ವಿಟ್ಲ: ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಬಳಿ ಇರುವ ಹನುಮಾನ್ ಕಾಂಪ್ಲೆಕ್ಸ್ ನಲ್ಲಿ ಕಳೆದ 27ವರುಷಗಳಿಂದ ವ್ಯವಹಾರ ನಡೆಸುತ್ತಿರುವ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ ಮತ್ತು ಫರ್ನೀಚರ್ಸ್ ನಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ 500 ರೂಪಾಯಿಯಂತೆ 40 ಕಂತುಗಳನ್ನು ಕಟ್ಟುವ ಲಕ್ಕಿ ಸ್ಕೀಂ ಆರಂಭಿಸಿದ್ದು, ಸ್ಕೀಂ ನ ಪ್ರಥಮ ಡ್ರಾ ಫೆ.5ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು.
ವಿಟ್ಲದ ಹನುಮಾನ್ ಪ್ರಿಂಟರ್ಸ್ ನ ಮಾಲಕರಾದ ವೆಂಕಟೇಶ್ ಭಟ್ ರವರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಕೆನರಾ ಬ್ಯಾಂಕ್ ವಿಟ್ಲ ಶಾಖೆಯ ಚೀಫ್ ಮ್ಯಾನೇಜರ್ ಸಂಜಯ ನವಲಖೆ ಪ್ರಥಮ ಡ್ರಾ ನಡೆಸಿಕೊಟ್ಟರು. ಇಂದಿರಾ ಕಟ್ಟತ್ತಿಲ ಸಾಲೆತ್ತೂರುರವರು ಪ್ರಥಮ ಡ್ರಾ ವಿಜೇರಾಗಿ ಸೋನಿ ಕಂಪೆನಿಯ ಟಿ.ವಿ. ಪಡೆದುಕೊಂಡರು. ಉಳಿದಂತೆ ಗ್ರಾಹಕರಿಗೆ ಆಯೋಜನೆ ಮಾಡಿದ್ದ ಉಚಿತ ಕೂಪನ್ ವಿಜೇತರು ಹತ್ತು ಮಂದಿಯನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ರಮೇಶ್ ಎ. ಬಾಯಾರು ಅಳಕೆಮಜಲು, ತಿಲಕ್ ವಿಟ್ಲ, ಮನ್ಸೂರ್ ಹೋನೆಸ್ಟ್ ಕಾಟೇಜ್, ಹೇಮಾವತಿ ಪಿ. ಚಂದಳಿಕೆ ವಿಟ್ಲ, ದೇವಿಪ್ರಸಾದ್ ವಿ.ಜಿ.ಎಸ್. ಬ್ಯಾಂಕ್ ವಿಟ್ಲ, ಹಿಮಾ ಎಸ್. ನಾಯ್ಕ್ ಉಕ್ಕುಡ, ಲಕ್ಷ್ಮೀ ಎಸ್. ಶೆಟ್ಟಿ ಕುಂಡಡ್ಕ, ನಿಕ್ಷಿತಾ ರೈ ನೀರಕಣಿ ವಿಟ್ಲ, ವೈಶಾನಿ ಕೆ.ಎನ್. ಸ್ವೀಟ್ ಪಾಯಿಂಟ್ ಟೈಲರ್ಸ್ ವಿಟ್ಲ, ಮಾಲತಿ ಅನ್ನ ಮೂಲೆ ವಿಟ್ಲರವರು ಆಯ್ಕೆಯಾಗಿ ಬಹುಮಾನ ಪಡೆದುಕೊಂಡರು.
