೂ ಸಂತಸ ತಂದಿದೆ. ರಾಮಮಂದಿರ ಕಟ್ಟಲೇಬೇಕಾಗಿತ್ತು. ಇದರ ಹಿಂದೆ ಅವೆಷ್ಟೋ ಮಂದಿ ಕರಸೇವಕರು ಬಲಿಯಾದ ದುರಂತ ಕಥೆ ಇದೆ. ಈಗಿನ ತಲೆಮಾರಿನವರು ಎಲ್ಲ ವಿಚಾರಗಳನ್ನು ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ. ರಾಮ ಜನ್ಮಭೂಮಿ ಮಾತ್ರವಲ್ಲ ಕೃ? ಜನ್ಮ ಭೂಮಿಯೂ ನಮ್ಮದಾಗಬೇಕಾಗಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳನ್ನುದ್ದೇಶಿಸಿ ರಾಮಜನ್ಮಭೂಮಿಯ ಹಿನ್ನಲೆ ಹಾಗೂ ಮಹತ್ವದ ಬಗೆಗೆ ತಿಳಿಸಿದರು.
ಹಿಂದಿನವರ ಹೋರಾಟ, ಅವರ ತ್ಯಾಗ ಅಮೋಘವಾದದ್ದು. ಪುತ್ತೂರಿನಲ್ಲಿ ನಟ್ಟೋಜ ಶಿವಾನಂದ ರಾವ್ ಅವರು ಆಗಿನ ರಾಮಶಿಲಾ ಪೂಜನ ಸಮಿತಿಯ ಅಧ್ಯಕ್ಷರಾಗಿ ಹಳ್ಳಿಹಳ್ಳಿಗಳಲ್ಲೂ ಜಾಗೃತಿ ಮೂಡಿಸಿ ಕರಸೇವೆಗೆ ಜನರನ್ನು ಒಗ್ಗೂಡಿಸಿದರು. ಸ್ವತಃ ತಾವೂ ಕರಸೇವೆಯಲ್ಲಿ ಭಾಗಿಯಾಗಿ ರಾಮಮಂದಿರ ಹೋರಾಟದಲ್ಲಿ ಕೈ ಜೋಡಿಸಿದರು. ಅವರು ಪುತ್ತೂರು ತಾಲೂಕಿನಲ್ಲಿ ಈಗ ಇರುವ ಅತ್ಯಂತ ಹಿರಿಯ ಕರಸೇವಕ ಎಂದರಲ್ಲದೆ ಇನ್ನು ದೇಶದ ಹಿಂದೂ ಯುವ ಜನಾಂಗ ದೇಶದ ಸುಂದರ ಚರಿತ್ರೆಯನ್ನು ಬರೆಯಬೇಕಾಗಿದೆ. ಸೂರ್ಯ ಚಂದ್ರರು ಇರುವ ತನಕ ರಾಮ ಮಂದಿರದ ಒಂದು ಕಲ್ಲು ಕೂಡ ಅಲ್ಲಾಡಬಾರದು ಎಂದು ನುಡಿದರು.


ರಾಮ ಮಂದಿರದಲ್ಲಿನ ಪ್ರಾಣಪ್ರತಿಷ್ಠೆಯ ನೆಲೆಯಲ್ಲಿ ಸಿಹಿ ಹಂಚಲಾಯಿತು. ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ವಿಷ್ಣು ಪ್ರದೀಪ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ನಯನ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here