ಉಪ್ಪಿನಂಗಡಿ: ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್‌ನ ವಿದ್ಯಾರ್ಥಿಗಳನ್ನು ಉಬಾರ್ ಸ್ಪೋರ್ಟ್ಸಿಂಗ್ ಕ್ಲಬ್‌ನ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಬಾರ್ ಸ್ಪೋರ್ಟ್ಸಿಂಗ್ ಕ್ಲಬ್‌ನ ಅಧ್ಯಕ್ಷ ಶಬೀರ್ ಕೆಂಪಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ವಿನ್ಸೆಂಟ್ ಫೆರ್ನಾಂಡಿಸ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಉಬಾರ್ ಸ್ಪೋರ್ಟ್ಸಿಂಗ್ ಕ್ಲಬ್‌ನ ಸಲಹೆಗಾರ ತೌಸೀಫ್ ಯು ಟಿ, ಮತ್ತು ನಾಸೀರ್ ಗಾಂಧಿ ಪಾರ್ಕ್, ವಾಲಿಬಾಲ್ ಆಟಗಾರ ಹನೀಫ್ ನೆಕ್ಕಿಲಾಡಿ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧೀನ ಸಂಸ್ಥೆಯಾದ ಇಂಡಿಯನ್ ಸ್ಕೂಲ್‌ನ ವಿದ್ಯಾರ್ಥಿಗಳು ಏಳು ಚಿನ್ನದ ಪದಕ, 7 ಬೆಳ್ಳಿ ಪದಕ ಹಾಗೂ 4 ಕಂಚಿನ ಪದಕವನ್ನು ಪಡೆದಿದ್ದರು. ಸಮಾರಂಭದಲ್ಲಿ ಸ್ಪರ್ಧಾರ್ಥಿಗಳು ತಮ್ಮ ಪಾಲಕರೊಂದಿಗೆ ಭಾಗವಹಿಸಿದ್ದರು. ಸಮಾರಂಭದಲ್ಲಿ ತರಬೇತುದಾರ ಶಿಹಾಬ್ ತಂಙಳ್ ಉಪ್ಪಿನಂಗಡಿಯವರನ್ನು ಸನ್ಮಾನಿಸಲಾಯಿತು. ಕ್ಲಬ್ಬಿನ ಸದಸ್ಯರಾದ ಶಬೀರ್ ನಂದಾವರ, ಮೊಹೀನ್ ನಟ್ಟಿಬೈಲು, ಇಬ್ರಾಹಿಂ ಸಿಟಿ ಫ್ಯಾನ್ಸಿ, ಫಯಾಝ್, ಸಿಯಾಕ್ ಕೆಂಪಿ ಮತ್ತು ರಿಯಾಝ್ ಉಪ್ಪಿನಂಗಡಿ ಭಾಗವಹಿಸಿದ್ದರು. ಇರ್ಷಾದ್ ಯು.ಟಿ. ಕಾರ್ಯಕ್ರಮ ನಡೆಸಿಕೊಟ್ಟರು.