ಅಡುಗೆ ಸಿಬ್ಬಂದಿ ದೌರ್ಜನ್ಯ-ಹಾಸ್ಟೆಲ್‌ ವಿದ್ಯಾರ್ಥಿಗಳ ಪ್ರತಿಭಟನೆ-ಸಿಬ್ಬಂದಿ ಬದಲಾವಣೆಗೆ ಫೆ.15ರ ಗಡುವು

0

ಈಶ್ವರಮಂಗಲ: ಈಶ್ವರಮಂಗಲದಲ್ಲಿರುವ ಮೆಟ್ರಿಕ್‌ ಪೂರ್ವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಸತಿ ಗೃಹದ ಅಡುಗೆ ಸಿಬ್ಬಂದಿಯನ್ನು ಬದಲಾಯಿಸುವಂತೆ ಒತ್ತಾಯಿಸಿ ಹಾಸ್ಟೆಲ್‌ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಫೆ.12ರಂದು ನಡೆದಿದೆ.

ವಸತಿಗೃಹದ ಅಡುಗೆ ಸಿಬ್ಬಂದಿ ಮಹಮ್ಮದ್‌ ನಜೀತ್‌ ಎಂಬಾತ ನಿಲಯದಲ್ಲಿರುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿರುವ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಯನ್ನು ಬದಾಲಯಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು, ಸಿಬ್ಬಂದಿ ಬದಲಾವಣೆಗೆ ಫೆ.15ರವರೆಗಿನ ಗಡುವು ನೀಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಾಸ್ಟೆಲ್‌ ವಾರ್ಡನ್‌ ಅಕ್ಷತಾ ಸ್ಥಳಕ್ಕೆ ಭೇಟಿ ನೀಡಿ ಹಾಸ್ಟೆಲ್‌ ಮಕ್ಕಳ ಜೊತೆ ಮಾತುಕತೆ ನಡೆಸಿದ್ದಾರೆ. ಮಕ್ಕಳ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ನೀಡಿ ಮಕ್ಕಳನ್ನು ಸಮಾಧಾನ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಈಶ್ವರಮಂಗಲ ಹೊರಠಾಣೆಯ ಎಎಸ್‌ಐ ಚಂದ್ರಶೇಖರ್‌ ಸಿಬ್ಬಂದಿ ಲೋಕೇಶ್‌, ಗ್ರಾ,ಪಂ ಉಪಾಧ್ಯಕ್ಷ ರಾಮ ಮೇನಾಲ ಉಪಸ್ಥಿತರಿದ್ದರು. ಕೆಲ ದಿನಗಳ ಹಿಂದೆ ನಡೆದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್‌ ನ ಸಾಮಾನ್ಯ ಸಭೆಯಲ್ಲಿ ಸಿಬ್ಬಂದಿ ದೌರ್ಜನ್ಯದ ವಿಚಾರ ಪ್ರಸ್ತಾಪವಾಗಿತ್ತು.

LEAVE A REPLY

Please enter your comment!
Please enter your name here