ಕೆದಂಬಾಡಿ ಇದುಪ್ಪಾಡಿಯಲ್ಲಿ ವಿಜೃಂಭಣೆಯ ವಾರ್ಷಿಕ ನೇಮೋತ್ಸವ

0

ಪುತ್ತೂರು: ಕೆದಂಬಾಡಿ ಗ್ರಾಮದ ಇದುಪ್ಪಾಡಿ ಎಂಬಲ್ಲಿ ಜ.24 ಮತ್ತು 25 ರಂದು ವಾರ್ಷಿಕ ನೇಮೋತ್ಸವ ಜರಗಿತು. ಜ.24 ರಂದು ಪೂರ್ವಹ್ನ ಗಣಪತಿ ಹೋಮ, ನಾಗತಂಬಿಲ, ದೈವಗಳಿಗೆ ತಂಬಿಲ, ಸಂಜೆ ಮಾರಿ ದೈವ ಹೊರಡುವುದು, , ಕಂಚಿರಾಯ ಸೇವೆ, ಜ.25 ರಂದು ಬೆಳಿಗ್ಗೆ ನಾಗ ಬ್ರಹ್ಮ ದೈವದ ನೇಮ ಬಳಿಕ ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವದ ನೇಮೋತ್ಸವ ವಿಜೃಂಭಣೆಯಿಂದ ಜರಗಿತು. ಕಾರ‍್ಯಕ್ರಮದ ದಿನ ಬೆಳಿಗ್ಗೆ ಮತ್ತು ಸಂಜೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಜರಗಿತು. ದೈವಸ್ಥಾನದ ಯಜಮಾನ ನಿವೃತ್ತ ಡಿವೈಎಸ್‌ಪಿ ಮುಂಡಾಳಗುತ್ತು ಶಾಂತಾರಾಮ ರೈ ಮತ್ತು ಹದಿನೆಂಟು ವರ್ಗ ಮತ್ತು ಊರ ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here