ಆಲಂಕಾರು:ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು, ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಇವರ ಜಂಟಿ ಆಶ್ರಯದಲ್ಲಿ ದಿ.ಯನ್.ವೇದವ್ಯಾಸ ಆಚಾರ್ಯ ರವರ ಶ್ರದ್ದಾಂಜಲಿ ಸಭೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಭವನದಲ್ಲಿ ಫೆ.3 ರಂದು ನಡೆಯಲಿದೆ.
ಸುಮಾರು40 ವರ್ಷಗಳ ಮೇಲ್ಪಟ್ಟು ಆಡಳಿತ ಧರ್ಮದರ್ಶಿಗಳಾಗಿ, ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ, ಅಲಂಕಾರು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಸ್ಥಾಪಕ ಸದಸ್ಯರಾಗಿ, ಊರ ಹತ್ತು ಹಲವು ಸಂಘ ಸಂಸ್ಥೆಗಳ ಸ್ಥಾಪನೆಗೆ ಕಾರಣಕರ್ತರಾಗಿ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸಂಘಟನೆಗಳ ಮುಂದಾಳಾಗಿ, ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವಲ್ಲಿ, ಕೆಲವು ಕೌಟುಂಬಿಕ ಸಮಸ್ಯೆಯನ್ನು ನ್ಯಾಯಯುತವಾಗಿ ಇತ್ಯರ್ಥಪಡಿಸಿರುವ ಓರ್ವ ಧೀಮಂತ ಮುಂದಾಳುಗಳಾಗಿದ್ದ ಯನ್. ವೇದವ್ಯಾಸ ಆಚಾರ್ಯ ನಗ್ರಿಗುತ್ತು ಜ.8 ರಂದು ದೈವಾಧೀನರಾಗಿದ್ದು ಶ್ರದ್ಧಾಂಜಲಿ ಸಭೆ ನಾಳೆ ನಡೆಯಲಿದೆ.
ದೀಪೋಜ್ವಲನ ನಡೆದ ಬಳಿಕ ಶ್ರೀ ದುರ್ಗಾಂಬಾ ಕಲಾ ಸಂಗಮ ಆಲಂಕಾರಿನ ಅಧ್ಯಕ್ಷ ಗೋಪಾಲಕೃಷ್ಣ ಭಟ್ ನೈಮಿಷ ಪ್ರಸ್ತಾವನೆ ಮಾಡಲಿದ್ದು.ಕಡಬ ತಾಲೂಕಿನ ಉಪತಹಶೀಲ್ದಾರರು
ಆಡಳಿತಾಧಿಕಾರಿ ಗೋಪಾಲ.ಕೆ ಸಭಾದ್ಯಕ್ಷತೆ ವಹಿಸಲಿದ್ದು , ಶ್ರೀ ಗುರುದೇವ ಪದವಿ ಕಾಲೇಜು ಬೆಳ್ತಂಗಡಿಯ ವೃತ್ತ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ, ವೇದಮೂರ್ತಿ ಶ್ರೀ ನರಸಿಂಹ ತಂತ್ರಿಗಳು, ಕುಡುಪು ಕೃಷ್ಣಕುಮಾರ್ ಅತ್ರಿಜಾಲು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅರ್ಬಿ-ಕುಂತೂರು , ಆದಿಶಕ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಶರವೂರಿನ ಅಧ್ಯಕ್ಷ ಲಿಂಗಪ್ಪ ಮಡಿವಾಳ,ಶ್ರೀ ದೇವಿಪ್ರಸಾದ್ ನೀರಾಜೆರವರ ಉಪಸ್ಥಿತಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ.
ಅಪರಾಹ್ನ ಗಂಟೆ 4.೦೦ರಿಂದ 7 .೦೦ರ ವರೆಗೆ ಯಕ್ಷಗಾನ ತಾಳಮದ್ದಳೆ ಪ್ರಸಂಗ ಶ್ರೀಹರಿ ದರ್ಶನ ನಡೆಯಲಿದೆ.ಹಿಮ್ಮೇಳದಲ್ಲಿ ಭಾಗವತರಾಗಿ ಗಾನಕೋಗಿಲೆ ಶ್ರೀ ಎಂ. ದಿನೇಶ ಅಮ್ಮಣ್ಣಾಯ, ಚೆಂಡೆಮದ್ದಳೆ ಚೈತನ್ಯ ಕೃಷ್ಣ ಪದ್ಯಾಣ,ಶ್ರೇಯಸ್ ಪಾಳಂದೆ ನಿರ್ವಹಿಸಲಿದ್ದಾರೆ.
ಮುಮ್ಮೇಳದಲ್ಲಿ
ಮಯೂರಧ್ವಜ ನಾಗಿ ಗಣರಾಜ ಕುಂಬ್ಳೆ,ಶ್ರೀಕೃಷ್ಣನಾಗಿ ರಾಧಾಕೃಷ್ಣ ಕಲ್ಚಾರ್,ಅರ್ಜುನ ನಾಗಿ ಪ್ರಸಾದ್ ಸವಣೂರು,ತಾಮ್ರಧ್ವಜ ನಾಗಿ ಗುಡ್ಡಪ್ಪ ಬಲ್ಯ,ನಾರದನಾಗಿ ರಾಘವೇಂದ್ರ, ಪ್ರಸಾದ್ ಭಟ್ ಟಿ., ಕುಮುದ್ವತಿಯಾಗಿ ನಾರಾಯಣ ಭಟ್ ಬಿ. ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷರು ಹಾಗು ಪದಾಧಿಕಾರಿಗಳು ಆದಿಶಕ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಶರವೂರು ,
ಆಡಳಿತಾಧಿಕಾರಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು, ಆಲಂಕಾರು ಹಾಗೂ ಅರ್ಚಕ ವೃಂದ ಮತ್ತು ಸಿಬ್ಬಂದಿ ವರ್ಗ,ಶ್ರೀ ದುರ್ಗಾಂಬಾ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.