ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಶಾಖೆ ವತಿಯಿಂದ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ

0

ರಕ್ತದಾನ ಮಾಡುವುದು ದೇಶ ಪ್ರೇಮದ ಭಾಗ-ಡಾ.ಕೆ.ಎಸ್ ಭಟ್

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಶಾಖೆಯ ಆಶ್ರಯದಲ್ಲಿ ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಕ್ಲಸ್ಟರ್ ಮತ್ತು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದೊಂದಿಗೆ ತಸ್ಲೀಂ ಕಟ್ಟತ್ತಾರು, ಫಯಾಝ್ ತಿಂಗಳಾಡಿ ಹಾಗೂ ಬಾತಿಷಾ ಸುಲ್ತಾನ್ ಕೂಡುರಸ್ತೆ ಸ್ಮರಣಾರ್ಥ ರಕ್ತದಾನ ಶಿಬಿರ ಫೆ.11ರಂದು ತಿಂಗಳಾಡಿ ಜಿಸ್ತಿಯಾ ಮದ್ರಸ ಹಾಲ್‌ನಲ್ಲಿ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಶಾಖೆಯ ಅಧ್ಯಕ್ಷ ಅಬ್ದುಲ್ ಸಮದ್ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಇಸ್ಮಾಯಿಲ್ ಕೌಸರಿ ದುವಾ ನೆರವೇರಿಸಿದರು. ಗಾಳಿಮುಖ ಮುದರ್ರಿಸ್ ಆದಂ ದಾರಿಮಿ ಸಭೆ ಉದ್ಘಾಟಿಸಿ ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯದ ಮಾಜಿ ಪ್ರ.ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ ಮಾತನಾಡಿ ರಕ್ತದಾನ ಶ್ರೇಷ್ಠ ದಾನವಾಗಿದ್ದು ಯಾರದೋ ರಕ್ತ ಇನ್ಯಾರದೋ ದೇಹಕ್ಕೆ ಸೇರುವಾಗ ಅದರಲ್ಲಿ ಜಾತಿ, ಧರ್ಮದ ವ್ಯತ್ಯಾಸ ಇರುವುದಿಲ್ಲ, ರಕ್ತದಾನದ ಮೂಲಕ ಅಗಲಿದ ಸಹೋದರರ ಸ್ಮರಣೆ ಮಾಡುವುದು ಪುಣ್ಯದ ಕಾರ್ಯ ಎಂದು ಹೇಳಿದರು.

ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯಾಧಿಕಾರಿ ಡಾ.ಕೆ.ಎಸ್ ಭಟ್ ಮಾತನಾಡಿ ರಕ್ತದಾನದ ಮಹತ್ವ ಮತ್ತು ರಕ್ತದಾನ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ರಕ್ತದಾನ ಮಾಡುವುದು ದೇಶ ಪ್ರೇಮದ ಭಾಗವೂ ಆಗಿದೆ ಎಂದು ಅವರು ಹೇಳಿದರು.

ರಕ್ತದಾನಿ ಬಳಗ ದ.ಕ ಜಿಲ್ಲಾ ಉಸ್ತುವಾರಿ ಇಬ್ರಾಹಿಂ ಕಡವ, ಪತ್ರಕರ್ತ ಯೂಸುಫ್ ರೆಂಜಲಾಡಿ, ಎಸ್ಕೆಎಸ್ಸೆಸ್ಸೆಫ್ ಕೂಡುರಸ್ತೆ ಶಾಖೆಯ ಅಧ್ಯಕ್ಷ ಮಜೀದ್ ಬಾಳಾಯ, ಕುಂಬ್ರ ಕೆಐಸಿ ಮ್ಯಾನೇಜರ್ ಸತ್ತಾರ್ ಕೌಸರಿ, ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಉಸ್ತುವಾರಿ ಜಯರಾಜ್ ಭಂಡಾರಿ ಮೊದಲಾದವರು ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜಿಸ್ತಿಯಾ ಮದ್ರಸ ಕಮಿಟಿಯ ಗೌರವಾಧ್ಯಕ್ಷ ಮಹಮ್ಮದ್ ಹಾಜಿ ಸಂತೋಷ್, ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಪ್ರ.ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಶಾಖೆಯ ಅಧ್ಯಕ್ಷ ಅಬ್ದುಲ್ ಅಝೀಝ್ ರೆಂಜಲಾಡಿ, ಉದ್ಯಮಿಗಳಾದ ಇಬ್ರಾಹಿಂ ಅಜ್ಜಿಕಲ್ಲು, ಹಾಶಿರ್ ನಂಜೆ, ನಾಸಿರ್ ಅಜ್ಜಿಕ್ಕಲ್, ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಕ್ಲಸ್ಟರ್ ಅಧ್ಯಕ್ಷ ಅಶ್ರಫ್ ದಟ್ಟ ಮಾಡಾವು, ಎಸ್ಕೆಎಸ್ಸೆಸ್ಸೆಫ್ ಕಟ್ಟತ್ತಾರು ಶಾಖೆಯ ಅಧ್ಯಕ್ಷ ಕೆ.ಪಿ ಅಶ್ರಫ್ ಉಪಸ್ಥಿತರಿದ್ದರು.

