ಬಡಗನ್ನೂರು: ಗ್ರಾ.ಪಂ ಸಭಾಂಗಣದಲ್ಲಿ ಕುಷ್ಠ ರೋಗ ಮಾಹಿತಿ ಕಾರ್ಯಾಗಾರ – ಪ್ರತಿಜ್ಞಾವಿಧಿ ಸ್ವೀಕಾರ

0

ಬಡಗನ್ನೂರು: ದ.ಕ.ಜಿ.ಪಂ ಅರೋಗ್ಯ ಮತ್ತು ಕಲ್ಯಾಣ ಇಲಾಖೆ, ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ನೈರ್ಮಾಲ್ಯ ಸಮಿತಿ ಬಡಗನ್ನೂರು, ಪಡುವನ್ನೂರು ಇದರ ವತಿಯಿಂದ ಕುಷ್ಠ ರೋಗ ಮಾಹಿತಿ ಕಾರ್ಯಾಗಾರ ಜ.30ರಂದು ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ ಎಂ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಪಡುವನ್ನೂರು ಉಪಕೇಂದ್ರ ಸಿ.ಯಚ್ ಒ ದಿವ್ಯಶ್ರೀ ಕುಷ್ಠ ರೋಗದ ಮಾಹಿತಿ ನೀಡಿ ಮಾತನಾಡಿ, ಕುಷ್ಠ ರೋಗ ಒಂದು ಸಾಮಾಜಿಕ ಪಿಡುಕು ಅಲ್ಲ, ಇದರ ಬಗ್ಗೆ ಭಯಭೀತಿಯಾಗುವ ಅವಶ್ಯಕತೆ ಇಲ್ಲ, ಕುಷ್ಠ ರೋಗಿಗಳನ್ನು ಯಾವುದೇ ಕಾರಣಕ್ಕೂ ದೂರ ಸರಿಸುವ ಪ್ರಮೇಯ ಬರಕೂಡದು ಎಂದು ಹೇಳಿದ ಅವರು ಬಳಿಕ ಈ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಅಭಿವೃದ್ಧಿ ಅಧಿಕಾರಿ ವಸೀಮ್ ಗಂಧದ್ ಉಪಸ್ಥಿತರಿದ್ದರು.‌

ಈ ಸಂದರ್ಭದಲ್ಲಿ ಸದಸ್ಯರಾದ ರವಿರಾಜ ರೈ ಸಜಂಕಾಡಿ, ವೆಂಕಟೇಶ ಕನ್ನಡ್ಕ, ಕುಮಾರ ಅಂಬಟೆಮೂಲೆ, ವಸಂತ ಗೌಡ ಕನ್ನಯ, ಪದ್ಮನಾಭ ಕನ್ನಡ್ಕ, ಸಂತೋಷ್ ಆಳ್ವ ಗಿರಿಮನೆ, ರವಿಚಂದ್ರ ಸಾರೆಪ್ಪಾಡಿ, ಧರ್ಮೇಂದ್ರ ಕುಲಾಲ್, ಪದಡ್ಕ, ಲಿಂಗಪ್ಪ ಮೋಡಿಕೆ, ಕಲಾವತಿ ಗೌಡ ಪಟ್ಲಡ್ಕ, ಶ್ರೀಮತಿ ಕನ್ನಡ್ಕ, ಸುಜಾತ ಮೈಂದನಡ್ಕ, ಸವಿತಾ ನೇರೋತ್ತಡ್ಕ, ದಮಯಂತಿ ಕೆಮನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ,  ಹಾಗೂ ಆಶಾ ಕಾರ್ಯಕರ್ತೆರಾದ ಸುಜಾತ ಏರಾಜೆ,  ಪುಷ್ಪಾವತಿ, ಡೊಂಬಟೆಗಿರಿ, ಇಂದಿರಾ ಪೆರಿಗೇರಿ, ವಿಜಯಲಕ್ಷ್ಮಿ ಮೇಗಿನಮನೆ ಉಪಸ್ಥಿತರಿದ್ದರು. ಆಶಾ ಜಾನಕಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here