ಬೇಷರತ್ತು, ಸಂಘಟನೆ ವಿಸರ್ಜಿಸಿ ಬರಬೇಕು ಹಿರಿಯರಲ್ಲಿ ವಿಷಾದ ವ್ಯಕ್ತಪಡಿಸಬೇಕು:ಪುತ್ತಿಲ ಬಿಜೆಪಿ ಸೇರ್ಪಡೆಗೆ 3 ಷರತ್ತು-ಸಂಜೀವ ಮಠಂದೂರು ಹೇಳಿಕೆ ವೈರಲ್:ಕಾರ್ಯಕರ್ತರನ್ನು ಅಣಬೆ ಎಂದ ಮಠಂದೂರು ಮೊದಲು ಕ್ಷಮೆ ಕೇಳಬೇಕು-ಭಾಸ್ಕರ ಆಚಾರ್ ಹಿಂದಾರು

0


ಪುತ್ತೂರು: ಹಿರಿಯರ ಮನಸ್ಸಿಗೆ ನೋವುಂಟು ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದು ಸೇರಿದಂತೆ, ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆಗೆ ಸಂಬಂಧಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೂರು ಷರತ್ತುಗಳನ್ನು ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರ್ಯಕರ್ತರನ್ನು ಅಣಬೆ ಎಂದ ಸಂಜೀವ ಮಠಂದೂರು ಅವರು ಮೊದಲು ಕ್ಷಮೆ ಕೇಳಬೇಕು ಎಂದು ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ಭಾಸ್ಕರ ಆಚಾರ್ ಹಿಂದಾರು ಅವರು ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಚಾರವೂ ವೈರಲ್ ಆಗಿರುವುದು ವರದಿಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವ ಸಿದ್ಧಾಂತದಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಯಾಗುವ ವಿಚಾರ ಕಳೆದ ಕೆಲದಿನಗಳಿಂದ ಭಾರೀ ಚರ್ಚೆಯಲ್ಲಿದೆ.ಈ ನಡುವೆ ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆಯಾಗುವುದಕ್ಕೆ ಸಂಬಂಧಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೂರು ಷರತ್ತುಗಳನ್ನು ನೀಡಿದ್ದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಠಂದೂರು ನೀಡಿದ್ದ ಷರತ್ತುಗಳು: ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕೆ ಬರುವುದಕ್ಕೆ ನಮ್ಮದು ಸ್ವಾಗತವಿದೆ.ಆದರೆ ಯಾವುದೇ ಷರತ್ತಿಲ್ಲದೆ, ನಿಶರತ್ತಿನಿಂದ ಅವರು ಬರಬೇಕು.ಮತ್ತೆ, ಅವರು ಏನು ಸಂಘಟನೆ(ಪುತ್ತಿಲ ಪರಿವಾರ)ಯನ್ನು ಕಟ್ಟಿಕೊಂಡಿದ್ದಾರಾ, ಆ ಸಂಘಟನೆಯನ್ನು ವಿಸರ್ಜನೆ ಮಾಡಿ ಆ ಬಳಿಕ ಪಕ್ಷಕ್ಕೆ ಸೇರ್ಪಡೆಯಾಗಬೇಕು.ಮತ್ತು ಈ ಹಿಂದೆ ಭಾಷಣದಲ್ಲಿ, ಬೇರೆ ಬೇರೆ ಸಂದರ್ಭದಲ್ಲಿ ಹಿರಿಯರ ಬಗ್ಗೆ ಏನೇನು ಉಲ್ಲೇಖ ಮಾಡಿದ್ದಾರೆ,ಅವರಿಗೆ ಮನಸ್ಸಿಗೆ ನೋವು ಉಂಟು ಮಾಡುವಂಥ ಕೆಲಸವನ್ನು ಮಾಡಿದ್ದಕ್ಕೆ ಅವರು ವಿಷಾದ ವ್ಯಕ್ತ ಪಡಿಸಬೇಕು ಎಂದು ಹೇಳಿದ್ದ ಸಂಜೀವ ಮಠಂದೂರು ಅವರು, ಪಕ್ಷಕ್ಕೆ ಬಂದ ಮೇಲೆ ಜವಾಬ್ದಾರಿ ಕೊಡುವ ವಿಚಾರವನ್ನು ಪಕ್ಷ ಬಳಿಕ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದರು.ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕಾರ್ಯಕರ್ತರನ್ನು ಅಣಬೆ ಎಂದ ಮಠಂದೂರು ಮೊದಲು ಕ್ಷಮೆ ಕೇಳಲಿ: ಸಂಜೀವ ಮಠಂದೂರು ಅವರು ನೀಡಿದ್ದ ಷರತ್ತಿನ ವಿಚಾರ ವೈರಲ್ ಆದ ಬೆನ್ನಲ್ಲೇ ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಭಾಸ್ಕರ ಆಚಾರ್ ಹಿಂದಾರು ಅವರು ಪ್ರತಿಕ್ರಿಯೆ ನೀಡಿ, ಱಪಕ್ಷದ ಕಾರ್ಯಕರ್ತರನ್ನು ಅಣಬೆ ಎಂದ ಸಂಜೀವ ಮಠಂದೂರು ಮೊದಲು ಕ್ಷಮೆ ಕೇಳಲಿೞ ಎಂದು ತಿಳಿಸಿರುವ ವಿಚಾರವೂ ವೈರಲ್ ಆಗಿದೆ.
