ಪುತ್ತೂರು: ದಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್(ಕೆಎಸ್‌ಸಿಎ) ವತಿಯಿಂದ ಮಂಗಳೂರಿನಲ್ಲಿ ನಡೆದ ‘ಎ’ ಡಿವಿಷನ್ ಪಂದ್ಯದಲ್ಲಿ ಮರ್ಕರ ಕ್ರಿಕೆಟ್ ಅಸೋಸಿಯೇಶನ್ ವಿರುದ್ಧ ಪುತ್ತೂರು ಯೂನಿಯನ್ ಕ್ರಿಕೆಟರ‍್ಸ್‌ಗೆ 70 ರನ್ ಭರ್ಜರಿ ಜಯ ಲಭಿಸಿದೆ.
ಟಾಸ್ ಜಯಿಸಿದ ಯೂನಿಯನ್ ಕ್ರಿಕೆಟರ‍್ಸ್ ಮೊದಲು ಬ್ಯಾಟಿಂಗ್ ಮಾಡಿ 49 ಓವರ್‌ಗಳಲ್ಲಿ 212 ರನ್ ಗಳಿಸಿ ಅಲೌಟಾಯಿತು. ಯೂನಿಯನ್ ಕ್ರಿಕೆಟರ‍್ಸ್ ತಂಡದ ಪರ ಆರಂಭಿಕ ಆಟಗಾರರಾದ ಮಯೂರ್ ರಾವ್(8), ವಿಕೆಟ್ ಕೀಪರ್ ಚಿರಾಂತ್ ಡಿ(4)ರವರು ಬೇಗನೇ ವಿಕೆಟ್ ಚೆಲ್ಲಿದರು. ಬಳಿಕ ವನ್‌ಡೌನ್ ಬ್ಯಾಟರ್ ಅಭಿಕೃಷ್ಣ(40 ರನ್), ಮಧ್ಯಮ ಕ್ರಮಾಂಕದ ಆಟಗಾರ ಚಂದ್ರಕಾಂತ್ ಶೆಟ್ಟಿ(27 ರನ್), ಲೆಶನ್ ತೆಲ್ಲರ್(29 ರನ್), ರಕ್ಷಿತ್ ಕುಮಾರ್(21 ರನ್), ಯಶೋಧರ್ ಎ.ವಿ(19 ರನ್), ಆಕಾಶ್ ಸಾಲಿಯಾನ್, ಮಹಮದ್ ನವಾಜ್(ತಲಾ 14 ರನ್)ನೆರವಿನಿಂದ ತಂಡವು ಗೌರವಾರ್ಥ ಮೊತ್ತ ಗಳಿಸಿತು. ಬಳಿಕ ಬ್ಯಾಟಿಂಗ್ ಮುಂದುವರೆಸಿದ ಮರ್ಕರ ಕ್ರಿಕೆಟ್ ಅಸೋಸಿಯೇಶನ್ ತಂಡವು ಎದುರಾಳಿ ಯೂನಿಯನ್ ಕ್ರಿಕೆಟರ‍್ಸ್ ತಂಡದ ಬೌಲರ್‌ಗಳ ಕರಾರುವಾಕ್ ದಾಳಿಗೆ ತತ್ತರಿಸಿ ಕೇವಲ 152 ರನ್ ಗಳಿಸಿ ಅಲೌಟಾಯಿತು. ಯೂನಿಯನ್ ಕ್ರಿಕೆಟರ‍್ಸ್ ಪರ ಲೆಶನ್ ತೆಲ್ಲರ್(10-0-60-4), ದತ್ತ ಪ್ರಸಾದ್ ಶೆಟ್ಟಿ(4.4-0-25-3), ರಕ್ಷಿತ್ ಕುಮಾರ್(6-2-21-2), ಶೇಖ್ ಅಬ್ದುಲ್ ಅರ್ಫಾನ್(5-೦-17-1)ರವರು ಅಮೋಘ ಪ್ರದರ್ಶನ ನೀಡಿದ್ದಾರೆ ಎಂದು ಕೆಎಸ್‌ಸಿಎ ಪುತ್ತೂರು ಕಾರ್ಯದರ್ಶಿ ವಿಶ್ವನಾಥ್ ನಾಯಕ್, ಯೂನಿಯನ್ ಕ್ರಿಕೆಟರ‍್ಸ್ ತಂಡದ ತರಬೇತುದಾರ ಫಿಲೋಮಿನಾ ಕಾಲೇಜಿನ ದೈಹಿಕ ನಿರ್ದೇಶಕ ಎಲ್ಯಾಸ್ ಪಿಂಟೋ, ಮ್ಯಾನೇಜರ್ ದೀಕ್ಷಿತ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.