ಸವಣೂರು: ಬಿಜೆಪಿಯಿಂದ ಅಭಿನಂದನಾ ಸಭೆ, ಕಾರ್ಯಕರ್ತರ ಸಮಾವೇಶ

0

ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಸುಭದ್ರ- ಭಾಗೀರಥಿ ಮುರುಳ್ಯ

ಪುತ್ತೂರು: ಸಮರ್ಥ ನಾಯಕತ್ವವನ್ನು ಹೊಂದಿರುವ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ಸುಭದ್ರವಾಗಿ ಉಳಿದಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಫೆ.11 ರಂದು ಸವಣೂರು ಯುವಕ ಮಂಡಲದ ವಠಾರದಲ್ಲಿ ಬಿಜೆಪಿ ಸವಣೂರು-ಪಾಲ್ತಾಡಿ- ಪುಣ್ಚಪ್ಪಾಡಿ-ಬೆಳಂದೂರು ಶಕ್ತಿ ಕೇಂದ್ರದ ಆಶ್ರಯದಲ್ಲಿ ಜರಗಿದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳನ್ನು ನಿರ್ದೇಶಕರುಗಳಾಗಿ ಆಯ್ಕೆ ಮಾಡಿದ ಕಾರ‍್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಭೆ ಮತ್ತು ಕಾರ‍್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಾವಿಂದು ಸುಖವಾಗಿ ಜೀವನವನ್ನು ಸಾಗಿಸುತ್ತಿದ್ದರೆ ಅದಕ್ಕೆ ಮೂಲ ಕಾರಣ ನಮ್ಮ ದೇಶವನ್ನು ಕಾಯುವ ಸೈನಿಕರು, ಈ ಸೈನಿಕರಿಗೆ ಸ್ಪೂರ್ತಿಯನ್ನು ನೀಡಿರುವ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ. ಆಮೂಲಕ ಅವರು ಒಬ್ಬ ಅಪ್ರತಿಮ ಸಾಧಕರಾಗಿದ್ದಾರೆ. ಸವಣೂರು ಭಾಗದಲ್ಲಿ ಬಿಜೆಪಿ ಭದ್ರಕೋಟೆಯಾಗಿ ಬೆಳೆದು ನಿಂತಿದೆ ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ರಕ್ಷಣೆ ಸಾಧ್ಯ- ಹರೀಶ್ : ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಮಾತನಾಡಿ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಸಹಕಾರ ಕ್ಷೇತ್ರದಲ್ಲಿ ಮಾಡಿದೆ. ಬಿಜೆಪಿಯನ್ನು ಜನರು ಒಪ್ಪಿಕೊಂಡಿದ್ದಾರೆ. ಬಿಜೆಪಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ ಎಂದು ಹೇಳಿದರು.


ಒಳ್ಳೆಯ ಸೇವೆ- ತೀರ್ಥರಾಮ್: ಬಿಜೆಪಿ ಹಿರಿಯ ಮುಂದಾಳು ಎ.ವಿ.ತೀರ್ಥರಾಮ್‌ರವರು ಮಾತನಾಡಿ, ರಾಷ್ಟ್ರ ರಕ್ಷಣೆಯ ಕಾಯಕದಲ್ಲಿ ನಾವಿಂದು ಬಿಜೆಪಿಯ ಮೂಲಕ ಸೇವೆಯನ್ನು ಮಾಡುತ್ತಿದ್ದೇವೆ. ಬಿಜೆಪಿಯು ದೇಶದಲ್ಲಿ ಸುಭದ್ರ ಪಕ್ಷವಾಗಿ ಬೆಳೆದು ನಿಂತಿದೆ ಎಂದರು. ಸಹಕಾರ ಭಾರತಿಯ ಮೂಲಕ ನಾವು ಒಳ್ಳೆಯ ಸೇವೆಯನ್ನು ಮಾಡಲು ಸಾಧ್ಯ ಎಂದರು.


ಪವಿತ್ರವಾದ ಕ್ಷೇತ್ರ- ಉದಯ ರೈ : ಸಹಕಾರ ಭಾರತಿ ರಾಜ್ಯ ಮುಖಂಡ ಉದಯ ರೈ ಮಾದೋಡಿರವರು ಮಾತನಾಡಿ, ಸಹಕಾರ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ತ ಎಂದರು.
ವೇದಿಕೆಯಲ್ಲಿ ಬಿಜೆಪಿ ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,, ಸವಣೂರು ಗ್ರಾ.ಪಂ. ಅಧ್ಯಕ್ಷೆ ಸುಂದರಿ ಬಂಬಿಲ, ಶಕ್ತಿಕೇಂದ್ರದ ಪ್ರಮುಖ್ ಇಂದಿರಾ ಬಿ.ಕೆ, ಮೋಹನ್ ಆಗಳಿ, ತಾರಾನಾಥ ಕಾಯರ್ಗ, ಸಹ ಪ್ರಮುಖ್ ಚೇತನ್ ಕುಮಾರ್ ಕೋಡಿಬೈಲು ಉಪಸ್ಥಿತರಿದ್ದರು.