ಭಾಸ್ಕರ ಆಚಾರ್ ಪ್ರತಿಕ್ರಿಯೆ: ಮಾಜಿ ಶಾಸಕ ಮಠಂದೂರುರವರ ಮನೆಯ ಕೆಲಸ ಅರುಣನಿಗೆ ಅಗತ್ಯ ಇಲ್ಲ.ತಮಗೆ ಬೇಕಾದರೆ ಅರುಣ ಕೆಲಸ ಕೊಡಬಹುದು.ಮಾತನಾಡುವಾಗ ನಾಲಿಗೆ ಹಿಡಿತದಲ್ಲಿ ಇರಬೇಕು.ಅಧಿಕಾರದ ಮದ ದುಡ್ಡಿನ ಅಹಂಕಾರ ನಿಲ್ಲಿಸಿ.ಬಿಜೆಪಿ ಬಗ್ಗೆ ನಿಮ್ಮ ಪಾಠ ಅಗತ್ಯ ಇಲ್ಲ.ನಿಮ್ಮಿಂದ ಮೊದಲು ನಾವು ಪಾರ್ಟಿಯಲ್ಲಿ ಇದ್ದವರು.ನಿಮ್ಮ ನಾಲಿಗೆಯಿಂದ ಈ ರೀತಿ ಆದದ್ದು.ಇನ್ನು ಹೀಗೆ ಮಾತನಾಡ್ಬೇಡಿ.ನಿಮ್ಮ ಹಿತೈಷಿ ಭಾಸ್ಕರ ಆಚಾರ್.
ಒಟ್ಟಾರೆಯಾಗಿ ಅರುಣ್ ಕುಮಾರ್ ಪುತ್ತಿಲ ಅವರ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಸಂಜೀವ ಮಠಂದೂರು ಮತ್ತು ಭಾಸ್ಕರ ಆಚಾರ್ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಯಾಗುತ್ತಿದೆ.

ಫೆ. 2ರ ಈ ಬೆಳವಣಿಗೆಗಳ ಕುರಿತು ಫೆ.3ರಂದು ಱಸುದ್ದಿೞಯೊಂದಿಗೆ ಮಾತನಾಡಿರುವ ಸಂಜೀವ ಮಠಂದೂರು ಅವರು ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಪಕ್ಷದ ಜಿಲ್ಲೆ,ರಾಜ್ಯ ಘಟಕದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದ್ದಾರೆ.ಮ್ಯಾಕ್ಸಿಮಂ ಹದಿನೈದು ದಿನಗಳೊಳಗೆ ಎಲ್ಲ ಗೊಂದಲ ಸರಿಯಾಗಲಿದೆ ಎಂದು ಭಾಸ್ಕರ ಆಚಾರ್ ಹಿಂದಾರು ಅವರು ಹೇಳಿದ್ದಾರೆ.


ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ವಿಚಾರ ಜಿಲ್ಲೆ, ರಾಜ್ಯದ ತೀರ್ಮಾನಕ್ಕೆ ನಾವು ಬದ್ಧ -ಮಠಂದೂರು
ಪುತ್ತೂರು:ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಬರುವುದಕ್ಕೆ ಯಾರದ್ದೂ ಅಭ್ಯಂತರವಿಲ್ಲ.ಈ ವಿಚಾರವನ್ನು ನಾವು ಈಗಾಗಲೇ ಸ್ಪಷ್ಟಪಡಿಸಿzವೆ.ಪಕ್ಷದ ನಮ್ಮ ನಾಯಕರೂ ಹೇಳಿದ್ದಾರೆ.ಬೇರೆ ಪಾರ್ಟಿಯಿಂದಲೂ ನಮ್ಮ ಪಕ್ಷಕ್ಕೆ ಬರುವವರಿದ್ದಾರೆ.ಅವರನ್ನೂ ಸ್ವೀಕಾರ ಮಾಡುವ ಕೆಲಸ ಮಾಡಿzವೆ ಎಂದು ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರೂ ಆಗಿರುವ ಸಂಜೀವ ಮಠಂದೂರು ಹೇಳಿದ್ದಾರೆ.
ಸುದ್ದಿ ಜೊತೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ವೈಯಕ್ತಿಕ ವಿಚಾರ ಇಲ್ಲ.ನಮ್ಮಲ್ಲಿ ಸಂಘಟನಾತ್ಮಕ ವಿಚಾರ.ಬಿಜೆಪಿ ಸಿದ್ಧಾಂತ, ತತ್ವ ಇರುವುದು.ಇದಕ್ಕೆ ಪೂರಕವಾಗಿ ಜಿಲ್ಲೆ, ರಾಜ್ಯ ಘಟಕದವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದು ಹೇಳಿದರು.
ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆ ವಿಚಾರದಲ್ಲಿನ ಷರತ್ತುಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಮಠಂದೂರು, ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆ ಕುರಿತು ನಾವು ಪುತ್ತೂರಿನ ಪ್ರಮುಖರು ಚರ್ಚೆ ಮಾಡಿದಾಗ ಕೆಲವೊಂದು ಅಭಿಪ್ರಾಯಗಳು ಬಂತು.ಅದನ್ನು ಮಾಧ್ಯಮಕ್ಕೆ ತಿಳಿಸುವ ಸಂಗತಿಯನ್ನು ನಾನು ಮಾಡಿzನೆ.ಇಲ್ಲಿ ವ್ಯಕ್ತಿಗತವಾಗಿ ನನ್ನ ವೈಯಕ್ತಿಕ ತೀರ್ಮಾನವೇನೂ ಇಲ್ಲ.ನಮ್ಮ ಒಟ್ಟು ತೀರ್ಮಾನ.ಬೇರೆ ಯಾರದ್ದೋ ಹೇಳಿಕೆಗೆ ನಾನು ಪ್ರತಿಕ್ರಿಯಿಸೋದಿಲ್ಲ.ನಾನೊಬ್ಬ ಮಾಜಿ ಶಾಸಕ, ಜಿಲ್ಲಾಧ್ಷಕ್ಷನಾಗಿದ್ದವನು.ಪಕ್ಷದ ಎಲ್ಲ ವಿಚಾರ,ತತ್ವ, ಸಿದ್ಧಾಂತ ತಿಳಿದು ಮಾತನಾಡುತ್ತೇನೆ.ಯಾವುದೇ ವ್ಯಕ್ತಿಗತವಾಗಿ ಒಬ್ಬನ ಬಗ್ಗೆ ನಾನು ಮಾತನಾಡೋದಿಲ್ಲ.ಯಾರೋ ಪ್ರತಿಕ್ರಿಯಿಸುತ್ತಾರೆಂದು ಪ್ರತಿಕ್ರಿಯೆ ಕೊಡಲು ಹೋಗೋದೂ ಇಲ್ಲ.ಒಟ್ಟಾರೆ ಪಕ್ಷದ ಜಿಲ್ಲೆ,ರಾಜ್ಯ ಘಟಕದವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಸಂಜೀವ ಮಠಂದೂರು,ಪುತ್ತೂರು ಬಿಜೆಪಿಯವರು ಬದ್ಧ ಎಂದರು.
ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ.ಇದೊಂದು ರಾಷ್ಟ್ರೀಯ ಪಾರ್ಟಿ,ತತ್ವ, ವಿಚಾರ,ಸಿದ್ಧಾಂತ, ಪೊಲಿಟಿಕಲ್ ಸ್ಟ್ರೆಟಜಿ, ಇಲೆಕ್ಷನ್ ಸ್ಟ್ರೆಟಜಿ ಆಧಾರದಲ್ಲಿ ಚುನಾವಣೆ ಎದುರಿಸುತ್ತದೆ ಎಂದು ಮಠಂದೂರು ಹೇಳಿದರು. ಮಠಂದೂರು ಅವರೊಂದಿಗಿನ ಮಾತುಕತೆ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿದೆ.

ಪುತ್ತಿಲ ಬಿಜೆಪಿಗೆ ಬರ‍್ತಾರೆ ಖಂಡಿತ..ಆದರೆ ಸಮಯ ನಿಶ್ಚಿತವಾಗಿಲ್ಲ ಕ್ಷಮೆ ಕೇಳಲು ಯಾರೂ ಯಾರ ಮನೆಯ ಕೆಲಸಕ್ಕೆ ಹೋಗುವವರಿಲ್ಲ

ಪುತ್ತೂರು:ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಬರ‍್ಬೇಕಾದ್ದು ಹೌದು ಬರ‍್ತಾರೆ ಖಂಡಿತ.ಆದರೆ ಈಗ ಸಮಯ ನಿಶ್ಚಿತವಾಗಿಲ್ಲ.ಎರಡೂ ಕಡೆಯ ಪದಾಧಿಕಾರಿಗಳಲ್ಲಿರುವ ಗೊಂದಲಗಳು ಇದಕ್ಕೆ ಕಾರಣ.ಎಲ್ಲರಿಗೂ ಅವರವರ ಅಸ್ತಿತ್ವದ ಪ್ರಶ್ನೆ ಹೊರತು ಸಂಘಟನೆ ಮೇಲೆ ವಿಶ್ವಾಸ ಕಡಿಮೆ ಇರುವ ಕಾರಣ ಇಂತಹ ಗೊಂದಲ ನಡೆಯುತ್ತಿರೋದು,ಏನಿದ್ದರೂ ಮ್ಯಾಕ್ಸಿಮಂ ಹದಿನೈದು ದಿನಗಳೊಳಗೆ ಈ ಎಲ್ಲ ಗೊಂದಲಗಳೂ ಪರಿಹಾರವಾಗಲಿದೆ ಎಂದು ಭಾಸ್ಕರ ಆಚಾರ್ಯ ಹಿಂದಾರು ಹೇಳಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ನಾಯಕರೆನಿಸಿದವರ ಕೆಲವು ದುರಾಲೋಚನೆಗಳು ಇದಕ್ಕೆಲ್ಲ ಕಾರಣ,ನಾಯಕರು ಬೇರೆ ಬೇರೆ ರೀತಿಯ ಸ್ಟೇಟ್‌ಮೆಂಟ್ ಕೊಡುವ ಕಾರಣ ಇವರು ನನ್ನನ್ನು ಸೋಲಿಸಿಯಾರೋ ಏನೋ ಎನ್ನುವ ಮಾನಸಿಕ ಸಂಶಯ ಅರುಣ್ ಕುಮಾರ್ ಪುತ್ತಿಲನಿಗೆ.ಕಳೆದ ಹದಿನೈದು ವರ್ಷಗಳಲ್ಲಿ ನಾಯಕರೆನಿಸಿದವರು ಬಾಯಿಯಲ್ಲಿ ಹೇಳಿದ ಮಾತಿಗೆ ನಡೆದುಕೊಳ್ಳದ ಕಾರಣ ಈಗ ಅರುಣನಿಗೆ ಸಂಶಯ ಬರಲು ಜಾಸ್ತಿ ಕಾರಣ.