ಆಲಂಕಾರು: ಆಲಂಕಾರು ಗ್ರಾಮದ ವಿಜಯ ನಿವಾಸದ ಅದಿರಾಜ ಶೆಟ್ಟಿ ಅವರ ಮಗ ಆಲಂಕಾರು ಗುತ್ತು ಜಯಕೀರ್ತಿ ಹೆಗ್ಡೆ (75) ಅಲ್ಪಕಾಲದ ಅಸೌಖ್ಯದಿಂದ ಜ.25 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಯಾಗಿ, ಆಲಂಕಾರು ಕರ್ತುಕುಟೇಲು ದೇವಸ್ಥಾನದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ರಾಜಲಕ್ಷ್ಮಿ ಹೆಗ್ಡೆ, ಮಗ ರಾಜೇಶ್ ಹೆಗ್ಡೆ, ಮಗಳು ನಿವೇದಿತಾ, ಅಳಿಯ ಪಾರ್ಶ್ವನಾಥ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.