ಪುತ್ತೂರು: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಪುತ್ತೂರು ಇವರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದೊಂದಿಗೆ 75ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ, ಗಣರಾಜ್ಯೋತ್ಸವದ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಮಟ್ಟದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಭಾಷಣ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅದರ ಬಹುಮಾನ ವಿತರಣಾ ಕಾರ್ಯಕ್ರಮ ಹಾಗು ಕಸಾಪ ಪುತ್ತೂರು ವೆಬ್ ಸೈಟ್ ಮೊಬೈಲ್ ಆವೃತ್ತಿ ಅನಾವರಣ ಕಾರ್ಯಕ್ರಮ ಫೆ.14ರಂದು ಪುತ್ತೂರಿನ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಬಹುಮಾನ ನಡೆಯಲಿದೆ. ಪುತ್ತೂರು ತಾಲೂಕಿನ ಸುಮಾರು 80 ಶಾಲೆಯ 700 ವಿದ್ಯಾರ್ಥಿಗಳು ಬಹುಮಾನವನ್ನು ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪುತ್ತೂರಿನ ಮಾನ್ಯ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಐ.ಎ.ಎಸ್, ತಹಸಿಲ್ದಾರರಾದ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ಆರ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಗ್ರಾಮ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಭಾಗವಹಿಸಲಿದ್ದಾರೆ.ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ಇವರಿಂದ ಹಾಸ್ಯ ಪ್ರಹಸನ ನಡೆಯಲಿದೆ.
ತಾಲೂಕು ಮಟ್ಟದ ಸ್ಪರ್ಧೆಯ ವಿಜೇತರ ವಿವರಗಳು ಇಂತಿದೆ.
ಭಾಷಣ ಸ್ಪರ್ಧೆ (ಪ್ರೌಢ ) ಪ್ರಥಮ ಅರ್ಪಿತ. ಎ, ಸ.ಪ. ಪೂ. ಕಾಲೇಜು ಉಪ್ಪಿನಂಗಡಿ, ದ್ವಿತೀಯ ದರ್ಶಿನಿ ಎಂ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೃತಿಯ ಹಸ್ತ ಕೆ. ಪಿ ಸಂತವಿಕ್ಟ್ಟರನ ಬಾಲಿಕ ಶಾಲೆ, ಭಾಷಣ ಸ್ಪರ್ಧೆ (ಪ್ರಾಥಮಿಕ ) ಪ್ರಥಮ ಶ್ರೀ ಕೃಷ್ಣ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ದ್ವಿತೀಯ ಅಭಿನವ, ಪ್ರಿಯದರ್ಶಿನಿ ಶಾಲೆ ಬೆಟ್ಟಂಪಾಡಿ, ತೃತೀಯ ಪ್ರಾಪ್ತಿ, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ. ಪ್ರಬಂಧ ಸ್ಪರ್ಧೆ (ಪ್ರೌಢ ) ಪ್ರಥಮ ಅಪೂರ್ವ,ಸಂತ ವಿಕ್ಟರ ಬಾಲಿಕಾ ಶಾಲೆ, ದ್ವಿತೀಯ ಈಶಾನ್ವಿ ಪಿ,ಸುದಾನ ವಸತಿಯುತ ಶಾಲೆ, ತೃತೀಯ ಸಿಂಚನ, ಶಿವರಾಮ ಕಾರಂತ್ ಪ್ರೌಢಶಾಲೆ, ಪ್ರಬಂಧ ಸ್ಪರ್ಧೆ (ಪ್ರಾಥಮಿಕ ) ನಿಷ್ಮಿತಾ ವಿ, ಸ. ಹಿ. ಪ್ರಾ. ಶಾಲೆ ಪಾಪೆ ಮಜಲು, ದ್ವಿತೀಯ ತನ್ವಿ ಎಂ, ಸುದಾನ ವಸತಿಯುತ ಶಾಲೆ, ತೃತೀಯ ಕೀರ್ತಿ, ಸ. ಹಿ. ಪ್ರಾ. ಶಾಲೆ ಕಬಕ. ಚಿತ್ರಕಲೆ (ಪ್ರೌಢ ) ಪ್ರಥಮ ಹಂಶಿತಾ ರೈ, ಪ್ರಿಯದರ್ಶಿನಿ ಬೆಟ್ಟಂಪಾಡಿ, ದ್ವಿತೀಯ ಪೂಜಾ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೃತಿಯ ವಿಸ್ಮಯ ಬಿ.ವಿ, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ಚಿತ್ರಕಲಾ (ಪ್ರಾಥಮಿಕ ) ಪ್ರಥಮ ಚಿಂತನ ಎಂ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ ಸಾಯಿಶ್ವರಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೃತೀಯ ಶಿಶಿರ್ ಆಚಾರ್ಯ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.