ಬನ್ನೂರು ಶ್ರೀ ದೈಯ್ಯೆರೆ ಮಾಡ ನಡಿಮಾರ್ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

0

ಪುತ್ತೂರು: ಫೆ.21ಮತ್ತು 22ರಂದು ನಡೆಯಲಿರುವ ಬನ್ನೂರು ಶ್ರೀ ದೈಯ್ಯೆರೆ ಮಾಡ ನಡಿಮಾರ್ ಶ್ರೀ ಇಷ್ಟದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ ಕಾರ್ಯಕ್ರಮ ಫೆ.10ರಂದು ನಡಿಮಾರ್ ಕ್ಷೇತ್ರದಲ್ಲಿ ನಡೆಯಿತು. ಹನುಮಾಜೆ ಶ್ರೀಕೃಷ್ಣ ಭಟ್ ಅವರ ವೈದಿಕತ್ವದಲ್ಲಿ ಚಪ್ಪರ ಮುಹೂರ್ತ ನಡೆಯಿತು.

ಈ ಸಂದರ್ಭ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ, ಪ್ರಧಾನ ಕಾರ್ಯದರ್ಶಿ ಮೌನೀಶ್ ಎನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಪ್ರಧಾನ ಕಾರ್ಯದರ್ಶಿ ಬಿ.ರತ್ನಾಕ ರೈ ಕೆಳಗಿನಮನೆ, ಖಜಾಂಚಿ ರಮೇಶ್ ಗೌಡ ನೀರ್ಪಾಜೆ, ಶ್ರೀಕೃಷ್ಣ ಭಟ್ ಕೂಳೂರು, ವಾಸಪ್ಪ ಗೌಡ, ನಾರಾಯಣ ಗೌಡ, ಶೇಷಪ್ಪ ಗೌಡ ಕುಡ್ವ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here