ರಿಫ್ರೆಶ್ ಕೆಫೆಯಲ್ಲಿ ತಿಂಡಿ ಪ್ರಿಯರ ಬಾಯಿ ರುಚಿ ತಣಿಸಿದ ದೋಸೆ ಮೇಳ

0

ಪುತ್ತೂರು: ಬೊಳುವಾರು ಪ್ರಗತಿ ಆಸ್ಪತ್ರೆ ಬಳಿಯಿರುವ ರಿಫ್ರೆಶ್ ಕೆಫೆಯಲ್ಲಿ ಫೆ.09ರಂದು ಉದ್ಘಾಟನೆಗೊಂಡ ಮೂರು ದಿನಗಳ ದೋಸೆ ಮೇಳಕ್ಕೆ ಫೆ.11ರಂದು ತೆರೆ ಬಿತ್ತು.
ದೋಸೆ ಮೇಳದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು ಪಿ ಶಿವಾನಂದ ಅವರು ಮಾತನಾಡಿ, ‘ಕುಟುಂಬ ಸಮೇತರಾಗಿ ಬಂದು ವೈವಿಧ್ಯಮಯ ದೋಸೆಗಳ ರುಚಿಯನ್ನು ಸವಿಯಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಆಯೋಜನೆಗೊಂಡಿರುವ ಈ ದೋಸೆ ಮೇಳಕ್ಕೆ ಈಗಾಗಲೇ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಖುಷಿಯ ವಿಚಾರ, ಯಾವುದೇ ಕಾರ್ಯಕ್ರಮದಲ್ಲೂ ಆಹಾರ ಮೇಳಕ್ಕೆ ಜನರ ರೆಸ್ಪಾನ್ಸ್ ಇದ್ದೇ ಇರುತ್ತದೆ, ಆ ನಿಟ್ಟಿನಲ್ಲಿ ಈ ಪ್ರಯತ್ನದಲ್ಲಿ ಕೈ ಜೋಡಿಸಿರುವ ಎಲ್ಲರಿಗೂ ಅಭಿನಂದನೆ ತಿಳಿಸುವುದಾಗಿ ಹೇಳಿದರು.


ಮೊದಲನೆಯ ದಿನ ಕ್ಯಾರೆಟ್ ದೋಸೆ, ಬೀಟ್ರೋಟ್ ದೋಸೆ, ವೆಜೆಟೇಬಲ್ ದೋಸೆ, ಸ್ಪ್ರಿಂಗ್ ದೋಸೆ, ಚೀನಿಕಾಯಿ ದೋಸೆ, ಟ್ರೈ ಕಲರ್ ದೋಸೆ, ಬಾಳೆಕಾಯಿ ದೋಸೆ, ಎರಡನೆಯ ದಿನ ಮೆಂತೆ ದೋಸೆ, ಪಾಲಕ್ ದೋಸೆ, ಪುದಿನ ದೋಸೆ, ಸಬ್ಬಸಿಗೆ ದೋಸೆ, ನುಗ್ಗೆ ದೋಸೆ, ಹಲಸಿನ ಹಣ್ಣಿನ ದೋಸೆ, ಬೊಂಡ ದೋಸೆ, ಮೂರನೆಯ ದಿನ ಸ್ವೀಟ್ ಕಾರ್ನ್ ದೋಸೆ, ಹೆಸರುಕಾಳು ದೋಸೆ, ಅರೆಕಾಳು ದೋಸೆ, ಮಡಿಕೆಕಾಳು ದೋಸೆ, ಟೊಮೆಟೊ ಆಮ್ಲೆಟ್, ಮ್ಯಾಂಗೋ ದೋಸೆ ಲಭ್ಯವಿರುತ್ತದೆ. ಅಲ್ಲದೇ ಪ್ರತಿದಿನ ಪ್ಲೈನ್ ದೋಸೆ, ತುಪ್ಪ ದೋಸೆ, ಸಾದ ದೋಸೆ, ರವಾ ದೋಸೆ, ರವಾ ಆನಿಯನ್ ದೋಸೆ, ರವಾ ಮಸಾಲೆ ದೋಸೆ, ಮಸಾಲೆ ದೋಸೆ, ಚೀಸ್ ದೋಸೆ, ಮಶ್ರೂಮ್ ದೋಸೆ, ಪನೀರ್ ದೋಸೆ, ಮೈಸೂರು ಮಸಾಲೆ ದೋಸೆ, ಘೀರೋಸ್ಟ್, ಬೆಣ್ಣೆ ಮಸಾಲೆ ದೋಸೆ, ಕೆಂಪಕ್ಕಿ ನೀರು ದೋಸೆ, ಪೇಪರ್ ಮಸಾಲೆ ದೋಸೆಗಳನ್ನು ಸವಿದು ದೋಸೆ ಪ್ರಿಯರು ಖುಷಿಪಟ್ಟರು.


ಆದಿತ್ಯವಾರ ರಾತ್ರಿವರೆಗೂ ದೋಸೆ ಪ್ರಿಯರು ಸರತಿ ಸಾಲಿನಲ್ಲಿ ನಿಂತು ತಮ್ಮ ಇಷ್ಟದ ದೋಸೆಗಳನ್ನು ಪಡೆದುಕೊಂಡು ಸವಿಯುತ್ತಿದ್ದ ದೃಶ್ಯ ಕಂಡುಬಂತು. ದೋಸೆ ಮೇಳಕ್ಕೆಂದೇ ಕನ್ನಡ, ತುಳು, ಮಲಯಾಳಂ ಭಾಷೆಗಳ ಫೇಮಸ್ ಹಾಡುಗಳನ್ನು ದೋಸೆ ಸಾಹಿತ್ಯಕ್ಕೆ ರಿಮಿಕ್ಸ್ ಮಾಡಿ ಮೇಳದುದ್ದಕ್ಕೂ ಪ್ಲೇ ಮಾಡಿದ್ದು ದೋಸೆ ಮೇಳಕ್ಕೆ ಇನ್ನಷ್ಟು ಮೆರುಗು ನೀಡಿತು.

ದೋಸೆ ಮೇಳಕ್ಕೆ ಬೃಜೇಶ್ ಚೌಟ, ಸಹಜ್ ರೈ ಬಳಜ್ಜ ಮತ್ತು ವಿಶ್ವಾಸ್ ರೈ ಭೇಟಿ ನೀಡಿದರು.ವರದರಾಜ ಟ್ರೇಟರ್ಸ್ ನ ವೆಂಕಟರಮಣ, ವಿಶ್ವಪ್ರಸಾದ್ ಸೇಡಿಯಾಪು, ರವಿಕೃಷ್ಣ ಕಲ್ಲಾಜೆ, ಮಲ್ಲೇಶ್ ಆಚಾರ್ಯ, ವಿರೂಪಾಕ್ಷ ಮಚ್ಚಿಮಲೆ, ಮೈತ್ರಿ ಎಲೆಕ್ಟ್ರಿಕಲ್ ಕಂಪೆನಿಯ ರವಿನಾರಾಯಣ, ಕೃಷ್ಣ ಮೋಹನ್ ಪಿ ಎಸ್, ಇಂಜಿನಿಯರ್ ಸತ್ಯನಾರಾಯಣ, ಸುಹಾಸ್ ಮರಿಕೆ ಮೊದಲಾದವರು ಉಪಸ್ಥಿತರಿದ್ದರು.ದಿನೇಶ್ ಪ್ರಸನ್ನ ಕರಿಯಾಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here