ಬಡಗನ್ನೂರು: ವೃತ್ತಿ ಮತ್ತು ಪ್ರವೃತ್ತಿ ನಡುವಿನ ಸಂಬಂಧ ಜನಮಾನಸವಾದದ್ದು ಎಂದು ಮಾಜಿ ತಾ.ಪಂ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಹೇಳಿದರು. ಅವರು ಬಡಗನ್ನೂರು ಗ್ರಾ.ಪಂ ಸಭಾಂಗಣದಲ್ಲಿ ಫೆ.7ರಂದು ನಡೆದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದರವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿ ಮಾತನಾಡಿದರು.
ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಕರ್ತವ್ಯ ನಿರ್ವಹಿಸಿದ ಒಬ್ಬ ಪ್ರಾಮಾಣಿಕ ಭ್ರಷ್ಟಾಚಾರ ರಹಿತ ದಕ್ಷ ಅಧಿಕಾರಿ ವಸೀಮ ಗಂಧದ. ವ್ಯಕ್ತಿಗೆ ವೃತ್ತಿ ಅಕಸ್ಮಿಕ ನಿವೃತ್ತಿ ಅನಿವಾರ್ಯ, ವೃತ್ತಿ ಮತ್ತು ಪ್ರವೃತ್ತಿ ನಡುವಿನ ಸಂಬಂಧ ಜನಮಾನಸದಲ್ಲಿ ಇರುತ್ತದೆ. ವಸೀಮ ಗಂಧದರವರಿಗೆ ನಿವೃತ್ತಿ ಅಲ್ಲ ವರ್ಗಾವಣೆ. ಇವರಿಗೆ ಇನ್ನೂ ಸುಮಾರು 32 ವರ್ಷ ಕರ್ತವ್ಯ ನಿರ್ವಹಿಸಲು ಅವಕಾಶವಿದೆ. ಮುಂದೆ ಸಿಇಒ ಆಗಿ ಭಡ್ತಿ ಹೊಂದಿ ಸಾಧ್ಯವಾದರೆ ಪುತ್ತೂರನ್ನೇ ಕಾರ್ಯ ಕ್ಷೇತ್ರವಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿ ತಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.
ಬಡಗನ್ನೂರು ಉಪ ಆರೋಗ್ಯ ಕೇಂದ್ರದ ಸಿ.ಹೆಚ್.ಒ ಪ್ರಜ್ಞಾ ಮಾತನಾಡಿ, ಕೊರೋನ ಸಂದರ್ಭದಲ್ಲಿ ಮತ್ತು ಇತರ ಸಮಯದಲ್ಲಿ ಅರೋಗ್ಯ ಇಲಾಖೆ ಕಾರ್ಯಕ್ರಮ ಮಾಡುವಲ್ಲಿ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿದ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಮಾತನಾಡಿ, ಅಧಿಕಾರಿಗಳು ಶಾಶ್ವತ ಅಲ್ಲ. ಆದೇಶ ಬಂದಾಗ ಒಂದು ಭಾಗದಿಂದ ಇನ್ನೊಂದು ಕಡೆ ವರ್ಗಾವಣೆಯಾಗಬೇಕಾಗುತ್ತದೆ. ಜವಾಬ್ದಾರಿ ಇದ್ದ ಕಡೆ ಭಿನ್ನಾಭಿಪ್ರಾಯ ಇರುತ್ತದೆ. ಸದಸ್ಯರು ಅಭಿವೃದ್ಧಿ ವಿಚಾರದಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬದ್ಧರಾಗಬೇಕು. ಬಡಗನ್ನೂರು ಗ್ರಾ.