ಪುತ್ತೂರು: ಪ್ಯಾರಮೆಡಿಕಲ್ ಬೋರ್ಡ್ ಕರ್ನಾಟಕ ನಡೆಸಿದ 2022-23ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರಿನ ಎಚ್ಪಿಆರ್ ಪ್ಯಾರಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಪ್ರಥಮ ವರ್ಷದ ಪ್ಯಾರಮೆಡಿಕಲ್ ವಿಭಾಗದ ಫಾತಿಮ ಅಫೀಫ (88.8%), ಮೈಮುನತ ರಝೀನ (85%), ಪ್ರತೀಕ್ಷಾ. ಬಿ (82.75%), ಫಾತಿಮತ್ ಸಫಾ (82%), ಸಾಹಿದ (81%), ಚರಿಷ್ಮಾ ಕೆ. ಎಲ್ (79%), ಅನಿಶಾ (77%), ನವ್ಯಶ್ರೀ (75.5%), ದ್ವಿತೀಯ ವರ್ಷದ ಡಿಎಂಎಲ್ಟಿ ವಿಭಾಗದ ಜೈನಬತ್ ಅಶ್ನ (86.5%), ಮರಿಯಮ್ಮ ಅಲ್ಮಸ್ (80.62%), ಸ್ಪಂದನ್ ರೈ (79.12%), ಮಾಸಿತಾ ಕೆ (77.5%), ತೃತೀಯ ವರ್ಷದ ಡಿಎಂಎಲ್ಟಿ ವಿಭಾಗದ ರಶ್ಮಿತಾ ಆರ್. ಜೆ (79.6%), ಶ್ವೇತಾ (76.8%) ಹಾಗೂ ಡಿಒಟಿಟಿ/ಎಟಿ ವಿಭಾಗದ ಹರ್ಷಿತಾ ಎ(79.6%), ತನುಜಾ ಸಿ. ಎಚ್ (78%), ಜಯಲಕ್ಷ್ಮಿ ಕೆ (76.6%), ಚಿಂತನಾ ಪಿ.ಆರ್ (76.6%) ಇವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರಥಮ ವರ್ಷದ ವಿದ್ಯಾರ್ಥಿನಿಯಾದ ಚರೀಷ್ಮಾ ಕೆ. ಎಲ್ ಭೌತಶಾಸ್ತ್ರ ವಿಷಯದಲ್ಲಿ 100ರಲ್ಲಿ 100 ಅಂಕ ಪಡೆದು ಉತ್ತಮ ಸಾಧನೆ ಗಳಿಸಿದ್ದಾರೆ.