ಬಿಎಎಂಎಸ್ ಪದವಿ ಪರೀಕ್ಷೆ ಡಾ.ಖದೀಜತ್‌ ದಿಲ್ಶಾನರಿಗೆ ರ‍್ಯಾಂಕ್‌

0

ಪುತ್ತೂರು : ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಇವರು ನಡೆಸಿದ ಆಯುರ್ವೇದ ವೈದ್ಯಕೀಯ(ಬಿಎಎಂಎಸ್)‌ ಪದವಿ ಪರೀಕ್ಷೆಯಲ್ಲಿ ಮಾಡಾವಿನ ಡಾ.ಖದೀಜತ್‌ ದಿಲ್ಶಾನರವರು ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಆಯುರ್ವೇದ ವಿಭಾಗದ ಚರಕ ಸಂಹಿತಾ ಪೂರ್ವಾರ್ಧದಲ್ಲಿ ಒಂದನೇ ರ‍್ಯಾಂಕ್‌, ಮೌಲಿಕ ಸಿದ್ದಾಂತದಲ್ಲಿ ಎರಡನೇ ರ‍್ಯಾಂಕ್‌, ರಿಸರ್ಚ್‌ ಮೆಥಾಡೋಲಾಜಿ ವಿಷಯದಲ್ಲಿ ಮೂರನೇ ರ‍್ಯಾಂಕ್‌ ಪಡೆದಿರುವ ಪ್ರತಿಭಾನಿತೆಯಾಗಿರುವ ಡಾ.ಖದೀಜತ್‌ ದಿಲ್ಶಾನರವರು ಪ್ರಸ್ತುತ ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಎಂ ಎಸ್‌ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ. ಇವರು ಕೆಯ್ಯೂರು ಗ್ರಾಮದ ಮಾಡಾವು ಮೊಹಮ್ಮದ್‌ ಕುಂಞಿ ಮತ್ತು ನೆಬಿಸಾ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here