ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರ ಕಚೇರಿ ಬೆಂಗಳೂರಿನ ಶಾಸಕರ ಭವನದಲ್ಲಿ ಆರಂಭ

0

ಕಾಣಿಯೂರು: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿಯು ಬೆಂಗಳೂರು ಶಾಸಕರ ಭವನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ಫೆ.2ರಂದು ಪ್ರಾರಂಭಗೊಂಡಿದೆ.

ಬೆಂಗಳೂರು ಶಾಸಕರ ಭವನ ಕಟ್ಟಡ ಸಂ. 2, 3ನೇ ಮಹಡಿ ಕೊಠಡಿ ಸಂ 335, 336 ರಲ್ಲಿ ಆರಂಭಗೊಂಡಿತು. ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಪ್ರಮುಖರಾದ ಎ. ವಿ ತೀರ್ಥರಾಮ, ರಂಜಿತ್ ಎನ್. ಆರ್, ಸುನಿಲ್ ಕೇರ್ಪಳ್ಳ, ವಸಂತ ನಡುಬೈಲು, ಮಹೇಶ್ ರೈ ಮೇನಾಲ, ಹರೀಶ್ ರೈ ಉಬರಡ್ಕ, ಯೋಗಾನಂದ ಎಣ್ಮೂರು, ಅನೂಪ್ ಆಳ್ವ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here