ಸಂತ ಫಿಲೋಮಿನಾ ಕಾಲೇಜಿನ ಆಡಳಿತ ಕಛೇರಿ ಅಧೀಕ್ಷಕ ಜಾನ್‌ ಮೊಂತೆರೋರವರಿಗೆ ಬೀಳ್ಕೊಡುಗೆ  

0

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಳೆದ 38 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ಆಡಳಿತ ಕಛೇರಿ ಅಧೀಕ್ಷಕ ಜಾನ್‌ ಮೊಂತೆರೋರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಕಾಲೇಜಿನ ಸ್ಪಂದನಾ ಸಭಾಭವನದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸಂಚಾಲಕ ಅತಿ ವಂದನೀಯ ಲಾರೆನ್ಸ್‌ ಮಸ್ಕರೇನಸ್‌ “ಜಾನ್‌ ಮೊಂತೆರೋರವರು ತಮ್ಮ ಸೇವಾವಧಿಯುದ್ದಕ್ಕೂ ಅತ್ಯಂತ ಸಮರ್ಪಣಾ ಭಾವನೆಯಿಂದ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಇವರ ನಾಯಕತ್ವ, ದೂರದೃಷ್ಠಿ ಹಾಗೂ ಎಲ್ಲರೊಡನೆ ಹೊಂದಿಕೊಳ್ಳುವ ಸ್ವಭಾವವು ಅನುಕರಣೀಯ ಎಂದರು.

ಮುಖ್ಯ ಅತಿಥಿ ಕಾಲೇಜಿನ ಪ್ರಾಚಾರ್ಯ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೋ “ಜಾನ್‌ ಮೊಂತೆರೋರವರ ಶ್ರದ್ಧೆ, ಬದ್ಧತೆ ಹಾಗೂ ಕರ್ತವ್ಯನಿಷ್ಠೆ ಶ್ಲಾಘನೀಯ. ನಾಯಕತ್ವವೆಂದರೆ ಕೇವಲ ತನಗೆ ದೊರಕಿದ ಜವಾಬ್ದಾರಿಯನ್ನು ನಿರ್ವಹಿಸುವುದು ಮಾತ್ರವಲ್ಲ. ನಿಜವಾದ ನಾಯಕತ್ವವೆಂದರೆ ತನ್ನ ಜೊತೆಗೆ ಕೆಲಸ ಮಾಡುವ ಇತರರ ಸಾಮರ್ಥ್ಯವನ್ನು ಗುರುತಿಸಿ ಅವರನ್ನು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಪ್ರೇರೇಪಣೆ ಮಾಡುವುದು ತಮ್ಮ ಸೇವಾವಧಿಯಲ್ಲಿ ಜಾನ್‌ ಮೊಂತೆರೋರವರು ಕಾಲೇಜಿನ ಆಡಳಿತ ಕಛೇರಿಯ ಕಾರ್ಯಗಳನ್ನು ಸುಗಮವಾಗಿ ಹಾಗೂ ಸಮರ್ಥವಾಗಿ ನಿರ್ವಹಿಸಿದ ರೀತಿ ಪ್ರಶಂಸಾರ್ಹವಾದುದು” ಎಂದು ಹೇಳಿದರು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಪಿ ಎಸ್‌ ಕೃಷ್ಣ ಕುಮಾರ್‌ ಹಾಗೂ ಡಾ. ವಿಜಯ ಕುಮಾರ್‌ ಎಂ ಇವರುಗಳು ಜಾನ್‌ ಮೊಂತೆರೋರವರೊಡನೆ ಬಾಲ್ಯದಲ್ಲಿ ಹಾಗೂ ಕಾಲೇಜಿನಲ್ಲಿ ಕಳೆದ ಕ್ಷಣಗಳನ್ನು ನೆನಪುಗಳನ್ನು ಹಂಚಿಕೊಂಡರು. ಆಡಳಿತ ಕಛೇರಿ ಸಿಬ್ಬಂದಿ ರುಫೀನಾ ಡಿ ಸೋಜರವರು ಜಾನ್‌ ಮೊಂತೆರೋರವರಿಗೆ ಅಭಿನಂದನಾ ಭಾಷಣವನ್ನು ಮಾಡಿದರು.

ಜಾನ್‌ ಮೊಂತೆರೋರವರು ವೃತ್ತಿಜೀವನದುದ್ದಕ್ಕೂ ತಮ್ಮ ಅಚಲವಾದ ಬೆಂಬಲ ಮತ್ತು ಸಹಕಾರಕ್ಕಾಗಿ ಸಂಚಾಲಕರು, ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ವಂದಿಸಿದರು.

ಆಡಳಿತ ಕಛೇರಿ ಸಿಬ್ಬಂದಿಗಳಾದ ಲೀನಾ ಮೆಂಡೋನ್ಸ ಮತ್ತು ವಂದಿತಾ ಪ್ರಾರ್ಥಿಸಿದರು. ಮಾರಿಯೆಟ್‌ ಶೆರ್ಲಿ ಡಿಸೋಜ ಸ್ವಾಗತಿಸಿದರು, ಝೀಟಾ ನೊರೊನ್ಹಾ ವಂದಿಸಿದರು. ಸುದೀಪ್‌ ಕ್ಲೀಟಸ್‌ ವಾಸ್‌ ಕಾರ್ಯಕ್ರಮದ ನಿರೂಪಿಸಿದರು.  ಕಾಲೇಜಿನ ಆಡಳಿತ ಕಛೇರಿಯ ವಿಶ್ರಾಂತ ಸಹಾಯಕ ರಾಬರ್ಟ್‌ ಮೊಂತೆರೋ ಹಾಗೂ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್‌ ರೈ ಹಾಗೂ ಕಾಲೇಜಿನ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here