ಹನುಮಾನ್ ಪ್ರಿಂಟರ್ಸ್ ನ ಮಾಲಕರಾದ ವೆಂಕಟೇಶ್ ಭಟ್ ರವರ ಪತ್ನಿ ಮುಕ್ತಾ ಭಟ್, ವಿಟ್ಲ ಶ್ರೀ ಪಾಂಡುರಂಗ ವಿಠಲ ದೇವಸ್ಥಾನದ ಅರ್ಚಕರಾದ ಕೀರ್ತನ್ ಕೆದಿಲಾಯ, ಶೆಟ್ಟಿ ವಾಚ್ ವರ್ಕ್ ನ ಮಾಲಕರಾದ ಗೋಪಾಲ ಕೃಷ್ಣ ಶೆಟ್ಟಿ, ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜಯರಾಮ ಬಲ್ಲಾಳ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ.ಹೆಚ್., ಕನ್ನಡ ಸಾಹಿತ್ಯ ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ್ ಎಂ. ಬಾಯಾರು, ಕಟ್ಟತ್ತಿಲ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನದ ಅಧ್ಯಕ್ಷರಾದ ರವೀಂದ್ರನಾಥ ಕೆ., ಕೋಶಾಧಿಕಾರಿ ಕೇಶವ ನಾಯಕ್ ಸಾಲ್ಮರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಮಂಜುನಾಥರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೇಣುಕಾ ಕಣಿಯೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರ ಪತ್ನಿ ರಶ್ಮಿಮಂಜುನಾಥ್ ವಂದಿಸಿದರು. ಸಂಸ್ಥೆಯ ಮಾಲಕರ ಪುತ್ರ ಶ್ರೀಶಾಸ್ತ, ಪುತ್ರಿ ಶ್ರೀದೇವಿ ಸೇರಿದಂತೆ ಸಿಬ್ಬಂದಿಗಳು ಸಹಕರಿಸಿದರು.
27 ವರುಷಗಳ ಸೇವಾ ಪರಂಪರೆ:
ಶ್ರೀ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ ಮತ್ತು ಫರ್ನೀಚರ್ ಸಂಸ್ಥೆಯು ಕಳೆದ ಇಪ್ಪತ್ತೇಳು ವರುಷಗಳಿಂದ ವಿಟ್ಲದ ಖಾಸಗಿ ಬಸ್ಸುನಿಲ್ದಾಣದ ಬಳಿ ಇರುವ ಹನುಮಾನ್ ಕಾಂಪ್ಲೆಕ್ಸ್ ನಲ್ಲಿ ವ್ಯವಹಾರ ನಡೆಸುತ್ತಿದ್ದು, ಈ ಭಾಗದ ಜನರ ವಿಶ್ವಾಸಾರ್ಹ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯು ಅತೀ ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಈ ಭಾಗದ ಜನರ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ. ಹಲವಾರು ಗ್ರಾಹಕವರ್ಗವನ್ನು ಹೊಂದಿರುವ ಸಂಸ್ಥೆ ಬೆಳೆದು ಇದೀಗ 28ನೇ ವರುಷಕ್ಕೆ ಪಾದಾರ್ಪಣೆ ಗೈದಿದೆ.
500 ರೂಪಾಯಿಯಂತೆ 40 ಕಂತು:
ಸಂಸ್ಥೆಯೂ 28ನೇ ವರುಷಾಚರಣೆಯ ಸಂದರ್ಭದಲ್ಲಿ ಗ್ರಾಹಕರಿಗೆ ಲಕ್ಕಿ ಸ್ಕೀಂ ಒಂದನ್ನು ಆರಂಭಿಸಿದ್ದು, ಪ್ರತೀ 15 ದಿನಗಳಿಗೊಮ್ಮೆ 500 ರೂಪಾಯಿಯಂತೆ 40 ಕಂತುಗಳು ಪಾವತಿ ಮಾಡಬೇಕಾಗಿದೆ. ಪ್ರತೀ ಹದಿನೈದು ದಿನಗಳಿಗೊಮ್ಮೆ ನಡೆಯುವ ಡ್ರಾದಲ್ಲಿ ವಿಜೇತರಾದವರಿಗೆ ಬೆಲೆಬಾಳುವ ಎಲೆಕ್ಟ್ರೋನಿಕ್ಸ್ ಅಥವಾ ಫರ್ನೀಚರ್ ಐಟಂಗಳು ಲಭಿಸಲಿದೆ. ಡ್ರಾ ವಿಜೇತರಾದ ಸದಸ್ಯರು ಮುಂದಿನ ಕಂತು ಕಟ್ಟ ಬೇಕಾಗಿಲ್ಲ. ಸ್ಕೀಂ ಗೆ ಸೇರಿದ ಸದಸ್ಯರಿಗೆ ಕೊನೆಯಲ್ಲಿ ಹೋಂಡಾ ಆ್ಯಕ್ಟೀವಾ ಗೆಲ್ಲಯವ ಸುವರ್ಣಾವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 7892938713, 9448502272ಯನ್ನು ಸಂಪರ್ಕಿಸಬಹುದಾಗಿದೆ.
