ಪುತ್ತೂರು: ಮಹಾಲಿಂಗೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮುಂಡೂರು ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷರಾದ ಭಾರತಿರವರ ಅಧ್ಯಕ್ಷತೆಯಲ್ಲಿ ಮುಂಡೂರಿನಲ್ಲಿ ನಡೆಯಿತು.
ಅತಿಥಿಯಾಗಿದ್ದ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಮಾತನಾಡಿ ಈ ಯೋಜನೆಯು ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಸಹಕಾರಿಯಾಗಿದ್ದು ಮಹಿಳೆಯರಿಗೆ ಆತ್ಮಸ್ಥೈರ್ಯವನ್ನು ತುಂಬುತ್ತದೆ ಎಂದು ಹೇಳಿದರು. ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಉಮೇಶ್ ಅಂಬಟ ಹಾಗೂ ವಲಯ ಮೇಲ್ವಿಚಾರಕಿ ನಮಿತಾ, ಒಕ್ಕೂಟದ ಕಾರ್ಯದರ್ಶಿ ಮಮತಾ, ಗ್ರಾ.ಪಂ ಕಾರ್ಯದರ್ಶಿ ಸೂರಪ್ಪ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕಿ ನಮಿತಾ ಅವರು ವಾರ್ಡ್ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಒಕ್ಕೂಟ ಕಾರ್ಯವೈಖರಿ ಬಗ್ಗೆ ಒಕ್ಕೂಟದ ಸಿಬ್ಬಂದಿಗಳ ಬಗ್ಗೆ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆ ಬಗ್ಗೆ ಮಾಹಿತಿ ನೀಡಿದರು. ವಾರ್ಷಿಕ ಮಹಾಸಭೆ ಮತ್ತು ಲೆಕ್ಕ ಪರಿಶೋಧನೆಯ ವರದಿಯನ್ನು ಕಾರ್ಯದರ್ಶಿ ಮಮತಾ ಮಂಡಿಸಿದರು. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಭವಾನಿ ಮತ್ತು ರಾಧಿಕಾ ಪ್ರಾರ್ಥಿಸಿದರು. ಶ್ರೀದುರ್ಗಾ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಸದಸ್ಯೆ ಚೈತ್ರಾ ಮಧುಚಂದ್ರ ಎಲಿಯ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ರಾಧಿಕಾ ಸ್ವಾಗತಿಸಿದರು. ಭವಾನಿ ವಂದಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಸಿಬ್ಬಂದಿಗಳು, ಸ್ವ ಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.