ಪುತ್ತೂರು:ಪುತ್ತೂರು ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ನೀಡಿದರು.ರಾಮಕೃಷ್ಣ ಸೇವಾಶ್ರಮದಲ್ಲಿ ಲಯನ್ಸ್ ಕ್ಲಬ್ ಚಾರ್ಟರ್ ಸದಸ್ಯ ಹಿರಿಯ ನ್ಯಾಯವಾದಿ ಸುಬ್ರಹ್ಮಣ್ಯಂ ಕೊಳತ್ತಾಯ ಅವರ ಉಪಸ್ಥಿತಿಯಲ್ಲಿ ಸ್ವಾಗತಿಸಲಾಯಿತು.
ಆಶ್ರಮವನ್ನು ವೀಕ್ಷಿಸಿದ ಲಯನ್ಸ್ ಜಿಲ್ಲಾಧ್ಯಕ್ಷ ಪುತ್ತೂರು ಕ್ಲಬ್ ನಿಂದ ಆಶ್ರಮದ ಮಕ್ಕಳಿಗೆ ಕೊಡುಗೆ ನೀಡಿದ ಬೆಡ್ ಶೀಟ್ ಹಸ್ತಾಂತರಿಸಿದರು. ಆಶ್ರಮವನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿರುವ ಆಡಳಿತ ಮಂಡಳಿಯನ್ನು ಅಭಿನಂದಿಸಿ ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯೆ ವತ್ಸಲಾ ರಜನಿ ಸ್ವಾಗತಿಸಿ, ಲಯನ್ ಹರೇಕೃಷ್ಣ ವಂದಿಸಿದರು.