ಸ್ಕೀಂಗೆ ಸೇರಿದ ಸದಸ್ಯರಿಗೆ ಉಚಿತ ಅಪಘಾತ ವಿಮಾ ಯೋಜನೆ:
ಮಂಜುನಾಥ ಎಲೆಕ್ಟ್ರೋನಿಕ್ಸ್ ನಲ್ಲಿ ಹೊಸದಾಗಿ ಆರಂಭಿಸಿರುವ ಸ್ಕೀಂಗೆ ಸೇರಿದ ಸದಸ್ಯರಿಗೆ ಒಂದು ಲಕ್ಷ ರೂಪಾಯಿ ಉಚಿತ ಅಪಘಾತ ವಿಮೆ ಲಭಿಸಲಿದೆ. ಸ್ಕೀಂ ಗೆ ಸದಸ್ಯರಾದ ಗ್ರಾಹಕರು ಆ ಕೂಡಲೇ ಅಪಘಾತ ವಿಮಾ ಯೋಜನೆಗೆ ಒಳಪಡಲಿದ್ದಾರೆ.
ಸ್ಕೀಂ ಆರಂಭಿಸಲಾಗಿದೆ – ಎಲ್ಲರ ಸಹಕಾರ ಅಗತ್ಯ
ಕಳೆದ 27 ವರುಷಗಳಿಂದ ವಿಟ್ಲ ದಲ್ಲಿ ವ್ಯವಹರ ನಡೆಸುತ್ತಾ ಬರುತ್ತಿದ್ದೇವೆ. ಗುಣಮಟ್ಟದ ವಸ್ತುಗಳನ್ನು ನೀಡುವ ಮೂಲಕ ಜನಮಣ್ಣನೆಯನ್ನು ಗಳಿಸಿದ್ದೇವೆ. ಇದೀಗ ನಮ್ಮ ಗ್ರಾಹಕರಿಗಾಗಿ ಲಕ್ಕಿ ಸ್ಕೀಂ ನ ಆಯೋಜನೆಯನ್ನು ಮಾಡಿದ್ದೇವೆ. ಲಕ್ಕಿ ಸ್ಕೀಂ ನಲ್ಲಿ ವಿಜೇತರಾದ ಪ್ರತಿಯೋರ್ವರಿಗು ಉತ್ತಮ ವಾರಂಟಿಯೊಂದಿಗೆ ಗುಣಮಟ್ಟದ ವಸ್ತುಗಳು ಲಭಿಸಲಿದೆ. ಸ್ಕೀಂಗೆ ಸೇರ್ಪಡೆಗೊಂಡ ಪ್ರತಿಯೋರ್ವರಿಗೂ ಒಂದು ಲಕ್ಷರೂಪಾಯಿ ಮೌಲ್ಯದ ಅಪಘಾತ ವಿಮೆ ಲಭಿಸಲಿದೆ.
ಮಂಜುನಾಥ
ಮಾಲಕರು
ಶ್ರೀ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ ಮತ್ತು ಫರ್ನೀಚರ್ ವಿಟ್ಲ