ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರಾರ್ಥನೆ ಭಜನೆ, ಚೆಂಡೆ ಮೇಳದ ನಿನಾದ
ವೈಭವದ ಮೆರವಣಿಗೆ
ಪುತ್ತೂರು: ಭಕ್ತಿಯಿಂದ ಕೈಮುಗಿದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿರುವ ಸರ್ವೆ ಗ್ರಾಮದ ಎಲಿಯದಲ್ಲಿ ನೆಲೆನಿಂತ ಶ್ರೀ ವಿಷ್ಣುಮೂರ್ತಿ ದೇವರ ದ್ವಿತೀಯ ಪ್ರತಿಷ್ಠಾ ವರ್ಧಂತಿ, ಎಲಿಯ ಜಾತ್ರೋತ್ಸವಕ್ಕೆ ಅದ್ದೂರಿ ಹೊರೆಕಾಣಿಕೆ ಸಮರ್ಪಣೆ ಫೆ.5 ರಂದು ನಡೆಯಿತು. ತಿಂಗಳಾಡಿ ಗಾಂಧಿನಗರದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ತೆಂಗಿನ ಕಾಯಿಯ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ತಿಂಗಳಾಡಿಯಿಂದ ಎಲಿಯ ಶ್ರೀ ಕ್ಷೇತ್ರದ ತನಕ ಭಕ್ತಜನ ಸಮೂಹದೊಂದಿಗೆ ಹಸಿರು ಹೊರೆಕಾಣಿಕೆಯ ವೈಭವದ ಮೆರವಣಿಗೆ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತದೊಂದಿಗೆ ಹೊರೆ ಕಾಣಿಕೆ ಸಮರ್ಪಣೆ ಮಾಡಲಾಯಿತು.
ಶ್ರೀ ಮಾರಿಯಮ್ಮ ದೇವಿ ಮುಂದೆ ಪ್ರಾರ್ಥನೆ
ಹಸಿರು ಹೊರೆಕಾಣಿಕೆಯ ಆರಂಭದಲ್ಲಿ ತಿಂಗಳಾಡಿ ಗಾಂಧಿನಗರದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಮಾರಿಯಮ್ಮ ಸೇವಾ ಸಮಿತಿಯ ಅಣ್ಣು ತಿಂಗಳಾಡಿಯವರು ಪ್ರಾರ್ಥನೆ ಮಾಡುವ ಮೂಲಕ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಲಿ, ಶ್ರೀ ಮಾರಿಯಮ್ಮ ದೇವಿಯ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸಿದರು. ಎಲಿಯ ಜಾತ್ರೋತ್ಸವ ಸಮಿತಿಯ ಗೌರವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಪ್ರಾರ್ಥಸಿ, ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೋತ್ಸವವು ಯಾವುದೇ ವಿಘ್ನಗಳಿಲ್ಲದೆ ಅದ್ಧೂರಿಯಾಗಿ ನಡೆದು ಊರಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಯಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಎಲಿಯ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಶ್ರೀ ಮಾರಿಯಮ್ಮ ಸೇವಾ ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ
ಹಸಿರು ಹೊರೆಕಾಣಿಕೆ ಮೆರವಣಿಗೆಗೆ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ಎಲಿಯ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ರೈ ಸೊರಕೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದ ವಠಾರದಿಂದ ಭಕ್ತಸಮೂಹದೊಂದಿಗೆ ಹಸಿರು ಹೊರೆಕಾಣಿಕೆಯ ವೈಭವದ ಮೆರವಣಿಗೆ ನಡೆಯಿತು. ಸುಮಾರು 1 ಕಿ.ಮೀ ದೂರದವರೆಗೆ ಮೆರವಣಿಗೆ ನಡೆದು ದೇವಸ್ಥಾನದಲ್ಲಿ ಶ್ರೀ ದೇವರ ಎದುರು ಹಸಿರು ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು. ದೇವಳದ ಪ್ರಧಾನ ನಾಗೇಶ ಕಣ್ಣಾರಾಯ ಎಲಿಯರವರು ವಿವಿಧ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪವಿತ್ರಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ಲಕ್ಷ್ಮೀನಾರಾಯಣ ಮಯ್ಯ ಎಲಿಯ, ಸುಜಾತ ಮಯ್ಯ ಎಲಿಯ, ನವೀನ್ ಮಯ್ಯ ಎಲಿಯ ಸೇರಿದಂತೆ ಊರಪರವೂರ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.