ಇನ್ನೇನಿದ್ದರೂ ಮ್ಯಾಕ್ಸಿಮಂ ಹದಿನೈದು ದಿನಗಳೊಳಗೆ ಗೊಂದಲಗಳು ಸರಿಯಾಗಿ ಅರುಣನಿಗೆ ಮತ್ತು ಪುತ್ತೂರಿನ ಜನತೆಗೆ, ಜನರ ಕಷ್ಟ ಸುಖದಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ ಎನ್ನುವುದು ನನ್ನ ಅನಿಸಿಕೆ ಎಂದು ಭಾಸ್ಕರ ಆಚಾರ್ಯ ಹಿಂದಾರು ಹೇಳಿದ್ದಾರೆ.ಗೊಂದಲಗಳನ್ನು ಬೇಗ ಸರಿಪಡಿಸಿಕೊಳ್ಳಲು ಪಕ್ಷದ ರಾಜ್ಯಾಧ್ಯಕ್ಷರು ಸಂಬಂಧಿಸಿದ ಜವಾಬ್ದಾರಿಯಿರುವವರಿಗೆ ಈಗಾಗಲೇ ಸೂಚನೆ ನೀಡಿದ್ದಾರೆನ್ನುವ ಮಾಹಿತಿಯಿದೆ.ರಾಜ್ಯಾಧ್ಯಕ್ಷರ ಮೂಲಕ ಕೆಲವೇ ದಿನಗಳಲ್ಲಿ ಜಿಲ್ಲೆಯ ಬಿಜೆಪಿಯವರ ನೇತೃತ್ವದಲ್ಲಿ ಇದು ತೀರ್ಮಾನವಾಗಬಹುದು ಎಂದರು.
ಕ್ಷಮೆ ಕೇಳಲು ಯಾರು ಯಾರ ಮನೆಯ ಕೆಲಸಕ್ಕೆ ಹೋಗುವವರಿಲ್ಲ: ಮುಂದೆ ಕೆಲವೊಂದು ಹುದ್ದೆಗಳನ್ನು ನಿಧಾನವಾಗಿ ಕೊಡಬಹುದು ಎಂದು ಸಂಘಟನೆಯವರು ಹೇಳಿದ್ದಾರೆ,ಇದು ಸಹಜ.ಬೇಷರತ್ ಬರಬೇಕು ಎನ್ನುವುದೂ ಸಹಜ ಅದು ಸಂಘಟನೆಯ ರೀತಿನೀತಿ ನಿಯಮ, ಅದರೊಟ್ಟಿಗೆ ಪೂರ್ವಭಾವಿಯಾಗಿ ಏನು ಮಾಡಬಹುದು ಎಂದು ಜವಾಬ್ದಾರಿಯಿರುವವರು ಮಾತನಾಡಿ ತೀರ್ಮಾನ ಕೈಗೊಳ್ಳುವುದು ವಾಸ್ತವಿಕ ಎಂದು ಹೇಳಿದ ಭಾಸ್ಕರ ಆಚಾರ್ಯ ಅವರು, ಕ್ಷಮೆ ಕೇಳಲು ಯಾರೂ ಯಾರ ಮನೆಯ ಕೆಲಸಕ್ಕೆ ಹೋಗುವವರು ಯಾರೂ ಇಲ್ಲ ಎಂದರು.
ಬೇರೆ ಬೇರೆ ಕಡೆ ಬೇರೆ ಬೇರೆ ಜನ ಮಾತನಾಡಿರಬಹುದು.ಆದರೆ ಅರುಣ ಪಬ್ಲಿಕ್ ಆಗಿ ಯಾರನ್ನೂ ಟೀಕಿಸಿದ್ದು ನನ್ನ ಗಮನಕ್ಕೆ ಬಂದಿಲ್ಲ.ಹುಚ್ಚು ನಾಲಿಗೆಯಲ್ಲಿ ಮಾತನಾಡುವವರು ಎಷ್ಟು ಸಹ ಇದ್ದಾರೆ,ಕ್ಷಮೆ ಕೇಳಬೇಕಾದ ಪ್ರಮೇಯ ಅಗತ್ಯವಿಲ್ಲ ಎನ್ನುವುದು ನನ್ನ ಭಾವನೆ,ನಾನು ಅರುಣನಲ್ಲಿ ಈ ಬಗ್ಗೆ ಮಾತನಾಡಿಲ್ಲ,ಕ್ಷಮೆ ಕೇಳಬೇಕಾದ ಸಂದರ್ಭ ಬಂದರೆ ದೊಡ್ಡ ದೊಡ್ಡ ಜನ ಹಲವರಿದ್ದಾರೆ.ಆದರೆ, ಪಾಪದವರಿದ್ದಾರೆ ಕ್ಷಮೆ ಕೇಳಲಿ ಎಂದು ಹೇಳುವುದು ತಪ್ಪು,ಅದನ್ನು ನಾನು ಖಂಡಿಸ್ತೇನೆ ಎಂದವರು ಹೇಳಿದರು.
