ಪುತ್ತೂರು: ಜಾಗದ ವಿಚಾರವಾಗಿ ಕೆದಿಲ ಗ್ರಾಮದ ನಿವೃತ್ತ ಯೋಧ ಶಿವರಾಮ್ ಭಟ್ ಮತ್ತು ಅವರ ಪತ್ನಿ ಸವಿತಾ ಭಟ್ ರವರಿಗೆ ಅನ್ಯಕೋಮಿನ ತಂಡವೊಂದು ಹಲ್ಲೆ ನಡೆಸಿರುವುದು ಖಂಡನೀಯ ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕೆಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಆಗ್ರಹಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿಗೆ ಭೇಟಿ ನೀಡಿದ ಸಾಜ ರಾಧಾಕೃಷ್ಣ ಆಳ್ವ ಅವರು ಅನೇಕ ವರ್ಷದಿಂದ ವಾಸ ಮಾಡುತ್ತಾ ಕೃಷಿ ಕೆಲಸ ಮಾಡಿಕೊಂಡು ಬಂದಿರುವ ಕುಟುಂಬ ತಮ್ಮದೇ ಜಾಗದಲ್ಲಿ ಭಯಭೀತಿಯಿಂದ ಬದುಕಬೇಕಾಗಿ ಬಂದಿರುವಂತದ್ದು ಕಳವಳಕಾರಿ.ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪ್ರಧಾನ ಕಾರ್ಯದರ್ಶೀ ನಿತೀಶ್ ಶಾಂತಿವನ ಕೆದಿಲ ಶಕ್ತೀ ಕೇಂದ್ರ ಸಂಚಾಲಕ ಪದ್ಮನಾಭ ಭಟ್ ಜೊತೆಗಿದ್ದರು.
Home ಇತ್ತೀಚಿನ ಸುದ್ದಿಗಳು ಕೆದಿಲದಲ್ಲಿ ಮಾಜಿ ಯೋಧನ ಪತ್ನಿಗೆ ಹಲ್ಲೆ ಪ್ರಕರಣ -ಪೊಲೀಸರು ಗಂಭೀರವಾಗಿ ಪರಿಗಣಿಸಬೇಕೆಂದು ಸಾಜ ರಾಧಾಕೃಷ್ಣ ಆಳ್ವ...