ಪೆರುವಾಯಿ ಗ್ರಾ.ಪಂ ಘನ ತ್ಯಾಜ್ಯ ಘಟಕದ ಆವರಣದಲ್ಲಿ `ಸ್ವಚ್ಛ ಗ್ರಾಮ ಸಂವಾದ ಸಂಕಲ್ಪ’ ಕಾರ್ಯಕ್ರಮ

0

ಪುತ್ತೂರು: ಗ್ರಾ.ಪಂ ಪೆರುವಾಯಿ, ಜನ ಶಿಕ್ಷಣ ಟ್ರಸ್ಟ್, ಸುಗ್ರಾಮ ಸಂಘ ಬಂಟ್ವಾಳ, ಅಂಬಿಕ ಸಂಜೀವಿನಿ ಒಕ್ಕೂಟ ಪೆರುವಾಯಿ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತೆ-ಆರೋಗ್ಯ-ಸಬಲೀಕರಣ-ಅಭಿವೃದ್ಧಿ ಘೋಷ ವಾಕ್ಯದಡಿಯಲ್ಲಿ `ಸ್ವಚ್ಛ ಗ್ರಾಮ ಸಂವಾದ ಸಂಕಲ್ಪ’ ಕಾರ್ಯಕ್ರಮ ಪೆರುವಾಯಿ ಗ್ರಾ.ಪಂ ಘನ ತ್ಯಾಜ್ಯ ಘಟಕದ ಆವರಣದಲ್ಲಿ ಜ.31ರಂದು ನಡೆಯಿತು. ಮುಂದಕ್ಕೆ ಕಾರ್ಯಪಡೆಯನ್ನು ರಚಿಸಿ ಜನರಿಗೆ ಜಾಗೃತಿ ಮೂಡಿಸುವುದು ಮತ್ತು ವರ್ತಕರ ಜೊತೆ ಸಮಾಲೋಚನೆ ನಡೆಸಿ ಸ್ವಚ್ಛತೆ ವಿಚಾರವಾಗಿ ಮನವರಿಕೆ ಮಾಡುವುದು ಹಾಗೂ ಪ್ಲಾಸ್ಟಿಕ್ ಬಳಕೆ ಅಪಾಯಕಾರಿ ಬಗ್ಗೆ ತಿಳಿಸಿಕೊಡುವ ಬಗ್ಗೆ ಚರ್ಚೆ ನಡೆಯಿತು.

ನರೇಗಾ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ, ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸಾ ಕಡೆಂಬಿಲ, ಉಪಾಧ್ಯಕ್ಷೆ ಲಲಿತಾ, ಸದಸ್ಯರಾದ ಬಾಲಕೃಷ್ಣ, ರಶ್ಮಿ, ರಾಜೇಂದ್ರನಾಥ ರೈ, ಸುಗ್ರಾಮ-ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟ ದ.ಕ ಇದರ ಕಾರ್ಯಕ್ರಮ ಸಂಯೋಜಕ ಚೇತನ್ ಕುಮಾರ್, ಪೆರುವಾಯಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಲ್ಫ್ ಡಿಸೋಜ, ಪಿಡಿಓ ಅಶೋಕ್, ಅಂಬಿಕಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶರ್ಮಿಳಾ, ವಿಟ್ಲ ಠಾಣೆಯ ಪೆರುವಾಯಿ ಬೀಟ್ ಪೊಲೀಸ್ ಅಂಬರೀಶ್, ಸಮುದಾಯ ಆರೋಗ್ಯ ಅಧಿಕಾರಿ ಡಾ.ಕೃಷ್ಣಮೂರ್ತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ಮುಖ್ಯ ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿ, ಸ್ವಚ್ಛ ಘಟಕದ ಸ್ವಚ್ಛತಾ ಸೇನಾನಿಗಳು ಹಾಗೂ ಘಟಕದ ವಾಹನ ಸಾರಥಿ, ಒಕ್ಕೂಟ ಸದಸ್ಯರು, ಗ್ರಾಮಸ್ಥರು, ಸಂಘ ಸಂಸ್ಥೆ ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here