ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ-ಚಪ್ಪರ ಮುಹೂರ್ತ

0

ಫೆ.17ರಿಂದ ಫೆ.24ರವರೆಗೆ ಬ್ರಹ್ಮಕಲಶೋತ್ಸವ

ಪುತ್ತೂರು :ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.17ರಿಂದ ಫೆ.24ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು,ಇದರ ಪೂರ್ವಭಾವಿಯಾಗಿ ಫೆ.6ರಂದು ಚಪ್ಪರ ಮುಹೂರ್ತ ನಡೆಯಿತು.ಅರ್ಚಕ ಸರ್ವೇಶ್ ಹೆಬ್ಬಾರ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು , ಸ್ವಾಗತ ಸಮಿತಿಯ ಸದಸ್ಯರಾದ ಪಿ.ಡಿ.ಕೃಷ್ಣ ಕುಮಾರ್ ರೈ ದೇವಸ್ಯ,ಶರತ್ ಕುಮಾರ್ ರೈ ಕಾವು,ವಿಶ್ವನಾಥ ರೈ ಕಳಂಜ,ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ರೈ ನಳೀಲು,ಮೊಕ್ತೇಸರರಾದ ಶ್ರೀನಿವಾಸ್ ಹೆಬ್ಬಾರ್,ಮೋಹನದಾಸ ರೈ ನಳೀಲು,ಸವಣೂರು ಗ್ರಾ.ಪಂ.ಸದಸ್ಯರಾದ ತಾರಾನಾಥ ಬೊಳಿಯಾಲ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ನಳೀಲು, ಪಾಲ್ತಾಡಿ,ಸದಸ್ಯರಾದ ಸುಬ್ರಾಯ ಗೌಡ,ಕಾರ್ಯಾಲಯ ಸಮಿತಿಯ ಸಂಚಾಲಕ ಸುರೇಶ್ ರೈ ವಿಟ್ಲ ಕೊಲ್ಯ, ಸಹ ಸಂಚಾಲಕ ಅಶಿತ್ ಶೆಟ್ಟಿ ಉಬರಡ್ಕ,ಧ್ವನಿ ಮತ್ತು ಬೆಳಕು ಸಮಿತಿಯ ಸಂಚಾಲಕ ಸುಧೀರ್ ಕಟ್ಟಪುಣಿ,ಪ್ರಚಾರ ಸಮಿತಿಯ ಸಂಚಾಲಕ ಸುಧಾಕರ ರೈ ಪಾಲ್ತಾಡಿ ಹೊಸಮನೆ,ಚಂದ್ರ ಶೇಖರ ಪೂಜಾರಿ,ಪ್ರವೀಣ್ ಚೆನ್ನಾವರ,ರಾಜೇಶ್ ಎಂ.ಎಸ್ ಮಾಡಾವು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here