ಸಂಘಟನೆಗೆ ಅರುಣ ಬೇಕು.ಪುತ್ತೂರುಗೆ ದ.ಕ ಜಿಲ್ಲೆಗೆ ಅವರ ಅವಶ್ಯಕತೆ ಇದೆ ಎನ್ನವುದು ನನ್ನ ಭಾವನೆ,ಹುಡುಗರೊಟ್ಟಿಗೆ ಬೆನ್ನು ತಟ್ಟಿ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ದಿಟ್ಟ ನಾಯಕ, ಹೋರಾಟಗಾರ ಅವನು.ಇದು ಇಂದಿನ ಪರಿಸ್ಥಿತಿಗೆ ಅವಶ್ಯಕತೆ ಉಂಟು ಎಂದು ಹೇಳಿದ ಭಾಸ್ಕರ ಆಚಾರ್, ಹಲವು ಸಮಯದಿಂದ ಇದ್ದ ನಾಯಕರಿಗೆ ಸೀಟು ಬಿಟ್ಟುಕೊಡಲು ಮನಸ್ಸಿಲ್ಲ.ಅರುಣ ಬಂದರೆ ನಮಗೆ ತೊಂದರೆಯಾಗಬಹುದು ಎಂದು ರಾತ್ರಿ ಒಂದು, ಬೆಳಿಗ್ಗೆ ಒಂದು ಮಾತನಾಡುವ ಕೆಲವು ನಾಯಕರಿಂದ ಸಮಸ್ಯೆಯಾಗಿದೆ.ಪುತ್ತೂರಿನಲ್ಲಿ ಪುತ್ತಿಲ-ಬಿಜೆಪಿಯ ಸಣ್ಣ ಮಟ್ಟಿಗ ಗುಂಪಿನ ಹಾಗಾಗಿದೆ.ಬಿಜೆಪಿಯವರೇ ಅರುಣನೊಟ್ಟಿಗೆ ಇರುವವರು.ಇದೆಲ್ಲ ಸಮತೋಲನವಾಗಿ ಹೋಗಬೇಕಾದರೆ ಅರುಣನಿಗೆ ನಾಯಕತ್ವ ಬೇಕು,ಆದರೆ, ಪುತ್ತೂರಿನಿಂದ ಸ್ವಲ್ಪ ದೂರದ ನಾಯಕತ್ವ ಸಿಗಲಿ ಎನ್ನುವುದು ಕೆಲವರ ಅಭಿಪ್ರಾಯ,ಪುತ್ತೂರಿನ ನಾಯಕತ್ವ ಅವರಿಗೆ ಕೊಡಬೇಕು ಎನ್ನುವುದು ನಮ್ಮ ಬೇಡಿಕೆ,ಏನಿದ್ದರೂ ಎಲ್ಲವೂ ಸರಿಯಾಗಬಹುದು, ತುಂಬ ದಿನ ಹೋಗಲಿಕ್ಕಿಲ್ಲ, ಅರುಣನಿಗೆ ಸ್ವಲ್ಪ ದಿನದಲ್ಲೇ ಬಿಜೆಪಿಯಲ್ಲಿ ಮೊದಲಿಗಿಂತಲೂ ಜಾಸ್ತಿ ಕೆಲಸ ಮಾಡಲು ಅವಕಾಶ ದೊರೆಯಲಿದೆ ಎನ್ನುವ ನಂಬಿಕೆಯಿದೆ ಎಂದವರು ಹೇಳಿದರು.
ಭಾಸ್ಕರ ಆಚಾರ್ಯ ಹಿಂದಾರು ಅವರೊಂದಿಗಿನ ಮಾತುಕತೆ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿದೆ.

LEAVE A REPLY

Please enter your comment!
Please enter your name here