ನೆಲ್ಯಾಡಿ: ಇಲ್ಲಿಗೆ ಸಮೀಪದ ಕೊಕ್ಕಡ ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ಜ.30ರಂದು ರಾತ್ರಿ ವಾರ್ಷಿಕ ನೇಮೋತ್ಸವ ನಡೆಯಿತು.ಬೆಳಿಗ್ಗೆ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಸಂಜೆ ಶ್ರೀ ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಕೋಟೆ ಚಾಮುಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು. ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಿತು.
ಜ.31ರಂದು ಮಧ್ಯಾಹ್ನದ ವೇಳೆಗೆ ದೈವಗಳ ನೇಮೋತ್ಸವ ಸಂಪನ್ನಗೊಂಡಿತು.ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪವಿತ್ರಪಾಣಿಗಳಾದ ರಾಧಾಕೃಷ್ಣ ಯಡಪಡಿತ್ತಾಯ, ಮಾಯಿಲಕೋಟೆ ದೈವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಉತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪ್ರಧಾನ ಕಾರ್ಯದರ್ಶಿ ಶಾಂತರಾಮ ಎ. ನ್ಯೂ ಆರಿಗ, ಉಪಾಧ್ಯಕ್ಷ ಲಿಂಗಪ್ಪ ಪುತ್ಯೆಮಜಲು, ಕಾರ್ಯದರ್ಶಿ ಜಯಪ್ರಕಾಶ್ ಹಾರ, ಕೋಶಾಧಿಕಾರಿ ಸುರೇಶ್ ಪಡಿಪಂಡ, ಸದಸ್ಯರಾದ ಜಯರಾಮ ನ್ಯೂ ಆರಿಗ, ಜಯಾನಂದ ಬಂಟ್ರಿಯಾಲ್, ಕುಮಾರ್ ಬಳ್ಳಕ, ಗಣೇಶ್ ಕಲಾಯಿ, ಜಯಂತಿ ಹಾರ, ಕುಸುಮ ಪೊಯ್ಯಲೆ, ದಾಮೋದರ ಗೌಡ ಮಡ್ಯಲಗುಂಡಿ, ಗೌರವ್ ಹೊಸಮಜಲು, ಗಣೇಶ್ ಹಾರ, ಮೋಹನ ಕೆಂಪಮುದೇಲು, ಬಾಬು ಪುತ್ಯೆಮಜಲು, ನಾಗೇಶ್ ಹಾರ, ವಾಸುದೇವ ಗೌಡ ಮಂಡೆಕರ, ಮುತ್ತಪ್ಪ ಗೌಡ ಡೆಂಜ, ದಾಮೋದರ ನ್ಯೂ ಆರಿಗ, ಪರಿಚಾರಕರಾದ ದಾಮೋದರ ಪೂಜಾರಿ, ಹೊನ್ನಪ್ಪ ಗೌಡ ಪೊಯ್ಯಲೆ, ಸುಂದರ ಗೌಡ, ಆನಂದ ಗೌಡ, ಶೀನಪ್ಪ ಗೌಡ, ನೇಮಣ್ಣ ಗೌಡ, ಮಾಯಿಲ ವಿಭಾಗದವರು ಸೇರಿದಂತೆ ನೂರಾರು ಮಂದಿ ಭಕ್ತರು ನೇಮೋತ್ಸವದ ವೇಳೆ ಉಪಸ್ಥಿತರಿದ್ದರು.