ಗೌರವಾರ್ಪಣೆ: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕರುಗಳಾದ ಗಣೇಶ್ ನಿಡ್ವಣ್ಣಾಯ, ಉದಯ ರೈ ಮಾದೋಡಿ, ಚೆನ್ನಪ್ಪ ಗೌಡ ನೂಜಿ, ಆಶ್ವಿನ್ ಎಲ್.ಶೆಟ್ಟಿ, ಪ್ರಕಾಶ್ ರೈ ಸಾರಕೆರೆ, ಶಿವಪ್ರಸಾದ್ ಕಳುವಾಜೆ, ಸೀತಾಲಕ್ಷ್ಮೀ, ಜ್ಞಾನೇಶ್ವರಿ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ ಬನಾರಿ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಉಪಾಧ್ಯಕ್ಷೆ ಆಶಾ ರೈ ಕಲಾಯಿ, ನಿರ್ದೇಶಕರುಗಳಾದ ಮಮತಾ ದೇವಸ್ಯ, ಗೋಪಾಲಕೃಷ್ಣ ಗೌಡ, ಪ್ರೇಮಚಂದ್ರ ಮೆದು, ಜಯರಾಮ ರೈ ಸೊಂಪಾಡಿ, ಸೂರಪ್ಪ ಗೌಡ ಬದಿಯಡ್ಕ, ಪದ್ಮಯ್ಯ ಗೌಡ ಪರಣೆ, ಗಂಗಾಧರ ಸುಣ್ನಾಜೆ, ಆಶಾಲತಾ ಬರೆಮೇಲು, ಗೀತಾ ಕುದ್ಮನಮಜಲು, ಪ್ರಶಾಂತ್ ಕುಮಾರ್ ಗುಂಡ್ಯಡ್ಕ, ಬಾಬು ಮುಗೇರು, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ, ನಿರ್ದೇಶಕರುಗಳಾದ ಭರತ್ ಅಗಳಿ, ರಾಜೇಶ್ ಮುಂಡಾಳ, ಗಿರಿಜಾ ಅಂಕಜಾಲು, ಕಾಂತಪ್ಪ ಪರವ ಹಾಗೂ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶ್ರೀಧರ್ ಗೌಡ ಅಂಗಡಿಹಿತ್ಲು, ಪಕ್ಷದ ಪ್ರಮುಖರಾದ ಪ್ರಜ್ವಲ್ ಕೋಡಿಬೈಲು, ಜಯಂತ ಆಭೀರ, ಲೋಹಿತಾಕ್ಷ ಕೆಡೆಂಜಿಕಟ್ಟ, ಶೀನಪ್ಪ ಶೆಟ್ಟಿ, ರಾಜೀವಿ ವಿ.ಶೆಟ್ಟಿ ಕೆಡೆಂಜಿ, ಇಂದಿರಾ ಬಿ.ಕೆ, ರಕ್ಷಿತ್ ಕೂಂಕ್ಯ, ಪವನ್ ಮರಕಡ, ಜಯಪ್ರಶಾಂತ್, ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ಜಯಶ್ರೀ ಕುಚ್ಚೆಜಾಲು, ಮಹೇಶ್ ಕೆ.ಸವಣೂರು, ದಿವಾಕರ್ ಗುಂಡ್ಯಡ್ಕ, ರಾಜ್‌ದೀಪಕ್ ಶೆಟ್ಟಿ ಮಠ, ಜಗದೀಶ್ ಇಡ್ಯಾಡಿ, ಸತೀಶ್ ಹೊಸವೊಕ್ಲು, ಚಂಪಾ ಕುಶಾಲಪ್ಪ ಅಭೀರರವರನ್ನು ಗೌರವಿಸಲಾಯಿತು.


ಸನ್ಮಾನ: ಸುಳ್ಯ ಬಿಜೆಪಿ ಮಂಡಲ ಸಮಿತಿಯ ಪ್ರಧಾನ ಕಾರ‍್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಸಿ.ಎ, ಬ್ಯಾಂಕ್ ಮಾಜಿ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯರವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಮುಂದಾಳು ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ನ್ಯಾಯವಾದಿ ಶಕ್ತಿ ಕೇಂದ್ರ ಸಹಪ್ರಮುಖ್ ಮಹೇಶ್ ಕೆ.ಸವಣೂರು ಕಾರ‍್ಯಕ್ರಮ ನಿರೂಪಿಸಿದರು. ಸುಳ್ಯ ಬಿಜೆಪಿ ಕಾರ‍್ಯದರ್ಶಿ ಇಂದಿರಾ ಬಿ.ಕೆ ವಂದಿಸಿದರು. ಸವಣೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಪ್ರಾರ್ಥನೆಗೈದರು, ರಕ್ಷಾ ಸುಣ್ಣಾಜೆ ವೈಯುಕ್ತಿಕ ಗೀತೆ ಹಾಡಿದರು. ಸಭಾ ಕಾರ‍್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here