ಭಜನೆ, ಚೆಂಡೆ ಮೇಳದ ನಿನಾದ
ಹಸಿರು ಹೊರೆಕಾಣಿಕೆಯ ವಿಶೇಷ ಆಕರ್ಷಣೆಯಾಗಿ ಜಯರಾಜ್ ಸುವರ್ಣ ತಂಡದವರಿಂದ ಭಜನೆ ಮತ್ತು ಪುತ್ತೂರಿನ ಎಸ್‌ಆರ್‌ಕೆ ಚೆಂಡೆ ಮೇಳದ ನಿನಾದ, ಕಲಶ ಹಿಡಿದ ನಾರಿಯರು ಭಕ್ತರನ್ನು ಭಕ್ತಿಯಲ್ಲಿ ತಲ್ಲೀನರಾಗುವಂತೆ ಮಾಡಿತ್ತು. ಊರಪರವೂರ ನೂರಾರು ಭಕ್ತಾಧಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
ಜಾತ್ರೋತ್ಸವದ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತುರವರ ಸಂಚಾಲಕತ್ವದಲ್ಲಿ ಅದ್ಧೂರಿಯಾಗಿ ನಡೆಯಿತು. ಎರಡು ವರ್ಷಗಳ ಹಿಂದೆ ಎಲಿಯ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲೂ ಸೀತಾರಾಮ ರೈಯವರ ಸಂಚಾಲಕತ್ವದಲ್ಲಿ ನಡೆದ ಹೊರೆಕಾಣಿಕೆ ಮರವಣಿಗೆ ಇತಿಹಾಸವನ್ನೇ ಸೃಷ್ಟಿಮಾಡಿತ್ತು. ಹಸಿರು ಹೊರೆಕಾಣಿಕೆಯ ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಗೌರವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷ ಶಿವರಾಮ ರೈ ಸೊರಕೆ, ಕೋಶಾಧಿಕಾರಿ ಮಜಿತ್ ಸುವರ್ಣ ಸೊರಕೆ, ಕಾರ್ಯದರ್ಶಿ ರಜನಿಕಾಂತ ಬಾಳಯ, ಕರುಣಾಕರ ಗೌಡ ಎಲಿಯ, ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಪ್ರಸನ್ನ ರೈ ಮಜಲುಗದ್ದೆ, ಕೆದಂಬಾಡಿಮಠ ರವಿಕುಮಾರ್ ರೈ, ವಿಶ್ವನಾಥ ಶೆಟ್ಟಿ ಸಾಗು, ಆನಂದ ರೈ ಮಠ, ಮಿತ್ರಂಪಾಡಿ ಜಯರಾಮ ರೈ, ಗಣೇಶ್ ನೇರೋಳ್ತಡ್ಕ, ಹೊರೆ ಕಾಣಿಕೆ ಮೆರವಣಿಗೆ ಸಮಿತಿಯ ಉಪ ಸಂಚಾಲಕ ಅಮರ್ ರೈ ದರ್ಬೆ, ಸೂರ್ಯಪ್ರಸನ್ನ ರೈ ಎಂಡೆಸಾಗು, ದೇವಪ್ಪ ಗೌಡ, ಉದಯ ಕುಮಾರ್ ರೈ ಬಾಕುಡ, ಜಯರಾಮ ರೈ ಬಾಳಯ, ಅಶೋಕ್ ರೈ ಸೊರಕೆ, ವಸಂತ ಕುಮಾರ್ ರೈ ಕೆದಂಬಾಡಿಗುತ್ತು, ಬಾಲಚಂದ್ರ ರೈ ಚಾವಡಿ, ಗಿರೀಶ್ ನಾಯ್ಕ ಸೊರಕೆ, ಸದಾನಂದ ಸೊರಕೆ, ಪ್ರವೀಣ್ ಶೆಟ್ಟಿ ತಿಂಗಳಾಡಿ, ರಾಮಚಂದ್ರ ಸೊರಕೆ, ಬಾಲಚಂದ್ರ ಶೆಟ್ಟಿ ಸೊರಕೆ, ಸುನೀತಾ ರೈ ಸೊರಕೆ, ಗೀತಾ ಸೊರಕೆ, ಉಮಾವತಿ ಎಲಿಯ, ಸುಂದರಿ ದರ್ಬೆ, ಲೀಲಾ ದರ್ಬೆ, ಸಂಜೀವ ನಾಯ್ಕ ಸೊರಕೆ, ಸುಂದರ ಗಾಂಧಿನಗರ, ಜಯರಾಮ ರೈ ಬಾಳಯ, ಜಯಾನಂದ ರೈ ಮಿತ್ರಂಪಾಡಿ, ನಿಶಾಂತ್ ರೈ ಸೊರಕೆ, ಉಮೇಶ್ ಸುವರ್ಣ ಸೊರಕೆ, ಸ್ವಸ್ತಿಕ್ ಗೆಳೆಯ ಬಳಕ ನೆಕ್ಕಿಲು ಇದರ ಪದಾಧಿಕಾರಿಗಳು, ಮೀರಾ ಎಸ್.ರೈ ಸೊರಕೆ, ಲಲಿತಾ ಶಿವಪ್ಪ ಗೌಡ, ಶುಭಾಷಿಣಿ ಪೂಂಜಾ ಬಾಕುಡ, ಸವಿನ್ ಗೌಡ ನೇರೋಳ್ತಡ್ಕ, ರವಿ ಕೆದ್ಲಮೂಲೆ, ಪ್ರಜ್ವತ್ ರೈ ಮಿತ್ರಂಪಾಡಿ, ಹರೀಶ್ ಗೌಡ ಎಲಿಯ, ಸುಜಾತ ಬಾಕುಡ, ಪ್ರವೀಣ್ ದರ್ಬೆ, ಅಶೋಕ್ ನೇರೋಳ್ತಡ್ಕ, ಲಿಂಗಪ್ಪ ಅಲಂಗಪ್ಪೆ, ವಿಜಿತ್ ಸುವರ್ಣ ಸೊರಕೆ, ಭವ್ಯ ಪ್ರಭು ನೇರೋಳ್ತಡ್ಕ, ಸುಲೋಚನಾ ರೈ ತಿಂಗಳಾಡಿ, ರಾಜೀವಿ ರೈ ಸೊರಕೆ, ದಿವಾಕರ ತಿಂಗಳಾಡಿ, ಸೋಮಯ್ಯ, ಲಲಿತಾ ರಾಮನಗರ, ಶೇಖರ ಕಲ್ಪಣೆ ಸೇರಿದಂತೆ ನೂರಾರು ಮಂದಿ ಭಕ್ತರು ಉಪಸ್ಥಿತರಿದ್ದರು.
ನಾಳೆ ದರ್ಶನ ಬಲಿ, ಬಟ್ಟಲು ಕಾಣಿಕೆ
ಫೆ.06 ರಂದು ಬೆಳಿಗ್ಗೆ 3 ಕಾಯಿ ಗಣಪತಿ ಹೋಮ, ಸಾನಿಧ್ಯ ಕಲಶಪೂಜೆ, ಪುಣ್ಯಾಹ, ಪಂಚಗವ್ಯ, ಪಂಚಾಮೃತಾಭಿಷೇಕ, ಸಾನಿಧ್ಯ ಕಲಶಾಭಿಷೇಕ ಮತ್ತು ದೇವಳದ ನಾಗಬನದಲ್ಲಿ ನಾಗತಂಬಿಲ ಸೇವೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ರಂಗ ಪೂಜೆ, ಶ್ರೀ ಭೂತ ಬಲಿ, ಸೇವಾ ಸುತ್ತುಗಳು, ನೃತ್ಯಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.