ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.26ರಂದು ನಡೆಯಲಿರುವ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವ ಹಾಗೂ ಕ್ಷೇತ್ರದ ದೈವಗಳ ನೇಮೋತ್ಸವಗಳಿಗೆ ಜ.25ರಂದು ಚಾಲನೆ ದೊರೆತಿದ್ದು, ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆಗೊಂಡಿತು.
ಗ್ರಾಮದ ವಿವಿಧ ಭಾಗಗಳಿಂದ ಸಂಗ್ರಹವಾದ ಹೊರೆಕಾಣಿಕೆಗೆ ದರ್ಬೆ ವೃತ್ತದ ಬಳಿಯಲ್ಲಿ ಚಾಲನೆ ನೀಡಲಾಯಿತು. ದೇವಸ್ಥಾನದ ಉತ್ಸವ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಕೃಷ್ಣಪ್ಪ ಕೆ., ಗೌರವ ಸಲಹೆಗಾರರಾದ ಪ್ರಸನ್ನ ಮಾರ್ತ ಹಾಗೂ ವಿಜಯ ಬಿ.ಎಸ್ ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ನಂತರ ದರ್ಬೆ ವೃತ್ತದ ಬಳಿಯಿಂದ ಹೊರಟು ಮುಖ್ಯ ರಸ್ತೆಯ ಮೂಲಕ ಮುಕ್ರಂಪಾಡಿ, ಸಂಪ್ಯ ಮೂಲಕ ಸಾಗಿ ದೇವಸ್ಥಾನಕ್ಕೆ ಆಗಮಿಸಿತು. ನೂರಾರು ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆಯು ಸಾಗಿ ಬಂದಿದೆ. ಸಂಜೆ ಕ್ಷೇತ್ರದಲ್ಲಿ ಉಗ್ರಾಣ ಪೂಜೆ, ದುರ್ಗಾಪೂಜೆ, ಶ್ರೀ ದೇವರಿಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಸದಸ್ಯರಾದ ಲಕ್ಷ್ಮಣ್ ಬೈಲಾಡಿ, ಜಯಕುಮಾರ್ ನಾಯರ್, ವಿನ್ಯಾಸ್ ಯು.ಎಸ್., ಜಗದೀಶ್, ಶಶಿಕಲಾ ನಿರಂಜನ ಶೆಟ್ಟಿ, ಪ್ರೇಮ ಶಿವಪ್ಪ ಸಪಲ್ಯ, ಉತ್ಸವ ಸಮಿತಿ ಕಾರ್ಯದರ್ಶಿ ಉಮೇಶ್ ಎಸ್.ಕೆ., ಉಪಾಧ್ಯಕ್ಷ ನಾಗೇಶ್ ಸಂಪ್ಯ, ಗೌರವ ಸಲಹೆಗಾರರಾದ ಭೀಮಯ್ಯ ಭಟ್, ಜಯಂತ ಶೆಟ್ಟಿ ಕಂಬಳತ್ತಡ್ಡ, ಪುತ್ತಿಲ ಪರಿವಾರದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಶರತ್, ಮನೀಷ್ ಕುಲಾಲ್, ರೂಪೇಶ್ ನಾೖಕ್, ಹರಿಣಿ ಪುತ್ತೂರಾಯ, ಉದಯ ಕುಮಾರ್ ಬಲ್ಲಾಳ್, ಪ್ರವೀಣ್ ಸಂಪ್ಯ, ನವೀನ್ ಕುಕ್ಕಾಡಿ, ಉಮೇಶ್ ಆಚಾರ್ಯ ಕುಕ್ಕಾಡಿ, ವೇಣುಗೋಪಾಲ ಶೆಟ್ಟಿ, ಮಂಜಪ್ಪ ಗೌಡ ಬೈಲಾಡಿ, ರವಿ ಗೌಡ ಬೈಲಾಡಿ, ಶಮಂತ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.