31ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ-ಕಂಬಳ ಕೂಟ ಉದ್ಘಾಟಿಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್-ಕಂಬಳದ ಸಂಭ್ರಮದಲ್ಲಿ ಭಾಗಿಯಾದ ಸಾವಿರಾರು ಕಂಬಳಾಭಿಮಾನಿಗಳು

0

ಪುತ್ತೂರು: 31ನೇ ಸಂಭ್ರಮದೊಂದಿಗೆ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಚಾಲನೆ ದೊರೆತಿದೆ. ಕರೆಯಲ್ಲಿ ಪೂಜೆ ಸಲ್ಲಸುವ ಮೂಲಕ ಕಂಬಳಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಗೌರವಾಧ್ಯಕ್ಷತೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಕೆ ಎಸ್ ಅವರ ಗೌರವ ಸಂಚಾಲಕತ್ವದಲ್ಲಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿರವರ ಮಾರ್ಗದರ್ಶನದಲ್ಲಿ ಇತಿಹಾಸ ಪ್ರಸಿದ್ಧ ತುಳುನಾಡ ಜಾನಪದ ಕ್ರೀಡೆಗಳಲ್ಲೊಂದಾದ ಕೋಟಿ- ಚೆನ್ನಯ ಜೋಡುಕರೆ ಕಂಬಳ ನಡೆಯುತ್ತಿದ್ದು, ಶ್ರೀಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಕಂಬಳ ಕೂಟವನ್ನು ಉದ್ಘಾಟಿಸಿದರು.

ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಡಾ.ಆ್ಯಂಟನಿ ಪ್ರಕಾಶ್‌ ಮೊಂತೆರೋ, ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ ರೈ, ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಸುರೇಶ್‌ ಪುತ್ತೂರಾಯ, ಪುತ್ತೂರು ತಾಲೂಕು ಪಂಚಾಯತ್‌ ನ ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ, ಸುದಾನ ದೇವಾಲಯದ ಧರ್ಮಗುರು ರೆ.ಫಾ.ವಿಜಯ್‌ ಹಾರ್ವಿನ್‌, ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್‌, ದಾವಣಗೆರೆ ಮಹಾ ನಗರಪಾಲಿಕೆಯ ಮಾಜಿ ಸದಸ್ಯ ಲಕ್ಷ್ಮಣ ಆರ್, ಧಾರ್ಮಿಕ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಕಡಬ ಒಕ್ಕಲಿಗ ಸಂಘದ ಅಧ್ಯಕ್ಷ ಸುರೇಶ್‌ ಗೌಡ ಬೈಲು, ಮಂಗಳೂರು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಎನ್‌ ಕೆ ಪ್ರಸಾದ್‌, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ್‌ ಸುವರ್ಣ, ಶೇಟ್‌ ಇಲೆಕ್ಟ್ರಾನಿಕ್ಸ್‌ ಮಾಲಕ ರೂಪೇಶ್‌ ಶೇಟ್‌, ವಾಮಂಜೂರು ಸಂಕುಪೂಂಜ ದೇವುಪೂಂಜ ಕಂಬಳ ಸಮಿತಿ ಅಧ್ಯಕ್ಷ ನವೀನ್‌ ಚಂದ್ರ ಆಳ್ವ, ಕ್ವಾಲಿಟಿ ಫಾರ್ಮ್ಸ್‌ ಆ್ಯಂಡ್‌ ಫೀಡ್ಸ್‌ ಮಾಲಕ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಸಂಪ್ಯ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಧವ ಗೌಡ ಕಾಂತಿಲ, ಪುತ್ತೂರು ಎ ಪಿ ಎಂ ಸಿ ಮಾಜಿ ಅಧ್ಯಕ್ಷ ದಿನೇಶ್‌ ಮೆದು, ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಅಶೋಕ್‌ ಪ್ರಭು, ಪುತ್ತೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಲ್‌ ಟಿ ಅಬ್ದುಲ್‌ ರಝಾಕ್‌, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಧರ್ಣಪ್ಪ ಮೂಲ್ಯ, ಪುಣಚದ ಪ್ರಗತಿಪರ ಕೃಷಿಕ ಮಾರಪ್ಪ ಶೆಟ್ಟಿ ಬೈಲುಗುತ್ತು, ನಗರಸಭೆ ಪೌರಾಯುಕ್ತ ಮಧು ಎಸ್‌ ಮನೋಹರ್‌, ಪುತ್ತೂರು ನಗರ ಠಾಣೆ ಇನ್ಸ್‌ ಪೆಕ್ಟರ್‌ ಸುನೀಲ್‌ ಕುಮಾರ್‌ ಎಂ ಎಸ್‌, ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಗೌಡ, ಕೆಯ್ಯೂರು ಶ್ರೀ ಮಹಿಷಮರ್ಧಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚೆನ್ನಪ್ಪ ರೈ ದೇರ್ಲ, ಸಚಿನ್‌ ಟ್ರೇಡಿಂಗ್‌ ಕಂಪೆನಿ ಮಾಲಕ ಮಂಜುನಾಥ್‌ ನಾಯಕ್‌, ಆಕರ್ಷನ್‌ ಬಿಲ್ಡರ್ಸ್‌ ನ ಹಾಜಿ ಅಹಮ್ಮದ್‌, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಅಜಿತ್‌ ಕುಮಾರ್‌ ಜೈನ್‌, ಉಪ್ಪಿನಂಗಡಿ ಶ್ರೀ ರಾಘವೇಂದ್ರ ಮಠದ ಮಾಜಿ ಮೊಕ್ತೇಸರ ಉದಯ‌ ಕುಮಾರ್, ಪುತ್ತೂರು ಶ್ರೀ ನಾರಾಯಣ ಗುರು ಬಿಲ್ಲವ ಸಂಘದ‌ ಅಧ್ಯಕ್ಷ ಸತೀಶ್‌ ಕುಮಾರ್‌ ಕೆಡೆಂಜಿ, ಕುಂಬಾರರ ಗುಡಿಕೈಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಎಂ ಭಾಸ್ಕರ ಪೆರುವಾಯಿ, ಕೆ ಪಿ ಕಾಂಪ್ಲೆಕ್ಸ್‌ ಮಾಲಕ ಫಝಲ್‌ ರಹೀಂ, ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್‌ ಶೆಣೈ, ಉಪ್ಪಿನಂಗಡಿ ಹರಿ ಜ್ಯುವೆಲ್ಲರ್ಸ್‌ ಮಾಲಕ ಗಣೇಶ್‌ ಭಟ್‌, ಪರ್ಪುಂಜ ರಾಮಜಾಲು ಬ್ರಹ್ಮ ಬೈದರ್ಕಳ ಗರಡಿ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಮಹಾಲಿಂಗ ನಾೖಕ್‌ ಪಾಲ್ತಾಡು, ಪಡುಮಲೆ ಗೆಜ್ಜೆಗಿರಿ ನಂದನ ಬಿತ್ತಿಲ್‌ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್‌, ಪುತ್ತೂರು ಮರಾಠ ಸಂಘದ ಅಧ್ಯಕ್ಷ ಮಂಜುನಾಥ್‌ ಎನ್‌ ಎಸ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಇಂದು ಸಂಜೆ ಶಾಸಕ ಅಶೋಕ್‌ ಕುಮಾರ್‌ ರೈ ಅಧ್ಯಕ್ಷತೆಯಲ್ಲಿ, ವಿಧಾನ‌ ಸಭಾಧ್ಯಕ್ಷ ಯು ಟಿ ಖಾದರ್‌ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್‌ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲ್, ಯುವ ಸಬಲೀಕರಣ ಕ್ರೀಡಾ ಹಾಗೂ ಪರಿಶಿಷ್ಟ ವರ್ಗಗಳ ಸಚಿವ ಬಿ.ನಾಗೇಂದ್ರ, ಎಂ.ಆರ್.ಜಿ ಬಂಜಾರ ಗ್ರೂಪ್ಸ್ ಬೆಂಗಳೂರು ಇದರ ಚೆರ್ ಮ್ಯಾನ್ ಪ್ರಕಾಶ್ ಶೆಟ್ಟಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ. ಎನ್.ರಾಜೇಂದ್ರ ಕುಮಾರ್, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಥರ್ ಗೌಡ, ಹಾಸನದ ಶಾಸಕ ಸ್ವರೂಪ್ ಪ್ರಕಾಶ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಢಾರಿ, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮಾಜಿ ಶಾಸಕ .ಜೆ.ಆರ್. ಲೋಬೋ, ಯಕ್ಷಧ್ರುವ ಪೌಂಡೇಶನ್ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಸಹಿತ ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಶೇಷ ಆಕರ್ಷಣೆಯಾಗಿ ಚಲನ ಚಿತ್ರ ನಟ ಪ್ರಜ್ವಲ್‌ ದೇವರಾಜ್‌, ಕಾರ್ತಿಕ್‌ ಜಯರಾಮ್‌ ಜೆ.ಕೆ, ಸೋನು ಗೌಡ, ನೇಹಾ ಗೌಡ, ಗುರುನಂದನ್‌, ಅರವಿಂದ ಬೋಳಾರ್‌, ಅರ್ಜುನ್‌ ಕಾಪಿಕಾಡ್‌ ರೂಪೇಶ್‌ ಶೆಟ್ಟಿ, ಚಂದನ್‌ ಗೌಡ ಭಾಗವಹಿಸಲಿದ್ದಾರೆ.

ರಾಜ್ಯೋತ್ಸವ ಪುರಸ್ಕೃತ ಮಾಣಿಸಾಗು ಉಮೇಶ್‌ ಶೆಟ್ಟಿ, ಎಸ್‌ ಆರ್‌ ಕೆ ಲ್ಯಾಡರ್ಸ್‌ ಕೇಶವ ಗೌಡ, ರಾಜ್ಯೋತ್ಸವ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಖ್ಯಾತ ನಟ ದೀಪಕ್‌ ರೈ ಪಾಣಾಜೆ, ಜೈಗುರು ಆಚಾರ್‌ ಹಿಂದಾರ್‌, ಯಕ್ಷಗಾನ ಕಲಾವಿದ ಶ್ರೀನಿವಾಸ್‌ ರೈ ಅವರಿಗೆ ಕಂಬಳ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ

LEAVE A REPLY

Please enter your comment!
Please enter your name here