ಇಬ್ಬರು ರಕ್ತದಾನಿಗಳಿಗೆ ಸನ್ಮಾನ:
34 ಬಾರಿ ರಕ್ತದಾನ ಮಾಡಿರುವ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ 20ನೇ ಬಾರಿ ರಕ್ತದಾನ ಮಾಡಿದ ರೋಹಿತ್ ಭಟ್ ಎಲಿಯ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

55 ಮಂದಿ ರಕ್ತದಾನ:
ಶಿಬಿರದಲ್ಲಿ ಒಟ್ಟು 55 ಮಂದಿ ರಕ್ತದಾನ ಮಾಡಿದರು.

ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಅಧ್ಯಕ್ಷ ಮನ್ಸೂರ್ ಅಸ್ಲಮಿ, ಕೋಶಾಧಿಕಾರಿ ಕೆ.ಎಚ್ ಮಹಮ್ಮದ್, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಕ್ಲಸ್ಟರ್ ಅಧ್ಯಕ್ಷ ಅಝರುದ್ದೀನ್ ಕೂಡುರಸ್ತೆ, ತಿಂಗಳಾಡಿ ಟ್ರಸ್ಟ್ ಕೇರ್ ಕ್ಲಿನಿಕ್‌ನ ಮಹಮ್ಮದ್ ಅಲಿ, ಗಲ್ಫ್ ಉದ್ಯಮಿ ನಾಸಿರ್ ರೆಂಜಲಾಡಿ, ಯೂಸುಫ್ ನಿಡ್ಯಾಣ, ಉದ್ಯಮಿಗಳಾದ ಹಾರಿಸ್ ಕೂಡುರಸ್ತೆ, ಹಿದಾಯತ್ ಕಣ್ಣೂರು, ಜಿಸ್ತಿಯಾ ಮದ್ರಸದ ಕಾರ್ಯದರ್ಶಿ ಅಬ್ದುಲ್ಲ ಪಟ್ಟೆ, ಕೋಶಾಧಿಕಾರಿ ಹಮೀದ್ ದರ್ಬೆ, ಉಪಾಧ್ಯಕ್ಷ ಮಹಮ್ಮದ್ ಕುಂಞಿ ಪಟ್ಟೆ, ಹನೀಫ್ ಅಸ್ಲಮಿ ಕೆ.ಎಸ್ ಓಲೆಮುಂಡೋವು, ಉದ್ಯಮಿಗಳಾದ ಇಮ್ರಾನ್ ಮಲ್ನಾಡ್, ಸಾದಿಕ್ ಬಾಳಾಯ, ಎಸ್ಕೆಎಸ್ಸೆಸ್ಸೆಫ್ ಮಾಡಾವು ಶಾಖೆಯ ಅಧ್ಯಕ್ಷ ನಿಝಾಮ್ ಮಾಡಾವು, ತ್ಯಾಗರಾಜೆ ಶಾಖೆಯ ಅಧ್ಯಕ್ಷ ಶರೀಫ್ ಮತ್ತಿತರರು ಆಗಮಿಸಿ ಶುಭ ಹಾರೈಸಿದರು.

ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಕ್ಲಸ್ಟರ್ ಪ್ರ.ಕಾರ್ಯದರ್ಶಿ ರಶೀದ್ ಯಮಾನಿ ಕಟ್ಟತ್ತಾರ್ ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಶಾಖೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಸೊರಕೆ ವಂದಿಸಿದರು. ಝುಬೈರ್ ಕುಂತೂರು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅಬ್ದುಲ್ ಲತೀಫ್ ಅಂಙತ್ತಡ್ಕ, ಜಬ್ಬಾರ್ ಓಲೆಮುಂಡೋವು, ಹಾರಿಸ್ ಬೋಳೋಡಿ, ಲತೀಫ್ ಓಲೆಮುಂಡೋವು, ಜಬ್ಬಾರ್ ಅಂಙತ್ತಡ್ಕ, ಹಮ್ಸೀದ್ ಓಲೆಮುಂಡೋವು, ಶರೀಫ್ ಟಿ.ಎ, ರಫೀಕ್ ಟಿ.ಎಂ, ಹಮೀದ್ ಟಿ.ಎಂ, ಮಜೀದ್ ಟಿ.ಎಂ, ಶರೀಫ್ ಬಲ್ಕಾಡ್, ಶಕೀಲ್ ಬೇರಿಕೆ, ಹಾರಿಸ್ ತೋಟ, ಸೈಯದ್ ತೋಟ, ಲತೀಫ್ ಅದ್ರೋಡಿ, ಇಸ್ಮಾಯಿಲ್ ಪೆರ್ಲ, ಸುಫ್ಯಾನ್ ಮಜಲುಗದ್ದೆ ಸಹಕರಿಸಿದರು.

LEAVE A REPLY

Please enter your comment!
Please enter your name here