ಪಂ ಸದಸ್ಯರು ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸುತ್ತಾರೆ ಹೊರತು ವೈಯಕ್ತಿಕವಾಗಿ ಅಲ್ಲ. ಉಳಿದ ಪಂಚಾಯತಿಗೆ ಹೋಲಿಸಿದರೆ ಬಡಗನ್ನೂರು ಉತ್ತಮ ಪಂಚಾಯತ್ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಮಾತನಾಡಿ, ವಸೀಮ ಗಂಧದ ಅವರು, ಯಾವುದೇ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ಭ್ರಷ್ಟಾಚಾರ ರಹಿತ ಕರ್ತವ್ಯ ನಿರ್ವಹಿಸಿದ್ದಾರೆ. ಸದಸ್ಯರನ್ನು ಮತ್ತು ಸಿಬ್ಬಂದಿಗಳನ್ನು ತಮ್ಮ ಮನೆಯವರಾಗಿ ಕಂಡಿದ್ದಾರೆ. ಸುಮಾರು 6 ವರ್ಷಗಳ ತಮ್ಮ ಕರ್ತವ್ಯದಲ್ಲಿ ಯಾವುದೇ ಬಗೆಯ ಕಪ್ಪು ಚುಕ್ಕೆ ಬಂದಿಲ್ಲ. ಇಂತಹ ಉತ್ತಮ ಅಧಿಕಾರಿಯನ್ನು ಬಿಟ್ಟು ಕೊಡಲು ಬೇಸರವಾಗುತ್ತದೆ. ಅದರೆ ಇದು ಅನಿವಾರ್ಯ ಎಂದು ಹೇಳಿ ತಮ್ಮ ಮುಂದಿನ ಬಾಳು ಬೆಳಕಾಗಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಸಂತೋಷ್ ಆಳ್ವ ಗಿರಿಮನೆ, ಕಲಾವತಿ ಗೌಡ ಪಟ್ಲಡ್ಕ, ದಮಯಂತಿ ಕೆಮನಡ್ಕ, ಹೇಮಾವತಿ ಮೋಡಿಕೆ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಮೇಗಿನಮನೆ ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸದಸ್ಯರಾದ ವೆಂಕಟೇಶ ಕನ್ನಡ್ಕ, ಕುಮಾರ ಅಂಬಟೆಮೂಲೆ, ವಸಂತ ಗೌಡ ಕನ್ನಯ, ಪದ್ಮನಾಭ ಕನ್ನಡ್ಕ, ಸಂತೋಷ್ ಆಳ್ವ ಗಿರಿಮನೆ, ರವಿಚಂದ್ರ ಸಾರೆಪ್ಪಾಡಿ, ಧರ್ಮೇಂದ್ರ ಕುಲಾಲ್, ಪದಡ್ಕ, ಲಿಂಗಪ್ಪ ಮೋಡಿಕೆ, ಕಲಾವತಿ ಗೌಡ ಪಟ್ಲಡ್ಕ, ಶ್ರೀಮತಿ ಕನ್ನಡ್ಕ, ಸುಜಾತ ಮೈಂದನಡ್ಕ, ಸವಿತಾ ನೇರೋತ್ತಡ್ಕ, ದಮಯಂತಿ ಕೆಮನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ, ಕೊಳ್ತಿಗೆ ಗ್ರಾ.ಪಂ ಲೆಕ್ಕ ಪರಿಶೋಧಕ ಜಯಾಪ್ರಸಾದ್ ರೈ ಕುತ್ಯಾಳ, ಪುತ್ತೂರು ನರೇಗಾ ಇಂಜಿನಿಯರುಗಳಾದ ಪ್ರಶಾಂತಿ ಹಾಗೂ ಅಕಾಂಕ್ಷಾ, ಪಡುವನ್ನೂರು ಸಿ.ಹೆಚ್.ಒ ದಿವ್ಯಶ್ರೀ ಅರೋಗ್ಯ ಕಾರ್ಯಕರ್ತೆ ರು ಆಶಾ ಕಾರ್ಯಕರ್ತೆರು ಮತ್ತು ಗ್ರಾ.ಪಂ ಸಿಬ್ಬಂದಿಗಳು.ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯೆ ಕಲಾವತಿ ಗೌಡ ಸ್ವಾಗತಿಸಿ, ವಂದಿಸಿದರು. ಸದಸ್ಯ ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.