ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ `ನೂರೇ ಅಜ್ಮೀರ್’ ಬೃಹತ್ ಆಧ್ಯಾತ್ಮಿಕ ಸಂಗಮ ಫೆ.10ರಂದು ಸಂಜೆ ಗಂಟೆ 7ರಿಂದ ರೆಂಜಲಾಡಿಯಲ್ಲಿ ನಡೆಯಲಿದೆ.
ಕೆ.ಆರ್ ಹುಸೈನ್ ದಾರಿಮಿ ನೇತೃತ್ವದ ಆರ್‌ಐಸಿ ಆಶ್ರಯದಲ್ಲಿ ನಡೆಯುವ ನೂರೇ ಅಜ್ಮೀರ್ ಮಜ್ಲಿಸ್‌ಗೆ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ನೇತೃತ್ವ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಸಯ್ಯದ್ ಸಫ್ವಾನ್ ತಂಙಳ್ ಏಝ್‌ಮಲ, ಸಯ್ಯದ್ ಅಲವಿ ತಂಙಳ್ ಓಲೆಮುಂಡೋವು, ಮಹಮೂದುಲ್ ಫೈಝಿ ಓಲೆಮುಂಡೋವು, ವಿಧಾನಸಭೆಯ ಸಭಾಪತಿ ಯು.ಟಿ ಖಾದರ್, ರಾಜಕೀಯ ಮುಖಂಡರಾದ ಇನಾಯತ್ ಅಲಿ, ಎಂ.ಎಸ್ ಮುಹಮ್ಮದ್, ಉದ್ಯಮಿಗಳಾದ ಅಹ್ಮದ್ ಹಾಜಿ ಆಕರ್ಷಣ್, ಎಲ್.ಟಿ ರಝಾಕ್ ಹಾಜಿ, ಲತೀಫ್ ಗುರುಪುರ, ಇಕ್ಬಾಲ್ ಕೋಲ್ಪೆ, ರಫೀಕ್ ಹಾಜಿ ಕೊಡಾಜೆ, SKIMVB, ಎಂ.ಎಚ್ ಮೊದೀನ್ ಹಾಜಿ, ಉಸ್ಮಾನ್ ಹಾಜಿ ಏರ್ ಇಂಡಿಯಾ ತೋಡಾರ್, ಅಶ್ರಫ್ ಮೈಸೂರು, ಅಬೂಬಕ್ಕರ್ ಹಾಜಿ ಮಂಗಳಾ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ತ್ರೀಯರಿಗೂ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆ ಏರ್ಪಡಿಸಲಾಗಿದ್ದು ಕೊನೆಯಲ್ಲಿ ಅನ್ನದಾನ ನಡೆಯಲಿದೆ. ನೂರೇ ಅಜ್ಮೀರ್ ಮಜ್ಲಿಸ್‌ಗೆ ಈಗಾಗಲೇ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಉಮ್ಮರ್ ಸುಲ್ತಾನ್ ಹಾಗೂ ಪ್ರ.ಕಾರ್ಯದರ್ಶಿ ಪಿ.ಕೆ ಮಹಮ್ಮದ್ ಕೂಡುರಸ್ತೆ ತಿಳಿಸಿದ್ದಾರೆ.